

ತಾವರಗೇರಾ: ಕುಷ್ಟಗಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ವಿಜ್ಞಾನ ವಿಚಾರ ಗೋಷ್ಠಿಯಲ್ಲಿ ಪಟ್ಟಣದ ಸರ್ ಎಂ.ವಿ. ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ಸಿದ್ಧಣ್ಣ ಬಾರಿ ಮರದಪ್ಪ ಕ್ವಾಂಟಮ್ ಯುಗದ ಆರಂಭ, ಸಾಮರ್ಥ್ಯಗಳು ಹಾಗೂ ಸವಾಲುಗಳು ವಿಷಯ ಕುರಿತು ಪ್ರಬಂಧ ಮಂಡಿಸಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.