ಅಮೃತ ಭಾರತಿ ವಿದ್ಯಾರ್ಥಿಗಳಿಗೆ ಜಿಲ್ಲಾಮಟ್ಟದ ಬಹುಮಾನ

students
ಅಮೃತ ಭಾರತೀಯ ಸಾಧಕ ವಿದ್ಯಾರ್ಥಿಗಳು
Published on

ಹೆಬ್ರಿ: ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಆಯೋಜಿಸಿದ ಜಿಲ್ಲಾಮಟ್ಟದ ವಿಜ್ಞಾನ ಮೇಳದಲ್ಲಿ ಅಮೃತ ಭಾರತಿ ವಿದ್ಯಾಲಯ ಹೈಸ್ಕೂಲ್ ವಿಭಾಗದ ವಿದ್ಯಾರ್ಥಿಗಳು ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿ ಬಹುಮಾನ ಪಡೆದರು.

ಬಾಲ ವರ್ಗ ವೇದಗಣಿತ ರಸಪ್ರಶ್ನೆಯಲ್ಲಿ ಆತ್ರೇಯ ಹೆಬ್ಬಾರ್, ವಿನಾಯಕ ಪ್ರಭು, ಪ್ರೀತಮ್ ಎನ್.ರಾವ್ ಪ್ರಥಮ, ಇನ್ನೋವೆಟಿವ್ ಮಾಡೆಲ್ ಸ್ಪರ್ಧೆಯಲ್ಲಿ ಶ್ರವಂತ್, ವರ್ಷಿತ್, ಶ್ರೇಯಾ, ಸಾತ್ವಿಕ್ ತೃತೀಯ, ಅನೀಶ್, ಪ್ರಜೇಶ್ ವಾದಿರಾಜ ದ್ವಿತೀಯ, ವೇದ ಗಣಿತ ರಸಪ್ರಶ್ನೆ ಸ್ಪರ್ಧೆಯಲ್ಲಿ ಆಕಾಶ, ಆಶಿತಾ, ಪ್ರಿಯಾಂಕಾ ದ್ವಿತೀಯ, ಕಿಶೋರ್ ವರ್ಗದ ಜಿಲ್ಲಾಮಟ್ಟದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ ರಚಿತ, ಪೂರ್ವಿ, ಯತೀಶ್ ಪ್ರಥಮ ಸ್ಥಾನ ಪಡೆದರು.

ಗಣಿತ, ವಿಜ್ಞಾನ ಎಕ್ಸ್‌ಪರಿಮೆಂಟ್ ಮತ್ತು ಮಾಡೆಲ್ ಸ್ಪರ್ಧೆಯಲ್ಲಿ ಅನ್ವಿತಾ, ಏಂಜಲ್, ಪ್ರೀತಮ್ ಕೆ.ಪಿ. ಪ್ರಥಮ, ಸಂಸ್ಕೃತಿ ಜ್ಞಾನ ರಸಪ್ರಶ್ನೆಯಲ್ಲಿ ಸುರಭಿ, ಪುಷ್ಕರ್, ಪ್ರಣಮ್ಯ ಪ್ರಥಮ ಆಶುಭಾಷಣ ಸ್ಪರ್ಧೆಯಲ್ಲಿ ಲಾವಣ್ಯ ಪ್ರಥಮ ಸ್ಥಾನ ಪಡೆದರು.

ವಿದ್ಯಾ ಭಾರತಿ ಕರ್ನಾಟಕ ಪ್ರಾಂತದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಅಮೃತ ಭಾರತಿ ವಿದ್ಯಾಲಯದ ಲಾವಣ್ಯ ತೃತೀಯ ಸ್ಥಾನ ಪಡೆದಿದ್ದಾರೆ. ಪ್ರೀತಮ್ ಕೆ.ಪಿ. ಸೈನ್ಸ್ ಮಾಡೆಲ್ ಬೆಸ್ಡ್ ಆನ್ ಸೆನ್ಸರ್ ರಚಿಸಿ ಪ್ರಥಮ ಸ್ಥಾನ, ವಿದ್ಯಾಭಾರತಿ ಕ್ಷೇತ್ರ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ವಿದ್ಯಾಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನ್ ಆಯೋಜಿಸುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಸ್ಪರ್ಧಿಸಲು ಅರ್ಹತೆ ಪಡೆದರು. ವಿಜೇತರನ್ನು ಅಮೃತ ಭಾರತಿ ಟ್ರಸ್ಟ್ ಮತ್ತು ಬೋಧಕ ಬೋಧಕೇತರ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net