ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆ *ಬೆಳೆ ಸಮೀಕ್ಷೆಯಲ್ಲಿ ತೊಂದರೆ ಆದರೆ ಅಮಾನತ್ತು ಎಚ್ಚರಿಕೆ-ಎಡಿಸಿ

raichur
raichur
Published on

ರಾಯಚೂರು ಜಿಲ್ಲೆಯಲ್ಲಿ ಕಳೆದ ವರ್ಷ ಬೆಳೆ ಸಮೀಕ್ಷೆಯಲ್ಲಿ ರೈತರಿಗೆ ತೊಂದರೆ ಹಿನ್ನಲೆಯಲ್ಲಿ ಗ್ರಾಪಂ ಪಿಡಿಒಗಳಿಗೆ ನೋಟಿಸ್ ನೀಡಲಾಗಿತ್ತು, ಈ ಭಾರಿ ಪಿಡಿಒಗಳು ಖದ್ದಾಗಿ ತೆರಳಿ ಬೆಳೆ ಸಮೀಕ್ಷೆ ಮಾಡದಿದ್ದರೆ ಅಮಾನತ್ತಿಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದೆಂದು ಎಡಿಸಿ ಶಿವಾನಂದ ಭಜಂತ್ರಿ ಅಧಿಕಾರಿಗಳಿಗೆ ಎಚ್ಚರಿಸಿದರು.

ನಗರದ ಜಿಲ್ಲಾಧಿಕಾರಿ ಭವನದಲ್ಲಿ ಸೋಮವಾರ ಬೆಳೆ ಅಂದಾಜು ಸಮೀಕ್ಷೆ, ಕೃಷಿ ಅಂಕಿ ಅಂಶಗಳ, ನಾಗರೀಕ ನೋಂದಣಿ ಪದ್ದತಿ, 11ನೇ ಕೃತಿ ಗಣತಿ 2ನೇ ಹಂತದ ಕುರಿತು ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬೆಳೆ ವಿಮೆಗಾಗಿ ರೈತರಿಂದ ದೂರುಗಳು ಹಾಗೂ ದೊಡ್ಡಮಟ್ಟದಲ್ಲಿ ಹೋರಾಟ ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ ಕಳೆದ ಬಾರಿ ಬೆಳೆ ಸಮಿಕ್ಷೆ ಸಮರ್ಪಕವಾಗಿ ಮಾಡದೇ ಇರುವುದರಿಂದ ಅಸಮರ್ಪಕ ಮಾಹಿತಿ ಮತ್ತು ಬೆಳೆ ಸಮೀಕ್ಷೆಯಲ್ಲಿ ನ್ಯೂನ್ಯತೆಗಳು ಕಂಡು ಬಂದಿವೆ. ಈ ಹಿಂದೆ ಕಳೆದ ವರ್ಷ ಅಸಮರ್ಪಕ ಬೆಳೆ ಸಮಿಕ್ಷೆ ಕುರಿತು ಪಿಡಿಒಗಳಿಗೆ ನೋಟೀಸ್ ನೀಡಲಾಗಿತ್ತು, ಈ ಭಾರಿಯೂ ಸರಿಯಾಗಿ ಸಮೀಕ್ಷೆ ಮಾಡದಿದ್ದರೆ, ಅಮಾನತಿಗೆ ಸರ್ಕಾರಕ್ಕೆ ವರದಿ ನೀಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಬೆಳೆ ಸಮೀಕ್ಷೆಯಲ್ಲಿ ಅಂದಾಜಿನಂತೆ ಮಾಡದೇ ಒಂದೇ ಜಮೀನಿನಲ್ಲಿ ಎರಡು ಬೆಳೆ ಹಾಗೂ ಬೇರೆ ಬೆಳೆ ಬೆಳೆದಿದ್ದರೆ ಮತ್ತೊಂದು ಬೆಳೆಯ ಹೆಸರು ನಮೋದಿಸಲಾಗಿತ್ತು, ಈ ಹಿಂದೆಯೂ ಸೇಬು ಬೆಳೆ ಹೆಸರು ನಮೂದಿಸಿದ್ದರಿಂದ ಪರಿಶೀಲಿಸಿ ಕ್ರಮ ವಹಿಸಲು ಸೂಚಿಸಲಾಗಿತ್ತು, ಅಧಿಕಾರಿಗಳ ತಪ್ಪಿನಿಂದ ನಾವು ಅದಕ್ಕೆ ಉತ್ತರ ನೀಡಬೇಕು,

ಈ ಬಾರಿ ಜಮೀನುಗಳಿಗೆ ತೆರಳಿ ಸರಿಯಾಗಿ ಮಾಡಬೇಕು, ಜಿಪಿಎಸ್ ಫೋಟೋ, ವಿಡಿಯೋ ಜೊತೆಗೆ ಸಮೀಕ್ಷೆ ಸಮಯದಲ್ಲಿ ರೈತರಿಗೆ ಹಾಗೂ ಇನ್ಸೂರೆನ್ಸ್ ಕಂಪನಿಗೆ ಮಾಹಿತಿ ನೀಡಬೇಕು ಎಂದರು.

ಬೆಳೆ ವಿಮೆಯಲ್ಲಿ ಶೇ.90 ರಷ್ಟು ಸರ್ಕಾರ, ಶೇ.10 ರಷ್ಟು ರೈತರ ಕಟ್ಟಿದ ಹಣ ಹೆಚ್ಚಾಗಿ ಇನ್ಸೂರೆನ್ಸ್ ಕಂಪನಿಗಳ ಲಾಭವಾಗುತ್ತದೆ, ಈ ಭಾರಿ ಸರಿಯಾಗಿ ಬೆಳೆ ಸಮೀಕ್ಷೆ ಮಾಡಬೇಕು. ಪಂಚಾಯತ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ, ಕೃಷಿ ಇಲಾಖೆ, ಕಂದಾಯ ಇಲಾಖೆ, ತೋಟಗಾರಿಗೆ ಇಲಾಖೆಯ ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಸಾಂಖ್ಯಿಕ ಇಲಾಖೆಯ ಅಧಿಕಾರಿ ತಪ್ಪಣ್ಣ ನಾಯಕ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಪ್ರಕಾಶ ಚೌಹಣ್, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಮಹ್ಮದ್ ಅಲಿ,ಕೃಷಿ ಇಲಾಖೆ ಸಹಾಯಕ ಅಧಿಕಾರಿ ದೀಪಾ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ಸುರೇಂದ್ರ ಬಾಬು ಸೇರಿ ಅನೇಕರು ಇದ್ದರು.

 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net