ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯ; ಆದರ್ಶ್ ಅದ್ಕಲೇಗಾರ್-ನವೀನ್ ಡಿಸೋಜ, ಸುಬ್ರಮಣಿ ಚಾಂಪಿಯನ್ಸ್

22adarshkdga1
Published on


ಮಡಿಕೇರಿ: ಕೊಡಗು ಪ್ರೆಸ್ ಕ್ಲಬ್ ವತಿಯಿಂದ ಪ್ರೆಸ್ ಕ್ಲಬ್ ಸದಸ್ಯರಿಗೆ ಮಡಿಕೇರಿಯ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಡಬಲ್ಸ್‌ನಲ್ಲಿ ಆದರ್ಶ್ ಅದ್ಕಲೇಗಾರ್ ಮತ್ತು ನವೀನ್ ಡಿಸೋಜ ತಂಡ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತ್ತು.


ಇಸ್ಮಾಯಿಲ್ ಕಂಡಕೆರೆ ಮತ್ತು ಸುಬ್ರಮಣಿ ತಂಡ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತ್ತು. ಸಿಂಗಲ್ಸ್‌ನಲ್ಲಿ ಸುಬ್ರಮಣಿ ಚಾಂಪಿಯನ್ ಪಟ್ಟ ಅಲಂಕರಿಸಿದರೆ, ಆದರ್ಶ್ ಅದ್ಕಲೇಗಾರ್ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.
ಕ್ರೀಡಾಕೂಟದಲ್ಲಿ ಸಿಂಗಲ್ಸ್‌ನಲ್ಲಿ ೧೬ ಆಟಗಾರರು ಲೀಗ್ ಮಾದರಿಯ ಪಂದ್ಯದಲ್ಲಿ ಪ್ರಶಸ್ತಿಗಾಗಿ ಹಣಾಹಣಿ ನಡೆಸಿದರೆ, ಡಬಲ್ಸ್‌ನಲ್ಲಿ ೮ ತಂಡಗಳು ಪ್ರಶಸ್ತಿಗೆ ಸೆಣಸಾಟ ನಡೆಸಿತು. ೪ ವಿಭಾಗದಲ್ಲಿ ನಡೆದ ಸಿಂಗಲ್ಸ್‌ನ ಲೀಗ್‌ನಲ್ಲಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಪಡೆದ ೮ ಆಟಗಾರರು ಫ್ರೀಕ್ವಾರ್ಟರ್ ಫೈನಲ್ಸ್‌ಗೆ ಪ್ರವೇಶ ಪಡೆದರು.


ಮೊದಲ ಫ್ರೀಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಆದರ್ಶ್ ಅದ್ಕಲೇಗಾರ್ ೨೧-೭, ೨೧-೧೧ ನೇರ ಸೆಟ್‌ಗಳಿಂದ ಪ್ರಜ್ವಲ್‌ರನ್ನು ಮಣಿಸಿದರೆ, ಸುಬ್ರಮಣಿ ೨೧-೧೭, ೨೧-೭ ನೇರ ಸೆಟ್‌ಗಳಿಂದ ಇಸ್ಮಾಯಿಲ್ ಕಂಡಕೆರೆರನ್ನು ಮಣಿಸಿದರು. ಮತ್ತೊಂದು ಪಂದ್ಯದಲ್ಲಿ ನವೀನ್ ಡಿಸೋಜ ೨೧-೭, ೨೧-೭ ನೇರ ಸೆಟ್‌ಗಳಿಂದ ಅಜ್ಜಮಕ್ಕಡ ವಿನುಕುಶಾಲಪ್ಪರನ್ನು ಮಣಿಸಿದರೆ, ಕೆ.ಎಂ.ವಿನೋದ್ ೨೧-೪, ೨೧-೯ ನೇರ ಸೆಟ್‌ಗಳಿಂದ ಗೋಪಾಲ್ ಸೋಮಯ್ಯರನ್ನು ಸೋಲಿಸಿ, ಸೆಮಿಫೈನಲ್ ಪ್ರವೇಶ ಪಡೆದರು.


ಸೆಮಿಫೈನಲ್ಸ್‌ನಲ್ಲಿ ಆದರ್ಶ್ ಅದ್ಕಲೇಗಾರ್ ೨೧-೧೮, ೨೧-೧೨ ನೇರ ಸೆಟ್‌ಗಳಿಂದ ನವೀನ್ ಡಿಸೋಜರನ್ನು ಸೋಲಿಸಿದರು. ಮತ್ತೊಂದು ಪಂದ್ಯದಲ್ಲಿ ಸುಬ್ರಮಣಿರವರು ವಿನೋದ್‌ರನ್ನು ೨೧-೮, ೨೧-೬ ಸೆಟ್‌ಗಳಿಂದ ಮಣಿಸಿದರು. ಫೈನಲ್ ಪಂದ್ಯದಲ್ಲಿ ಸುಬ್ರಮಣಿರವರು ೨೧-೧೨, ೨೧-೧೬ ನೇರ ಸೆಟ್‌ಗಳಿಂದ ಮಣಿಸಿ ಚಾಂಪಿಯನ್ನಾಗಿ ಹೊರಹೊಮ್ಮಿದರು.


ಡಬಲ್ಸ್ ಫಲಿತಾಂಶ: ಆದರ್ಶ್ ಅದ್ಕಲೇಗಾರ್-ನವೀನ್ ಡಿಸೋಜ ತಂಡ ವಿನೋದ್-ಅಜ್ಜಮಕ್ಕಡ ವಿನುಕುಶಾಲಪ್ಪ ತಂಡವನ್ನು ೨೧-೧೨, ೨೧-೧೬ ನೇರ ಸೆಟ್‌ಗಳಿಂದ ಮಣಿಸಿತು. ಮತ್ತೊಂದು ಪಂದ್ಯದಲ್ಲಿ ಸುಬ್ರಮಣಿ-ಇಸ್ಮಾಯಿಲ್ ತಂಡ ರಾಕೇಶ್-ರಿಜ್ವಾನ್ ತಂಡವನ್ನು ೨೧-೧೩, ೨೧-೧೧ ಸೆಟ್‌ಗಳಿಂದ ಸೋಲಿಸಿದರು. ಫೈನಲ್ ಪಂದ್ಯದಲ್ಲಿ ಆದರ್ಶ್ ಅದ್ಕಲೇಗಾರ್-ನವೀನ್ ಡಿಸೋಜ ತಂಡ ಸುಬ್ರಮಣಿ-ಇಸ್ಮಾಯಿಲ್ ತಂಡವನ್ನು ೨೧-೧೩, ೨೧-೯ ಸೆಟ್‌ಗಳಿಂದ ಮಣಿಸಿ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತ್ತು.


ಬಹುಮಾನ ವಿತರಣೆ; ವಿಜೇತ ತಂಡಕ್ಕೆ ಆರ್ಕಷಕ ಟ್ರೋಫಿ ಮತ್ತು ನಗದು ನೀಡಿ ಗೌರವಿಸಲಾಯಿತು. ತೀಪುಗಾರರಾಗಿ ಸುಮೇಧಾ, ರಕ್ಷಾ ರಮೇಶ್, ಕೆ.ಎಂ.ಪ್ರತೀಕ್ಷಾ, ರುಶಿಲ್, ಬನೀತ್ ಬೋಜಣ್ಣ, ಹರ್ಷಿತಾ ಸತೀಶ್, ಎಚ್.ಎಸ್.ದೈವಿಕ್, ನಿಲೀಶಾ ಜೋಜೊ ಕಾರ್ಯನಿರ್ವಹಿಸಿದರು.


ಸಮಾರೋಪ ಸಮಾರಂಭ; ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪರವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಸಮಾಜ ಸೇವಕ ಹಾಗೂ ರಾಜಕಾರಣಿ ಶಿವಕುಮಾರ್ ನಾಣಯ್ಯ, ಅಂತರಾಷ್ಟ್ರೀಯ ಹಿರಿಯ ಶಟಲ್ ಬ್ಯಾಡ್ಮಿಂಟನ್ ಆಟಗಾರ್ತಿ ತಾತಪಂಡ ಜ್ಯೋತಿ ಸೋಮಯ್ಯ, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್.ಸವಿತಾ ರೈ, ಪ್ರಧಾನ ಕಾರ್ಯದರ್ಶಿ ಅನು ಕಾರ್ಯಪ್ಪ, ಪ್ರೆಸ್ ಕ್ಲಬ್ ಹಿರಿಯ ಉಪಾಧ್ಯಕ್ಷ ಸುಬ್ರಮಣಿ, ಕ್ರೀಡಾ ಸಂಚಾಲಕ ನವೀನ್ ಡಿಸೋಜ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net