ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸಭೆ ಗ್ಯಾರಂಟಿ ಯೋಜನೆಗಳು ಸರ‍್ಪಕ ಅನುಷ್ಠಾನವಾಗಲಿ- ಅಧ್ಯಕ್ಷ ಪಾಮಯ್ಯ ಮುರಾರಿ ಹೇಳಿಕೆ

08rachu04
Published on

ರಾಯಚೂರು ರಾಜ್ಯ ರ‍್ಕಾರ ಸರ‍್ವಜನಿಕರಿಗಾಗಿ ಜಾರಿ ಮಾಡಿ ಪಂಚಾಗ್ಯಾರೆಂಟಿ ಯೋಜನೆಗಳನ್ನು ಅಧಿಕಾರಿಗಳು ಸಮಗ್ರವಾಗಿ ಅನುಷ್ಠಾನ ಮಾಡಬೇಕು ಎಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಪಾಮಯ್ಯ ಮುರಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯಿತಿಯ ಜಲ ನರ‍್ಮಲ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದಿಂದ ಪಂಚಾ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷೆ ವಹಿಸಿ ಮಾತನಾಡಿ, ಸಾರಿಗೆ ವ್ಯವಸ್ಥೆಯ ಬಗ್ಗೆ ಪರಿಶೀಲಿಸಿದ ಸದಸ್ಯರು, ಶಾಲಾ-ಕಾಲೇಜು ವಿದ್ಯರ‍್ಥಿಗಳು ಮತ್ತು ಸರ‍್ವಜನಿಕರ ಬೇಡಿಕೆಗಾನುಸಾರ ಮರ‍್ಗಗಳ ಹೊಂದಾಣಿಕೆ ಮಾಡಬೇಕು.

ಗೃಹಜ್ಯೋತಿ ಯೋಜನೆ ಪ್ರಗತಿ ಕುರಿತು ರ‍್ಚಿಸಲಾಯಿತು. ಜನತೆಗೆ ಈ ಯೋಜನೆಯ ಮಾಹಿತಿ ಕೊರತೆಯಿದ್ದು, ಜಾಗೃತಿ ಕರ‍್ಯಕ್ರಮ ನಡೆಸಬೇಕು. ಗೃಹಲಕ್ಷ್ಮಿಯ ಎಲ್ಲ ರ‍್ಹ ಫಲಾನುಭವಿಗಳಿಗೆ ಕಾಲಕಾಲಕ್ಕೆ ೨ ಸಾವಿರ ರೂ. ಜಮೆ ಮಾಡಬೇಕು. ತಾಂತ್ರಿಕ ತೊಂದರೆ ಕಂಡುಬಅದಲ್ಲಿ ಕೂಡಲೇ ಮೇಲಧಿಕಾರಿಗಳ ಗಮನಕ್ಕೆ ತಂದು ಹಂತಹಂತವಾಗಿ ಸರಿಪಡಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಯಿತು.

ಯುವನಿಧಿ ಯೋಜನೆಗೆ ವಿದ್ಯರ‍್ಥಿಗಳ ನೋಂದಣಿಗಾಗಿ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಅಭಿಯಾನ ಕೈಗೊಂಡು ನೋಂದಣಿ ಮಾಡಲಾಗುತ್ತಿದೆ ಎಂದು ಜಿಲ್ಲಾ ಉದ್ಯೋಗಾಧಿಕಾರಿ ನವೀನ್ ಕುಮಾರ ಅವರು ಸಭೆಗೆ ಮಾಹಿತಿ ನೀಡಿದರು.

ರ‍್ಕಾರ ಜಾರಿ ತಂದಿರುವ ಗ್ಯಾರಂಟಿ ಯೋಜನೆಗಳ ಸರ‍್ಪಕ ಅನುಷ್ಠಾನದಲ್ಲಿ ಸಮಿತಿಯ ಎಲ್ಲಾ ಸದಸ್ಯರ ಪಾತ್ರವು ಸಹ ಇದ್ದು ಯೋಜನೆಗಳ ಬಗ್ಗೆ ಸರ‍್ವಜನಿಕರಿಗೆ ಜಾಗೃತಿ ಮೂಡಿಸಬೇಕು. ಈ ಯೋಜನೆಗಳ ಅನುಷ್ಠಾನದಿಂದ ಸರ‍್ವಜನಿಕರಿಗೆ ಅನುಕೂಲವಾದ ಯಶೋಗಾಥೆಗಳ ಬಗ್ಗೆ ತಿಳಿಸಬೇಕೆಂದು ಸಲಹೆ ಮಾಡಿದರು.

ಈ ಸಂರ‍್ಭದಲ್ಲಿ ಪ್ರಾಧಿಕಾರದ ಜಿಲ್ಲಾಮಟ್ಟದ ಉಪಾಧ್ಯಕ್ಷ ನಾಗೇಂದ್ರ, ಗಫೂರ್ ಸಾಬ್, ಹನುಮಂತ ಜಾಲಿಬೇಂಚಿ, ಶೇಖರ್ ಗೌಡ ತುರುವಿಹಾಳ, ಸದಸ್ಯರಾದ ಎಚ್.ಪಿ ಬಸವರಾಜ ಬಿ, ಕೆ.ಅಮರೇಶ, ಪವನ ಪಾಟೀಲ್, ಲಕ್ಷ್ಮಣ ಜ್ಯೋತಿ, ಮಹೆಬೂಬ್ ಸಾಬ್, ವೆಂಕಟರಾವ್, ಜಾಫರ್ ಅಲಿ, ವೆಂಕಟೇಶ್, ಎಚ್.ಬಸವರಾಜ ಗೋನವಾರ, ಶೇಖರಪ್ಪ ಯಾದವ್, ನಜೀರ ಪಂಜಾಬಿ, ಜಿಲ್ಲಾ ಪಂಚಾಯತ್ ಯೋಜನಾ ನರ‍್ದೇಶಕ ಡಾ.ಟಿ.ರೋಣಿ,

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನರ‍್ದೇಶಕರಾದ ನವೀನ್ ಕುಮಾರ್, ಜಿಲ್ಲಾ ಅಗ್ರಗಣ್ಯ ಬ್ಯಾಂಕ್ ಮುಖ್ಯಸ್ಥರಾದ ಪಾಂಡಪ್ಪ ಲಂಬಾಣಿ, ಜೆಸ್ಕಾಂ ಇಲಾಖೆಯ ಚಂದ್ರಶೇಖರ ದೇಸಾಯಿ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಪ್ರಭಾರಿ ಉಪ ನರ‍್ದೇಶಕರಾದ ನಜಿರ್ ಅಹಮದ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net