

ಚಿತ್ರದುರ್ಗ: ನಗರದ ಬಾಪೂಜಿ ಸಮೂಹ ಸಂಸ್ಥೆಗಳ ಕೆಎಂಎಸ್ ಸ್ವತಂತ್ರ ಪಿಯು ಕಾಲೇಜಿನಲ್ಲಿ ಸಹಕಾರ ಇಲಾಖೆ, ರಾಜ್ಯ ಸಹಕಾರ ಮಹಾಮಂಡಳ ಹಾಗೂ ಜಿಲ್ಲಾ ಸಹಕಾರ ಯೂನಿಯನ್ ಸಹಯೋಗದಲ್ಲಿ ಸಹಕಾರ ವಿಷಯದ ಕುರಿತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರಬಂಧ ಹಾಗೂ ಪಿಯು ವಿದ್ಯಾರ್ಥಿಗಳಿಗೆ ಚರ್ಚಾ ಸ್ಪರ್ಧೆಗಳನ್ನು ಆ.16 ರಂದು ಏರ್ಪಡಿಸಲಾಗಿದೆ.
ಸಮಗ್ರ ಗ್ರಾಮೀಣ ಅಭಿವೃದ್ಧಿಯಲ್ಲಿ ಸಹಕಾರ ಚಳವಳಿಯ ಪಾತ್ರ ಸಹಕಾರ ವಿಷಯ ಅಳವಡಿಕೆ ಕುರಿತು ಪ್ರಬಂಧ ಹಾಗೂ ಶಾಲಾ ಕಾಲೇಜು ಪಠ್ಯದಲ್ಲಿ ಸಹಕಾರ ವಿಷಯ ಸೇರ್ಪಡೆ ಮತ್ತು ಸಹಕಾರಿ ವಿಶ್ವವಿದ್ಯಾಲಯಗಳ ಸ್ಥಾಪನೆಯಿಂದ ಮಾತ್ರವೇ ಸಹಕಾರಿ ವ್ಯವಸ್ಥೆ ಸದೃಢಗೊಳ್ಳಬಲ್ಲದು ಕುರಿತಂತೆ ಚರ್ಚಾ ಸ್ಪರ್ಧೆ ಇರಲಿದೆ ಎಂದು ಪ್ರಕಟಣೆ ತಿಳಿಸಿದೆ.
------------------