

ಮಡಿಕೇರಿ: ಎಡಪಲಾ ಸ್ಫೋರ್ಟ್ಸ್ ಅಸೋಸಿಯೇಷನ್‌ರವರ ಆಶ್ರಯದಲ್ಲಿ ಎಡಪಲಾ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಆತಿಥೇಯ ತಂಡ ದೇಶಪ್ರೇಮಿ ಸ್ಫೋರ್ಟ್ಸ್ ಅಸೋಸಿಯೇಷನ್ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತು.
ಜಿದ್ದಾಜಿದ್ದಿನ ಫೈನಲ್ ಪಂದ್ಯದಲ್ಲಿ ದೇಶಪ್ರೇಮಿ ತಂಡವು ೧೭-೨೧ ಹಾಗೂ ೧೬-೨೧ ಅಂಕಗಳ ಎರಡು ನೇರ ಸೆಟ್‌ಗಳಿಂದ ಗೆದ್ದು ಚಾಂಪಿಯನ್ ಪ್ರಶಸ್ತಿಯನ್ನು ಅಲಂಕರಿಸಿತು. ದ್ವಿತೀಯ ಸ್ಥಾನಕ್ಕೆ ಡೆಕ್ಕನ್ ನಾಪೋಕ್ಲು ತಂಡ ತೃಪ್ತಿಪಟ್ಟುಕೊಂಡಿದೆ.
ಇದಕ್ಕೂ ಮೊದಲು ನಡೆದ ಸೆಮಿಫೈನಲ್ ಪಂದ್ಯವು ಗೌತಮ್ ಫ್ರೆಂಡ್ಸ್ ಮೂರ್ನಾಡು ತಂಡವನ್ನು ಡೆಕ್ಕನ್ ನಾಪೋಕ್ಲು ತಂಡ ಮಣಿಸಿ ಫೈನಲ್ ಪ್ರವೇಶಿಸಿತು. ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ದೇಶಪ್ರೇಮಿ ಸ್ಫೋರ್ಟ್ಸ್ ಅಸೋಸಿಯೇಷನ್ ಎಡಪಲಾ ತಂಡ ಗ್ರೀನ್ ಸ್ಟಾರ್ ಕರಿಕೆ ತಂಡವನ್ನು ಮಣಿಸಿ ಫೈನಲ್‌ಗೆ ಲಗ್ಗೆಯಿಟ್ಟಿತು.
ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಗ್ರೀನ್ ಸ್ಟಾರ್ ಕರಿಕೆ ತಂಡ ಗೌತಮ್ ಫ್ರೆಂಡ್ಸ್ ಮೂರ್ನಾಡು ತಂಡವನ್ನು ಮಣಿಸಿತು. ನಾಲ್ಕನೇ ಸ್ಥಾನಕ್ಕೆ ಗೌತಮ್ ಫ್ರೆಂಡ್ಸ್ ಮೂರ್ನಾಡು ತಂಡ ತೃಪ್ತಿಪಟ್ಟುಕೊಂಡಿತ್ತು.
ಪಂದ್ಯಾವಳಿಯ ಅಟೇಕರ್ ಪ್ರಶಸ್ತಿಯನ್ನು ದೇಶಪ್ರೇಮಿ ತಂಡದ ಯಹ್ಯಾ, ಬೆಸ್ಟ್ ಆಲ್ ರೌಂಡರ್ ದೇಶಪ್ರೇಮಿ ತಂಡದ ರಜಿತ್, ಉತ್ತಮ ಬ್ಲಾಕರ್ ಡೆಕ್ಕನ್ ತಂಡದ ಶರ್ಫುದ್ದೀನ್, ಬೆಸ್ಟ್ ಸೆಟ್ಟರ್ ಆದಿಲ್ ನಾಪೋಕ್ಲು, ಹಾಗೂ ಉತ್ತಮ ಲಿಬರೋ ಪ್ರಶಸ್ತಿಯನ್ನು ಅಮ್ಮಿ ಪಡೆದುಕೊಂಡಿತು.
ಸಮಾರೋಪ ಸಮಾರಂಭ: ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಎ.ಎಸ್.ಪೊನ್ನಣ್ಣ, ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತಿತೀರ ಧರ್ಮಜ ಉತ್ತಪ್ಪ, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್ ನಾಪೋಕ್ಲು, ಪ್ರಮುಖರಾದ ಅಬ್ದುಲ್ ಮಜೀದ್, ಕೌಶಿಕ್ ಕುಟ್ಟಯ್ಯ, ಬೊಳ್ಳಂಡ ಸರಿ, ಮೊಹಮ್ಮದ್ ಎಡಪಲಾ, ರಶೀದ್ ಕುಪ್ರೋಡಂಡ ಭಾಗವಹಿಸಿದ್ದರು. ತೀರ್ಪುಗಾರರಾಗಿ ಸಚಿನ್ ಹಾಗೂ ಟಿಲ್ಜೋ ಕಾರ್ಯನಿರ್ವಹಿಸಿದರು.