

ರೇವತಗಾಂವ: ಸಮೀಪದ ಶಿರಾಡೋಣ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಕಾರ್ಯಕ್ರಮದಲ್ಲಿ ವಾಲಿಬಾಲ್ ಕ್ರೀಡಾಕೂಟದಲ್ಲಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು ಹಾಗೂ ದೈಹಿಕ ಶಿಕ್ಷಣ ಶಿಕ್ಷಕ ಗುರು ಜೇವೂರ ಅವರನ್ನು ಸನ್ಮಾನಿಸಲಾಯಿತು.
ಎಸ್‌ಡಿಎಂಸಿ ಅಧ್ಯಕ್ಷ ಮಹಾದೇವ ಮಲ್ಲಾಡೆ, ಉಪಾಧ್ಯಕ್ಷ ಪಾಂಡುರಂಗ ಬಗಲಿ, ಸದಸ್ಯ ಪ್ರಕಾಶ ತಳ್ಳೆಕರ, ಗ್ರಾಪಂ ಉಪಾಧ್ಯಕ್ಷ ಸುರೇಶ ಬನಸೋಡೆ, ಸದಸ್ಯರಾದ ಬೀರಪ್ಪ ಸೋಲಂಕರ, ಗಣಪತಿ ಪಾಂಡ್ರೆ, ಮಾಜಿ ಸದಸ್ಯ ಶಿವಾ ಪಾಂಡ್ರೆ, ಗ್ರಾಮದ ಯುವಕರಾದ ಕಾಶೀನಾಥ ಪಾಟೀಲ, ಸಂತೋಷ ಚೌಧರಿ, ಪರಮೇಶ್ವರ ಜತ್ತಿ, ಶಾಲೆ ಮುಖ್ಯಶಿಕ್ಷಕ ವಿಜಯಕುಮಾರ ಸಾತಪುತೆ ಇತರರಿದ್ದರು.