ಮೂಲ ಸೌಕರ್ಯದಲ್ಲಿ ಭಾರತ ಅದ್ವಿತೀಯ ಸಾಧನೆ: ಪ್ರಾಧ್ಯಾಪಕ ಪ್ರೊ.ಡಿ.ದೇವರಾಜೇಗೌಡ ಅಭಿಮತ

District Level Speech Competition mandya
Published on

ಮಂಡ್ಯ: ಮೂಲ ಸೌಕರ್ಯದ ಜತೆಗೆ ಅಭಿವೃದ್ಧಿ ಪಥದಲ್ಲೂ ಭಾರತ ಅದ್ವಿತೀಯ ಸಾಧನೆ ಮಾಡಿದೆ. ಮಾತ್ರವಲ್ಲದೆ ತಾಂತ್ರಿಕ ಪ್ರಗತಿಗಳು ಸಹ ಮುಂಚೂಣಿಯಲ್ಲಿದ್ದೇವೆ. ಆ ತಾಂತ್ರಿಕ ಪ್ರಗತಿ ಹಾಗೂ ನಾವಿನ್ಯತೆಯಲ್ಲಿ ತಂತ್ರಜ್ಞಾನ, ಐಟಿಯಲ್ಲಿ ಬಾಹ್ಯಾಕಾಶ, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸಾಧನೆ ಮಾಡಿದ್ದೇವೆ ಎಂದು ತಿ.ನರಸೀಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಪ್ರೊ.ಡಿ.ದೇವರಾಜೇಗೌಡ ಅಭಿಪ್ರಾಯಿಸಿದರು.

ನಗರದ ನೆಹರು ಯುವ ಕೇಂದ್ರದ ಸಭಾಂಗಣದಲ್ಲಿ ನೆಹರು ಯುವ ಕೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ನನ್ನ ಭಾರತ-ವಿಕಸಿತ ಭಾರತ ಎಂಬ ವಿಷಯ ಕುರಿತ ಜಿಲ್ಲಾಮಟ್ಟದ ಭಾಷಣ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

ವಿಕಸಿತ ಭಾರತ ಅಭಿವೃದ್ಧಿಯ ಸುತ್ತಮುತ್ತಲ ಚರ್ಚೆ ಬಹುಮುಖ್ಯವಾಗಿದೆ. ಆರ್ಥಿಕ ಬೆಳವಣಿಗೆಗೆ ಭಾರತ ಸ್ಥಿರ ಆರ್ಥಿಕ ಮತ್ತು ಜಾಗತಿಕವಾಗಿ ಹೇಗೆಲ್ಲ ಸಾಧನೆ ಮಾಡಿ ಹೊರ ಹೊಮ್ಮುತ್ತಿದೆ. ಈ ಸ್ಥಾನಮಾನ ಅತಿದೊಡ್ಡ ಆರ್ಥಿಕತೆಯಲ್ಲಿ ಒಂದಾಗುತ್ತಿರುವ ಸಾಮರ್ಥ್ಯವನ್ನು ತೋರಿಸುತ್ತದೆ. ದೇಶದ ಎಲ್ಲ ನಿವಾಸಿಗಳಿಗೆ ಗುರಿಯನ್ನು ಹೊಂದಿರುವ ಆಧಾರ್, ಶಿಕ್ಷಣದಲ್ಲಿ ಸಾಧನೆ, ಬಡತನ ನಿವಾರಣೆಯಂತಹ ಸವಾಲುಗಳನ್ನೂ ಸಹ ಸಾಧಿಸಿದೆ ಎಂದು ಹೇಳಿದರು.

ಸಹಾಯಕ ಪ್ರಾಧ್ಯಾಪಕ ಐ.ಆರ್.ಮೂರ್ತಿ, ಕಾರ್ಮೆಲ್ ಕಾನ್ವೆಂಟ್‌ನ ಶಿಕ್ಷಕ ಕೆ.ಎಂ.ಕುಮಾರ್, ಯುವಜನ ಸೇವಾ ಹಾಗೂ ಕ್ರೆಡಾ ಇಲಾಖೆ ಕಚೇರಿಯ ಅಧೀಕ್ಷಕ ನಾಗಭೂಷಣ್, ನೆಹರು ಯುವ ಕೇಂದ್ರದ ಲೆಕ್ಕಾಧಿಕಾರಿ ಸಿ.ರವಿಚಂದ್ರನ್, ಜೆ.ಎಸ್.ಹರ್ಷನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net