

ಹುಬ್ಬಳ್ಳಿ: ಇಲ್ಲಿನ ಉಣಕಲ್ಲ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಐ.ಜಿ. ಹಿರೇಗೌಡರ ಪದವಿ ಪೂರ್ವ ಕಾಲೇಜು ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ (ಪದವಿ ಪೂರ್ವ) ಇವರ ಸಂಯುಕ್ತ ಆಶ್ರಯದಲ್ಲಿ ಶನಿವಾರ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾವಳಿಯನ್ನು ತರಳಬಾಳು ಕ್ಯಾಂಪಸ್ ನಲ್ಲಿ ಏರ್ಪಡಿಸಲಾಗಿತ್ತು.
ಹುಬ್ಬಳ್ಳಿ ಶಹರ ಹಾಗೂ ಗ್ರಾಮೀಣ, ಧಾರವಾಡ ಶಹರ ಹಾಗೂ ಗ್ರಾಮೀಣ, ಕಲಘಟಗಿ, ಕುಂದಗೋಳ, ಅಣ್ಣಿಗೇರಿ, ನವಲಗುಂದ ತಾಲೂಕುಗಳಿಂದ ಬಾಲಕ/ಬಾಲಕಿಯರ ತಲಾ ಎಂಟು ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.
ಬಾಲಕಿಯರ ವಿಭಾಗದಲ್ಲಿ ಹುಬ್ಬಳ್ಳಿ ಗ್ರಾಮೀಣ ವಲಯದ ಬ್ಯಾಹಟ್ಟಿ ಸರ್ಕಾರಿ ಪದವಿ ಪೂರ್ವ ಕಾಲೇಜು, ಬಾಲಕರ ವಿಭಾಗದಲ್ಲಿ ಧಾರವಾಡ ಗ್ರಾಮೀಣ ವಲಯದ ಗರಗ ಬಾಲಕರ ತಂಡ ವಿಜೇತರಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿವೆ.
ಧಾರವಾಡ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಡಾ. ತೇಜಸ್ವಿನಿ ನಾರಾಯಣಕರ, ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಅವರು ಬೆಳಗ್ಗೆ ಪಂದ್ಯಾವಳಿಗೆ ಚಾಲನೆ ನೀಡಿದರು. ಪಾಲಿಕೆ ಸದಸ್ಯ ಉಮೇಶಗೌಡ ಕೌಜಗೇರಿ ಅವರು ಒಲಿಂಪಿಕ್ ಧ್ವಜಾರೋಹಣ ನೆರವೇರಿಸಿದರು.
ಕೊಕಾಟಿ ಪ್ರೌಢಶಾಲೆ ವಿದ್ಯಾರ್ಥಿಗಳು ಮಾರ್ಚ್ ಫಾಸ್ಟ್ ಸೆಲ್ಯೂಟ್ ಪಡೆದು ಗಮನ ಸೆಳೆದರು.
ಶಿವಕುಮಾರಗೌಡ ರಾಯನಗೌಡ್ರು, ಜಿಲ್ಲಾ ಕ್ರೀಡಾ ಸಂಯೋಜಕ ಐ.ಆರ್. ಹುಬ್ಬಳ್ಳಿ, ನಿವೃತ್ತ ಉಪನ್ಯಾಸಕ ಎಂ.ಐ. ಕಂಬಳಿ, ಶಂಕ್ರಣ್ಣ ಸಂಶಿ, ಶಿವಣ್ಣ ಹಂಗರಕಿ, ರವಿಕುಮಾರ ಬೀಸಗಲ್ಲ, ವಿಜಯಕುಮಾರ ಪಾಟೀಲ, ಎಸ್.ಎಂ. ಸೋಮನಗೌಡ್ರ, ಹನುಮಂತ ಅಂಬಿಗೇರ, ರಾಷ್ಟ್ರೀಯ ವಾಲಿಬಾಲ್ ಆಟಗಾರ್ತಿ ದೀಪಾ ಬೆಟದೂರ ಉಪಸ್ಥಿತರಿದ್ದರು.
ಕಾಲೇಜು ಸಲಹಾ ಸಮಿತಿ ಅಧ್ಯಕ್ಷ ಶಿವಾನಂದ ಹೆಬಸೂರ ಅಧ್ಯಕ್ಷತೆ ವಹಿಸಿದ್ದರು.
ಬಹುಮಾನ ವಿತರಣೆ:
ಸಂಜೆ ನಡೆದ ಅದ್ದೂರಿ ಸಮಾರಂಭದಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಗರಗ ಹಾಗೂ ಬ್ಯಾಹಟ್ಟಿ ಕಾಲೇಜಿನ ತಂಡಗಳಿಗೆ ಶಾಸಕ ಮಹೇಶ ಟೆಂಗಿನಕಾಯಿ ಬಹುಮಾನ ಹಾಗೂ ಪ್ರಮಾಣ ಪತ್ರ ವಿತರಣೆ ಮಾಡಿದರು.
ಪಾಲಿಕೆ ಸದಸ್ಯ ತಿಪ್ಪಣ್ಣ ಮಜ್ಜಗಿ, ಮಾಜಿ ಸದಸ್ಯ ಮಲ್ಲಿಕಾರ್ಜುನ ಹೊರಕೇರಿ, ರಮೇಶ ಮಹದೇವಪ್ಪನವರ, ಬಿ.ಎಲ್. ಸತ್ತೆನ್ನವರ, ಮಲ್ಲಿಕಾರ್ಜುನ ಮರಿಗೌಡ್ರ, ಕೆ.ಎಸ್. ನರಗುಂದ, ರಾಮಚಂದ್ರ ಹದಗಲ್ಲ ಇತರರು ಭಾಗಿಯಾಗಿದ್ದರು.
ನಿರ್ಣಾಯಕರಾಗಿ ಸತೀಶ ಪಾಟೀಲ, ನಾಗರಾಜ ದೊಡ್ಡಮನಿ, ಮಕ್ತುಮ್ ನದಾಫ್, ಪ್ರೇಮ್ ಕಂಡಪ್ಪನವರ, ವಿರೇಶ ಮೇಕಾರ, ಸುಭಾಸ ಪೂಜಾರ, ಬಸವರಾಜ ಮಾಂಗ, ಚಿದಾನಂದ ವಾಲಿಕಾರ, ವಿ.ಎನ್. ಪಾಟೀಲ, ಹನುಮಂತಪ್ಪ ಉಪ್ಪಾರ ಕಾರ್ಯ ನಿರ್ವಹಿಸಿದರು.