

ಮಡಿಕೇರಿ:
ಜಿಲ್ಲಾ ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾವಳಿ ಇತ್ತೀಚೆಗೆ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಿತು. ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್, ಯುವ ಸಬಲೀಕರಣ ಸಹಾಯಕ ನಿರ್ದೇಶಕಿ ವಿ.ಟಿ. ವಿಸ್ಮಯಿ, ಜನನಿ ಆರೋಗ್ಯ ಕೇಂದ್ರದ ಡಾ.ನವೀನ್ ಎಂ.ಎಸ್, ಡಾ ರಾಜೇಶ್ವರಿ ಬಿ.ಕೆ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಪುರುಷರ ವಿಭಾಗ ಸಿಂಗಲ್ಸ್ ನಲ್ಲಿ ಪಿ.ಎಲ್.ಮಂಜುನಾಥ್ ಪ್ರಥಮ, ಕೋರನ ಕುಮರೇಶ್ ರನ್ನರ್, ಪುರುಷರ ವಿಭಾಗ ಡಬ್ಬಲ್ಸ್ ನಲ್ಲಿ ಡೇರಿಕ್ ಹಾಗೂ ರಚನ್ ಪೊನ್ನಪ್ಪ ಪ್ರಥಮ, ಪಿ.ಎಲ್ ಮಂಜುನಾಥ್ ಹಾಗೂ ರಾಮ್ ಜೀವ್ ರನ್ನರ್, ಮಹಿಳೆಯರ ವಿಭಾಗ ಸಿಂಗಲ್ಸ್‌ನಲ್ಲಿ ನಮಿತಾ ಪೊನ್ನಪ್ಪ ಪ್ರಥಮ, ರೀನಾ ಅನಿಲ್ ರನ್ನರ್, ಮಹಿಳೆಯರ ವಿಭಾಗ ಡಬ್ಬಲ್ಸ್ ನಲ್ಲಿ ಸ್ವಾತಿ ತಂಗಮ್ಮ ಹಾಗೂ ನಮಿತ ಪೊನ್ನಪ್ಪ ಪ್ರಥಮ, ವಚನ್ ಎಂ.ಎಸ್ ಹಾಗೂ ಸಿಂಚನ ಎಂ.ಎ ರನ್ನರ್ಸ್, ವೆಟರನ್ಸ್ ಸಿಂಗಲ್‌ನಲ್ಲಿ ಬಿ.ಎಲ್ ಹರೀಶ್ ಪ್ರಥಮ, ಅಜರ್ ವಾಸಿಮ್ ರನ್ನರ್, ವೆಟರನ್ಸ್ ಡಬ್ಬಲ್ಸ್‌ನಲ್ಲಿ ರು ರಾಮ್ ಜೀವ್ ಹಾಗೂ ಬಿ.ಎಲ್ ಹರೀಶ್ ಪ್ರಥಮ, ಪ್ರವೀಣ್ ಹಾಗೂ ಆಸಿಫ್ ರನ್ನರ್ಸ್ ಸ್ಥಾನ ಗಳಿಸಿದರು.
ಮಹಿಳೆಯರ ವೆಟರನ್ಸ್ ವಿಭಾಗ ಸಿಂಗಲ್ಸ್ ನಲ್ಲಿ ಸ್ವಾತಿ ತಂಗಮ್ಮ ಪ್ರಥಮ, ಪುಷ್ಪ ಕಿರಣ್ ರನ್ನರ್, ೧೪ ವರ್ಷ ಒಳಗಿನ ಹುಡುಗರ ಸಿಂಗಲ್ಸ್ ವಿಭಾಗದಲ್ಲಿ ಲಿತಿಶ್ ಕೆ ಪ್ರಥಮ, ಐಜಾನ್ ವಾಸಿಮ್ ರನ್ನರ್, ೧೪ ವರ್ಷ ಒಳಗಿನ ಹುಡುಗಿಯರ ಸಿಂಗಲ್ಸ್ ವಿಭಾಗದಲ್ಲಿ ಸಿಂಚನ ಎಂ.ಎ. ಪ್ರಥಮ, ವಚನ್ ಎನ್.ಎಸ., ರನ್ನರ್ ,೧೮ ವರ್ಷ ಕೆಳಗಿನ ಹುಡುಗರ ಸಿಂಗಲ್ ವಿಭಾಗದಲ್ಲಿ ಸಹಾದ್ ಎಸ್ ಪ್ರಥಮ, ಪ್ರಜ್ವಲ್ ಎಚ್.ಎನ್, ರನ್ನರ್, ೧೮ ವರ್ಷದೊಳಗಿನ ಬಾಲಕಿಯರ ಸಿಂಗಲ್ಸ್ ವಿಭಾಗಲ್ಲಿ ಫಿದಾ ಕೆ.ಎಚ್. ಪ್ರಥಮ, ಖ್ಯಾತಿ ಕಾವೇರಮ್ಮ ರನ್ನರ್ ಪ್ರಶಸ್ತಿ ಗಳಿಸಿದರು.