

ಮಂಡ್ಯ: ತಾಲೂಕಿನ ತೂಬಿನಕೆರೆ ಗ್ರಾಮದ ಅನ್ವೇಷಣೆ ಪಬ್ಲಿಕ್ ಶಾಲೆಯಲ್ಲಿ ವಿದ್ಯಾಭಾರತಿ ಕರ್ನಾಟಕ ಸಹಯೋಗದಲ್ಲಿ ಜಿಲ್ಲಾ ಮಟ್ಟದ ಗಣಿತ ವಿಜ್ಞಾನ ಮೇಳ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನ ಇಇಇ ವಿಭಾಗದ ಮುಖ್ಯಸ್ಥ ಪ್ರೊ.ಮಹೇಶ್‌ಕುಮಾರ್ ಮಾತನಾಡಿ, ವಿಜ್ಞಾನ ಮತ್ತು ಗಣಿತ ವಿಷಯವು ಪ್ರತಿಯೊಂದಕ್ಕೂ ಮೂಲವಾಗಿರುತ್ತದೆ. ಹೆಚ್ಚು ಜನ ಈ ವಿಷಯದಲ್ಲಿ ಪರಿಣಿತಿಯನ್ನು ಪಡೆಯಬೇಕು. ಅದಕ್ಕಾಗಿ ವ್ಯಾಸಂಗ ಮತ್ತು ಅಧ್ಯಯನ ಮಾಡಬೇಕು. ಜಿಲ್ಲಾಮಟ್ಟದಲ್ಲಿ ಆಯ್ಕೆಯಾದವರು ಸೆ.5, 6ರಂದು ಮೈಸೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ವಿಜ್ಞಾನ ಮತ್ತು ಗಣಿತ ಮೇಳದಲ್ಲಿ ಭಾಗವಹಿಸಲು ಅರ್ಹತೆ ಪಡೆಯುತ್ತಾರೆ. ನಂತರ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗುತ್ತಾರೆ ಎಂದು ಹೇಳಿದರು.
ವಿದ್ಯಾಭಾರತಿ ಕರ್ನಾಟಕದ ಜಿಲ್ಲಾ ಕಾರ್ಯದರ್ಶಿ ಎ.ಎಂ ನಟರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾಭಾರತಿ ಪ್ರಾಂತ ಕಾರ್ಯದರ್ಶಿ ಶ್ರೀಪತಿ, ಅನ್ವೇಷಣೆ ಸಂಸ್ಥೆಯ ವ್ಯವಸ್ಥಾಪನಾ ಟ್ರಸ್ಟಿ ಎ.ಅವಿನಾಶ್, ರಂಗನಾಥ್, ಪ್ರದೀಪ್ ದೀಕ್ಷಿತ್, ಶಿವಕುಮಾರ್, ಮುಖ್ಯಶಿಕ್ಷಕಿ ವೈ.ಎಚ್.ಸಂಪ್ರೀತಾ, ಜಿಲ್ಲಾ ವಿಜ್ಞಾನ ಪ್ರಮುಖ್ ರಾಘವಿ ಇತರರಿದ್ದರು.
ಜಿಲ್ಲೆಯ ವಿವಿಧೆಡೆಯಿಂದ ಏಳು ಶಾಲೆಯ ಮಕ್ಕಳು ಭಾಗವಹಿಸಿ ವಿಜ್ಞಾನ ಮತ್ತು ಗಣಿತ ವಿಷಯಗಳಲ್ಲಿನ ಮಾದರಿ ಪ್ರದರ್ಶನ, ರಸಪ್ರಶ್ನೆ, ಪಿಪಿಟಿ ಪ್ರಸೆಂಟೇಷನ್ ಹಾಗೂ ಪ್ರಯೋಗ ಪ್ರಸ್ತುತಪಡಿಸಿದರು. ಮನೋಹರ್, ನಂದಿನಿ ತೀರ್ಪುಗಾರರಾಗಿ ಕರ್ತವ್ಯ ನಿರ್ವಹಿಸಿದರು.