

ಸುಳ್ಯ: ಶಾಲಾ ಶಿಕ್ಷಣ ಇಲಾಖೆ ಹಾಗೂ ಪಯಸ್ವಿನಿ ಅನುದಾನಿತ ಪ್ರೌಢಶಾಲೆ ಜಾಲ್ಸೂರು ಆಶ್ರಯದಲ್ಲಿ ಸುಳ್ಯ ತಾಲೂಕು ಮಟ್ಟದ ಪ್ರಾಥಮಿಕ ಶಾಲಾ ವಿಭಾಗದ ಯೋಗಾಸನ ಸ್ಪರ್ಧೆಯಲ್ಲಿ ಸಂತ ಜೋಸೆಫ್ ಹಿರಿಯ ಪ್ರಾಥಮಿಕ ಶಾಲೆ ಸುಳ್ಯದ ವಿದ್ಯಾರ್ಥಿಗಳಾದ 14 ವರ್ಷ ವಯೋಮಾನದ ಅಥ್ಲೆಟಿಕ್ಸ್ ಬಾಲಕಿಯರ ವಿಭಾಗದ ಯೋಗಾಸನ ಸ್ಪರ್ಧೆಯಲ್ಲಿ ಅವನಿ ಎಂ.ಎಸ್.ಸುಳ್ಯ ಪ್ರಥಮ, ಟ್ರೆಡಿಷನಲ್ ಯೋಗಸಾನ ವಿಭಾಗದಲ್ಲಿ ಹಾರ್ದಿಕಾ ಪ್ರಥಮ ಹಾಗೂ ಸೋನಾ ಆಡ್ಕಾರ್ ದ್ವಿತೀಯ ಸ್ಥಾನ ಪಡೆದು ಶಾಲಾ ಸಮಗ್ರ ಪ್ರಶಸ್ತಿಯೊಂದಿಗೆ ಜಿಲ್ಲಾಮಟ್ಟಕ್ಕೆ ಆಯ್ಕೆ ಆಗಿದ್ದಾರೆ. ಅವರು ಸಂತೋಷ್ ಮುಂಡಕಜೆ ಸುಳ್ಯ ಅವರಿಂದ ಯೋಗಾಸನ ತರಬೇತಿ ಪಡೆಯುತ್ತಿದ್ದಾರೆ.