

ಭಟ್ಕಳ: ಜಮಾಅತೆ ಇಸ್ಲಾಮಿ ಹಿಂದ್ ಪಟ್ಟಣ ಶಾಖೆಯು ಪ್ರವಾದಿ ಮಹಮ್ಮದ್ ಪೈಗಂಬರ್ ಜನ್ಮ ದಿನಾಚರಣೆ ಅಂಗವಾಗಿ ಸೆ.28 ರಿಂದ ಅ.6ರವರೆಗೆ ಆಯೋಜಿಸಿರುವ ಸೀರತ್ ಅಭಿಯಾನ-2023 ಪ್ರಯುಕ್ತ ‘ಸಮಾನತೆಯ ಸಮಾಜದ ಶಿಲ್ಪಿ- ಪ್ರವಾದಿ ಮುಹಮ್ಮದ್’ ಎಂಬ ವಿಷಯದಲ್ಲಿ ಉತ್ತರ ಕನ್ನಡ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿದೆ.
ಪ್ರಬಂಧವು 500 ಪದಗಳಿಗೆ ಮೀರದಿರಲಿ. ವಿಜೇತರಿಗೆ ಪ್ರಥಮ ಬಹುಮಾನ 5000 ರೂ., ದ್ವಿತೀಯ 3000 ರೂ. ಮತ್ತು ತೃತೀಯ 2000 ರೂ. ಮತ್ತು ಪ್ರಮಾಣಪತ್ರ ನೀಡಲಾಗುವುದು. ಅಲ್ಲದೆ 5 ಸಮಾಧಾನಕರ ಬಹುಮಾನಗಳನ್ನು ನೀಡಲಾಗುವುದು.
ಇತ್ತೀಚಿನ ಭಾವಚಿತ್ರದೊಂದಿಗೆ ಪ್ರಬಂಧವನ್ನು ಸಂಚಾಲಕರು, ಸೀರತ್ ಪ್ರಬಂಧ ಸ್ಪರ್ಧೆ-2023, ದಾವತ್ ಘರ್ ಸುಲ್ತಾನ್ ಸ್ಟ್ರೀಟ್ ಭಟ್ಕಳ-581320 ಇಲ್ಲಿಗೆ ಸೆ.25ರ ಒಳಗೆ ಅಂಚೆ ಮೂಲಕ ಕಳುಹಿಸಿ ಕೊಡಬೇಕೆಂದು ಪ್ರಬಂಧ ಸ್ಪರ್ಧೆಯ ಸಂಚಾಲಕ ಎಂ.ಆರ್. ಮಾನ್ವಿ ತಿಳಿಸಿದ್ದಾರೆ