ಜು.20ರಂದು ನಗರದಲ್ಲಿ ಜಿಲ್ಲಾಮಟ್ಟದ ಗಾಳಿಪಟ ಸ್ಪರ್ಧೆ: ಭಾರತ ಸೇವಾದಳದಿಂದ ಆಯೋಜನೆ

kite
ಸಾಂದರ್ಭಿಕ ಚಿತ್ರ
Published on

ಮಂಡ್ಯ: ನಗರದ ಸರ್‌ಎಂವಿ ಕ್ರೀಡಾಂಗಣದಲ್ಲಿ ಜು.20ರಂದು ಭಾರತ ಸೇವಾದಳ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಡ್ಯ ಸೇಂಟ್ ಜಾನ್ಸ್ ಆಂಬುಲೆನ್ಸ್, ಚುಟುಕು ಸಾಹಿತ್ಯ ಪರಿಷತ್ ಸಹಯೋಗದಲ್ಲಿ 27ನೇ ವರ್ಷದ ಜಿಲ್ಲಾಮಟ್ಟದ ಗಾಳಿಪಟ ಹಾರಾಟ ಸ್ಪರ್ಧೆ ಆಯೋಜಿಸಲಾಗಿದೆ.

ಅಂದು ಬೆಳಗ್ಗೆ 10.30ಕ್ಕೆ ಸ್ಪರ್ಧೆ ಆರಂಭವಾಗಲಿದೆ. 1ರಿಂದ 7ನೇ ತರಗತಿವರೆಗೆ ಕಿರಿಯರ ವಿಭಾಗ, 8ರಿಂದ ದ್ವಿತೀಯ ಪಿಯುಸಿವರೆಗೆ ಹಿರಿಯರ ವಿಭಾಗ ಹಾಗೂ ಸಾರ್ವಜನಿಕರ ವಿಭಾಗದಲ್ಲಿ ಮುಕ್ತ ಪ್ರವೇಶವಿರಲಿದೆ. ಪ್ರತಿ ವಿಭಾಗದಲ್ಲಿಯೂ ಮೂರು ಹಾಗೂ ಅನೇಕ ಸಮಾಧಾನಕರ ಬಹುಮಾನ ಕೊಡಲಾಗುವುದು. ಈ ಬಾರಿ ಅತ್ಯುತ್ತಮ ಪಟಕ್ಕೆ ಮಾಜಿ ಸಚಿವ ಎಸ್.ಡಿ.ಜಯರಾಂ, ಡಾ.ಎಂ.ಎಚ್.ಅಂಬರೀಷ್, ಡಾ.ಕೆೆ.ಎಸ್.ನಾರಾಯಣಸ್ವಾಮಿ ಮತ್ತು ಡಾ.ವೈ.ಎಸ್.ರಾಮರಾವ್ ಹೆಸರಿನ ಪಾರಿತೋಷಕ ನೀಡಲಾಗುವುದು ಎಂದು ಭಾರತ ಸೇವಾದಳದ ಜಿಲ್ಲಾ ಕಾರ್ಯದರ್ಶಿ ಜಿ.ವಿ.ನಾಗರಾಜು ಮತ್ತು ಸಂಘಟಕ ಸಿ.ಎಸ್.ಗಣೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net