

ಮುಧೋಳ: ಜಿಲ್ಲೆಯ ಮೂರು ತಾಲ್ಲೂಕಿನಲ್ಲಿ ಪ್ರವಾಹ ಉಂಟಾಗಿದ್ದು ಜಿಲ್ಲಾಕಾರಿಗಳ ನೇತತ್ವದಲ್ಲಿ ಎಲ್ಲ ಅಕಾರಿಗಳು ಸಮರೋಪಾಯಲ್ಲಿ ಎದುರಿಸಿ ಯಾವೂದೇ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.
ಶನಿವಾರ ನಗರದ ಪೋಲಿಸ್ ಸಭಾಭವನದಲ್ಲಿ ಜಿಲ್ಲಾ ವಿಪತ್ತು ನಿವರ್ಹಣಾ ಸಭೆಯಲ್ಲಿ ಭಾಗಿಯಾಗಿ ಅವರು ಮಾತನಾಡಿದರು.ಬಾಗಲಕೋಟೆ ಜಿಲ್ಲೆಯಲ್ಲಿ ಘಟಪ್ರಭಾ ಮಲಪ್ರಭಾ ಹಾಗೂ ಕಷ್ಣಾ ನದಿಗಳು ಉಕ್ಕಿ ಹರಿಯುತ್ತಿದ್ದು ಈ ಕಾರಣಕ್ಕಾಗಿ ಜಿಲ್ಲೆಯ ಯಾವೂದೇ ತಾಲ್ಲೂಕಿನ ನದಿಪಾತ್ರದ ಜನರಿಗೆ ತೊಂದರೆಯಾಗಬಾರದೆಂದು ಈಗಾಗಲೆ ಹಲವಾರು ಸಭೆ ನಡೆಸಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು ಈಗ ದಿನದಿಂದ ದಿನಕ್ಕೆ ನೀರಿನ ಪ್ರಮಾಣ ಹೆಚ್ಚಾಗುತ್ತಿದ್ದು ಘಟಪ್ರಭಾ ನದಿಗೆ 81ಸಾವಿರ ಕ್ಯೂಸೆಕ್ಸ್ ಹಾಗೂ ಕಷ್ಣಾ ನದಿಗೆ 290 ಸಾವಿರ ಕ್ಯೂಸೆಕ್ಸ್ ನೀರನ್ನು ಬಿಡಲಾಗಿದ್ದು ಈ ನೀರಿನಿಂದ ಇಂದು ಮತ್ತು ನಾಳೆ ಜಿಲ್ಲೆಯ ಮೂರು ತಾಲ್ಲೂಕಿನ ಪರಿಸ್ಥಿತಿ ಯಾವೂದೇ ರೀತಿ ಇದ್ದರೂ ಎದುರಿಸಬೇಕಾಗುತ್ತದೆ ಈ ನಿಟ್ಟಿನಲ್ಲಿ ತಾಲ್ಲೂಕಾ ಮಟ್ಟದ ಅಕಾರಿಗಳು ಯಾವ ರೀತಿಯಲ್ಲಿ ಸಿದ್ದತೆಗೊಂಡಿದ್ದೀರಿ ಎಂಬುದು ಮುಖ್ಯವಾಗುತ್ತದೆ.
ಈಗಾಗಲೇ ಮುಧೋಳ ತಾಲ್ಲೂಕಿನ ಮಿರ್ಜಿಯಲ್ಲಿ ಆರು ಕುಟುಂಬಗಳ 32 ಜನರು ಹಾಗೂ 8 ಜಾನುವಾರಗಳನ್ನು ಕಾಳಜಿ ಕೇಂದ್ರದಲ್ಲಿ ವ್ಯವಸ್ಥೆ ಮಾಡಿದ್ದು ಜಮಖಂಡಿ ತಾಲ್ಲೂಕಿನಲ್ಲಿ ಮುತ್ತೂರಲ್ಲಿ 17 ಕುಟುಂಬಗಳ 105 ಜನರು ಹಾಗೂ 86 ಜಾನುವಾರಗಳನ್ನು ಸ್ಥಳಾಂತರಿಸಲಾಗಿದೆ.
ವಾಹದಲ್ಲಿ ಯಾವೂದೇ ರೀತಿಯಲ್ಲಿ ಬೇಕಾದ ಮೂಲ ಪರಿಕರಗಳು ಹಾಗೂ ವ್ಯವಸ್ಥೆಗೆ ಪ್ರತಿ ತಹಸೀಲ್ದಾರ ಖಾತೆಯಲ್ಲಿ ತಲಾ ಒಂದು ಕೋಟಿಯಂತೆ ಜಿಲ್ಲಾಕಾರಿಗಳ ಖಾತೆಯಲ್ಲಿ 15 ಕೋಟಿ ಸಹಿತ ಒಟ್ಟು 23 ಕೋಟಿ ಹಣ ಇದ್ದು ಯಾವೂದೇ ರೀತಿಯಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ.
ರಬಕವಿ ಬನಹಟ್ಟಿ ತಾಲ್ಲೂಕಿನ ನಂದಗಾಂವ,ಅವರಾದಿ,ಡವಳೇಶ್ವರ ಮುಧೋಳ ತಾಲ್ಲೂಕಿನ ಜೀರಗಾಳ, ಇಂಗಳಗಿ, ಜಂಬಗಿ, ಕಸಬಾಜಂಬಗಿ, ತಿಮ್ಮಾಪುರ,ಮಿರ್ಜಿ, ಜಾಲಿಬೇರ, ಆಳಗುಂಡಿ ಜಮಖಂಡಿ ತಾಲ್ಲೂಕಿನ ಟಕ್ಕೋಡ-ಟಕ್ಕಳಕಿ ಸೇತುವೆಗಳು ಮುಳುಗಡೆಯಾಗಿವೆ,ಈ ಸ್ಥಳದಲ್ಲಿ ಬ್ಯಾರಿಕೇಡ ಹಾಕಿ ಮುನ್ನಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ದನಕರುಗಳಿಗೆ ಮೇವಿನ ತೊಂದರೆಯಾಗಬಾರದೆಂದು ಈಗಾಗಲೇ ಹತ್ತು ಸಾವಿರ ಟನ್ ಮೇವುಗಳನ್ನು ಸಂಗ್ರಹ ಮಾಡಿಕೊಳ್ಳಲಾಗಿದೆ, ಜೊತೆಗೆ ಹೆಚ್ಚಿಗೆ ಬೇಕಾದ ಮೇವನ್ನು ಖರೀದಿಸಲು ನಮ್ಮ ಅಕಾರಿಗಳು ಮುಂದಾಗಿದ್ದಾರೆ. ಜಿಲ್ಲೆಯ ಅದರಲ್ಲೂ ಪ್ರವಾಹ ಭಾದೆಗೆ ಒಳಗಾದ ಮೂರು ತಾಲ್ಲೂಕಿಗೆ ಬೇಕಾದ ಮೇವು ಈಗಾಗಲೇ ಸಂಗ್ರಹ ಮಾಡಲಾಗಿದೆ, ನದಿ ದಡದ ಜನರಿಗೆ ಜಾನುವಾರಗಳಿಗೆ ಆಹಾರ ಮೇವು ನೀರು ಆರೋಗ್ಯದ ಸೇವೆಯಲ್ಲಿ ಕೊರತೆಯಾಗಬಾರದು, ಹಣಕಾಸಿನ ತೊಂದರೆ ಇಲ್ಲದ ಕಾರಣ ಜನರು ಭಯ ಪಡಬೇಕಾದ ಅವಶ್ಯಕತೆ ಇರುವುದಿಲ್ಲ.
ನದಿ ಪಾತ್ರದ ಜನರಿಗೆ ಕಾಳಜಿ ಕೇಂದ್ರದಲ್ಲಿ ಆಹಾರದ ಜೊತೆಗೆ ಸ್ವಚ್ಚತಾ ಕಾರ್ಯ ಮಾಡಿ ಮುಧೋಳ ತಾಲ್ಲೂಕಿನ ಮಿರ್ಜಿಯಲ್ಲಿ ಆಸ್ಪತ್ರೆಯಲ್ಲಿ ಕಾಳಜಿ ಕೇಂದ್ರಮಾಡಿದ್ದು ಕೂಡಲೆ ಬದಲಾವಣೆ ಮಾಡಿ ಅದನ್ನು ಸರ್ಕಾರಿ ಶಾಲೆಗೆ ಸ್ಥಳಾಂತರ ಮಾಡಿ ಇಲ್ಲದಿದ್ದರೂ ಸೂಕ್ತ ಕ್ರಮ ಕೈಗೊಳ್ಳಲಾಗುವುದು, ಆರೋಗ್ಯದ ಮುನ್ನಚ್ಚರಿಕಾ ಕ್ರಮವಾಗಿ ಅಂಬುಲೆನ್ಸ್ ಸೇವೆಗಳು ಹಾಗೂ ವೈದ್ಯಕೀಯ ಸೇವೆಯನ್ನು ತಾಲ್ಲೂಕಾ ಆರೋಗ್ಯ ಅಕಾರಿಗಳು ಕೈಗೊಂಡಿದ್ದು ತುರ್ತು ಪರಿಸ್ಥಿತಿಯಲ್ಲಿ ದಿನದ ಇಪ್ಪತ್ನಾಲ್ಕು ತಾಸುಗಳು ಆರೋಗ್ಯ ಸೇವೆ ಇರುತ್ತದೆ. ಯಾವೂದೇ ಸಂದರ್ಭದಲ್ಲಿ ಸುರಕ್ಷಿತ ಸ್ಥಳಕ್ಕೆ ತೆರಳಲು ಬೋಟ್ ಹಿಡಿದು ಎಲ್ಲ ಸೇವೆಗಳನ್ನು ಅಕಾರಿಗಳು ಪೂರೈಕೆ ಮಾಡಬೇಕು ಎಂದು ಹೇಳಿದರು.
ಇಂಹತ ಸಂದೀಗ್ದ ಸಭೆಗೆ ಗೈರು ಆದ ಅಕಾರಿಗಳ ವಿರುದ್ದ ಹಾಗೂ ಪ್ರವಾಹದಲ್ಲಿ ಲೋಪದೋಷ ಮಾಡಿ ಹಿಂಜರಿಕೆ ಮಾಡಿದರೆ ಸೂಕ್ತ ಕಠಿಣ ಕ್ರಮಕೈಗೊಳ್ಳಲಾಗುವುದು ಸರಿಯಾಗಿ ಮಾಹಿತಿ ನೀಡದ ಅಕಾರಿಗಳ ವಿರುದ್ದು ಸಚಿವರು ಆಕ್ರೋಶ ವ್ಯಕ್ತ ಪಡಿಸಿ ಸರಿ ಮಾಡಿಕೊಳ್ಳುವಂತೆ ಒಂಟಗೋಡಿ ಗ್ರಾಮದಲ್ಲಿರುವ ಮನೆಗಳಿಗೆ ಹಕ್ಕು ಪತ್ರ ನೀಡಲು ಸೂಚನೆ ನೀಡಿದರು ಎಂದು ಹೇಳಿದರು.
ಜಿಲ್ಲಾಕಾರಿ ಜಾನಕಿ ಕೆ.ಎಂ ಮಾತನಾಡಿ ಎಲ್ಲ ಅಕಾರಿಗಳು ಈ ಪ್ರವಾಹವನ್ನು ಸೂಕ್ತ ರೀತಿಯಲ್ಲಿ ಮುನ್ನೆಚ್ಚರಿಕೆ ವಹಿಸಿ ಯಾವೂದೇ ತೊಂದರೆಯಾಗದಂತೆ ಎದುರಿಸಿ ನಿಮ್ಮ ಜೊತೆಗೆ ನಾವಿದ್ದು ಯಾವೂದೇ ತುರ್ತು ಪರಿಸ್ಥಿತಿಯಲ್ಲಿ ನಮ್ಮನ್ನು ಸಂಪರ್ಕಿಸಿ 2019ರ ಸೂಚನೆಗಳನ್ನು ನೀತಿ ವಾಕ್ಯದಂತೆ ಪಾಲಿಸಿರಿ ಸಣ್ಣ ಲೋವನ್ನೂ ಸಹಿಸಲಾಗುವುದಿಲ್ಲ. ಯಾವೂದೇ ಕಾರಣಕ್ಕೂ ಆಡಳಿತ ವಿಪಲವಾಗಬಾರದು ಎಲ್ಲ ಅದಿಕಾರಿಗಳು ಕೇಂದ್ರ ಸ್ಥಾನ ಬಿಟ್ಟು ಅಲುಗಾಡಬಾರದು ಇಲ್ಲದಿದ್ದರೆ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲಾಗುವದು ಎಂದು ಹೇಳಿದರು.
.
ಸಭೆಯಲ್ಲಿ ಸಿಇಓ ಶಶಿದರ ಕುರೇರ,ಎಸ್.ಪಿ.ಅಮರನಾಥ ರಡ್ಡಿ, ಜಮಖಂಡಿ ಎ.ಸಿ ಶ್ವೇತಾ ಬೀಡಿಕರ,ಮುಧೋಳ ತಹಸೀಲ್ದಾರ ವಿನೋದ ಹತ್ತಳ್ಳಿ, ಸೇರಿದಂತೆ ಜಮಖಂಡಿ, ಬೀಳಗಿ, ರಬವಿ-ಬನಹಟ್ಟಿ, ಮುಧೋಳ, ಹುನಗುಂದ, ಗುಳೆದಗುಡ್ಡ ಸೇರಿದಂತೆ ಎಲ್ಲ ತಾಲ್ಲೂಕಾ ಹಾಗೂ ಜಿಲ್ಲಾ ಮಟ್ಟದ ಅಕಾರಿಗಳು ಇದ್ದರು.