ಹೋರಾಟದ ಮನೋಭಾವ ಬೆಳೆಸುವ ಕ್ರೀಡೆ: ಮೇಲುಕೋಟೆ ಶಾಸಕ ದರ್ಶನ್ ಹೇಳಿಕೆ

District level Khokho sports meet Mandya
Published on

ಮಂಡ್ಯ: ಕ್ರೀಡೆ ಹೋರಾಟದ ಮನೋಭಾವವನ್ನು ಕಲಿಸುತ್ತದೆ. ಅಷ್ಟು ಬೇಗನೆ ಸೋಲೊಪ್ಪಿಕೊಳ್ಳಲು ಬಿಡುವುದಿಲ್ಲ. ಹಾಗೆಯೇ ಜೀವನದಲ್ಲೂ ಸಹ ಯಾವುದೇ ಕಾರಣಕ್ಕೂ ಸೋಲನ್ನು ಒಪ್ಪಿಕೊಳ್ಳದೆ ಹೋರಾಟದ ಮನೋಭಾವವನ್ನು ಎಲ್ಲರೂ ಸಹ ಬೆಳೆಸಿಕೊಳ್ಳಬೇಕಾಗಿದೆ ಎಂದು ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಸಲಹೆ ನೀಡಿದರು.

ತಾಲೂಕಿನ ಗೊರವಾಲೆ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಜಿಲ್ಲಾಮಟ್ಟದ ಖೋಖೋ ಕ್ರೀಡಾಕೂಟದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕ್ರೀಡೆಯಲ್ಲಿ ಸೋಲು ಗೆಲುವು ಸಾಮಾನ್ಯ. ಗೆದ್ದಂತಹ ತಂಡಗಳು ವಿಭಾಗ ಮಟ್ಟದಲ್ಲಿ ಮಂಡ್ಯ ಜಿಲ್ಲೆಯ ಕೀರ್ತಿಪತಾಕೆಯನ್ನು ಬೆಳಗಲಿ ಎಂದು ಹಾರೈಸಿದರು.

ಡಿಡಿಪಿಐ ಲೋಕೇಶ್, ಮಂಡ್ಯ ಉತ್ತರ ವಲಯ ಬಿಇಒ ಕೆ.ಟಿ.ಸೌಭಾಗ್ಯಾ, ತಾಲೂಕು ದೈಹಿಕ ಶಿಕ್ಷಣ ವಿಷಯ ಪರೀಕ್ಷಕ ಎಂ.ಎಸ್.ವಿಜಯ್‌ಕುಮಾರ್, ಪರಿಸರ ಮಿತ್ರ ಗೊರವಾಲೆ ಜಯಶಂಕರ್, ಮುಖಂಡರಾದ ಧನಂಜಯ, ಪ್ರಸನ್ನ, ದೈಹಿಕ ಶಿಕ್ಷಣ ಶಿಕ್ಷಕ ಕೆ.ಎಸ್.ರಾಮಸಂಜೀವಯ್ಯ ಇತರರಿದ್ದರು. ಕ್ರೀಡಾಕೂಟದಲ್ಲಿ 32 ತಂಡ ಭಾಗವಹಿಸಿದ್ದವು. ಬಹುಮಾನದ ಪ್ರಾಯೋಜಕತ್ವವನ್ನು ಉದ್ಯಮಿ ಜಿ.ಬಿ.ಸಂದೀಪ್ ಪಾಟೀಲ್ ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net