

ಇಂಡಿ: ತಾಲೂಕು ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟದ 4X100 ಓಟದಲ್ಲಿ ಸಾಲೋಟಗಿ ಗ್ರಾಮದ ಶಿವಯೋಗೀಶ್ವರ ಪ್ರೌಢಶಾಲೆ ಹಾಗೂ ಭಾಗ್ಯಶ್ರೀ ಶಿವಯೋಗೀಶ್ವರ ಪ್ರೌಢಶಾಲೆ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಗಳಿಸಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವೈಯಕ್ತಿಕ ವಿಭಾಗದಲ್ಲಿ ಅಮೀರ ತಾಂಬೋಳಿ 200ಮೀ.ಓಟದಲ್ಲಿ ಪ್ರಥಮ, 400 ಮೀ.ಓಟದಲ್ಲಿ ಪ್ರಥಮ, ಎತ್ತರ ಜಿಗಿತದಲ್ಲಿ ಪ್ರಥಮ ಸ್ಥಾನಗಳಿಸಿ ಸಮಗ್ರ ವೀರಾಗ್ರಣಿ ಪ್ರಶಸ್ತಿಗೆ ಭಾಜನರಾಗಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಆಕಾಶ ಕೋಣಶಿರಸಗಿ 1500 ಮೀ.ಓಟದಲ್ಲಿ ದ್ವಿತೀಯ, ರೇಖಾ ಕಾಳಿ 200 ಮೀ.ಓಟದಲ್ಲಿ ಪ್ರಥಮ, ಅಲ್ತಮಾ ವಾಲಿಕಾರ ಎತ್ತರ ಜಿಗಿತದಲ್ಲಿ ಪ್ರಥಮ ಸ್ಥಾನಗಳಿಸಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳಿಗೆ ಜೆ.ಎಂ.ಕಡಣಿ ಮಾರ್ಗದರ್ಶನ ನೀಡಿದ್ದರು.
ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆ ಆಡಳಿತ ಮಂಡಳಿ, ಶಾಲೆ ಸಿಬ್ಬಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.