15ರಂದು ಜಿಲ್ಲಾಮಟ್ಟದ ಜುಡೋ ಆಯ್ಕೆ ಟ್ರಯಲ್ಸ್

11 ಎಸ್ಕೆಪಿ 5
ಸುದ್ದಿಗೋಷ್ಠಿ ಉದ್ದೇಶಿಸಿ ಧಾರವಾಡ ಗಿರೀಶ್ ಮಾತನಾಡಿದರು.
Published on

ಶಿಕಾರಿಪುರ: ಶಿರಾಳಕೊಪ್ಪದ ಒಳಾಂಗಣ ಕ್ರೀಡಾಂಗಣದಲ್ಲಿ ಜಿಲ್ಲಾಮಟ್ಟದ ಜುಡೋ ಸ್ಪರ್ಧೆಗೆ ಸೆ.15ರಂದು 14ರಿಂದ 17 ವರ್ಷದೊಳಗಿನ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ಏಕಲವ್ಯ ಕ್ಲಬ್ ಅಧ್ಯಕ್ಷ ಧಾರವಾಡ ಗಿರೀಶ್ ತಿಳಿಸಿದರು.

ಜಿಲ್ಲೆಯ ಎಲ್ಲಾ ತಾಲೂಕಿನ ಸರ್ಕಾರಿ, ಅನುದಾನಿತ, ಅನುದಾನ ರಹಿತ ಹಾಗೂ ವಸತಿ ಶಾಲೆಗಳ ಬಾಲಕ, ಬಾಲಕಿಯರು ಜುಡೋ ಸಮವಸ್ತ್ರ ಮತ್ತು ಅಗತ್ಯ ದಾಖಲೆಗಳ ಜತೆ ಅಂದು ಬೆಳಗ್ಗೆ 9 ಗಂಟೆಯೊಳಗೆ ವರದಿ ಮಾಡಿಕೊಳ್ಳಬೇಕು. ಶಾಲಾ ಶಿಕ್ಷಣ ಇಲಾಖೆ ಮತ್ತು ಏಕಲವ್ಯ ಜೂಡೋ ಕ್ಲಬ್ ಸಹಯೋಗದಲ್ಲಿ ಆಯ್ಕೆ ಪ್ರಕ್ರಿಯೆ ಏರ್ಪಡಿಸಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ತೀರ್ಪುಗಾರ ಡಿ.ಬಿ.ಮಿಥುನ್, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಅಂಜನಪ್ಪ, ತಾಲೂಕು ಅಧ್ಯಕ್ಷ ವಿರುಪಾಕ್ಷಪ್ಪ, ಕಾರ್ಯದರ್ಶಿ ಶಿವರಾಜ್, ಪಿ.ಎಲ್.ಸುರೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net