ಅನರಕ್ಷರಸ್ಥರಿಗೂ ಸಂವಿಧಾನ ತಿಳುವಳಿಕೆ ನೀಡುವುದು ಅಗತ್ಯ

udp-9-samvidhana
Published on

ಉಡುಪಿ: ಸಂವಿಧಾನದ ಕುರಿತ ತಿಳುವಳಿಕೆಯನ್ನು ಹೆಚ್ಚು ಪ್ರಚಾರ ಮಾಡಬೇಕು. ಅರಣ್ಯ, ಬೆಟ್ಟಗುಡ್ಡಗಳಲ್ಲಿರುವ ಅನಕ್ಷರಸ್ಥ ಜನರಿಗೂ ಸಂವಿಧಾನವನ್ನು ತಲುಪಿಸಬೇಕಾಗಿದೆ. ಅದು ಕೇವಲ ಪುಸ್ತಕ, ಭಾಷಣದಿಂದ ಮಾತ್ರ ಸಾಧ್ಯ ಇಲ್ಲ ಎಂದು ಕರ್ನಾಟಕ ಹೈಕೋರ್ಟ್​ ನಿವೃತ್ತ ನ್ಯಾಯಮೂರ್ತಿ ಎಚ್​.ಎನ್​.ನಾಗಮೋಹನ್​ದಾಸ್​ ಹೇಳಿದ್ದಾರೆ.

ಸಂವಿಧಾನ ಓದು ಅಭಿಯಾನ& ಕರ್ನಾಟಕ, ವಿಮಾ ನೌಕರರ ಸಂ ಉಡುಪಿ ವಿಭಾಗ ಹಾಗೂ ಸಮಾನ ಮನಸ್ಕ ಸಂಟನೆಗಳ ವತಿಯಿಂದ ನಡೆದ ಉಡುಪಿ ಜಿಲ್ಲಾ ಮಟ್ಟದ ಸಂವಿಧಾನ ಓದು ಅಧ್ಯಯನ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪುಸ್ತಕ ಓದುದರಿಂದ ವಿದ್ಯಾವಂತರಿಗೆ ಮಾತ್ರ ಸಂವಿಧಾನದ ವಿಚಾರಗಳು ತಿಳಿಯುತ್ತವೆ. ಗ್ರಾಮೀಣ ಪ್ರದೇಶದ ಅನರಕ್ಷರಸ್ಥ ಜನರಿಗೆ ತಾಳಮದ್ದಲೆ, ಯಕ್ಷಗಾನದಂತಹ ಎಲ್ಲ ರೀತಿಯ ಕಲಾಪ್ರಕಾರಗಳ ಮೂಲಕ ಸಂವಿಧಾನ ತಿಳಿಸುವ ಪ್ರಯತ್ನ ಮಾಡಬೇಕು ಎಂದರು. ಮುಖ್ಯ ಅತಿಥಿಯಾಗಿದ್ದ ಉದ್ಯಮಿ ಪ್ರಸಾದ್​ರಾಜ್​ ಕಾಂಚನ್​ ಮಾತನಾಡಿ, ಸಂವಿಧಾನದ ಪ್ರಕಾರ ಈ ದೇಶವನ್ನು ಮುನ್ನಡೆಸದಿದ್ದರೆ ಆರ್ಥಿಕ ಅಸಮಾನತೆ ಸೃಷ್ಠಿಯಾಗುತ್ತದೆ. ಬಡವರು ಬಡವರಾಗಿಯೇ ಉಳಿದು, ಶ್ರೀಮಂತರು ಇನ್ನಷ್ಟು ಶ್ರೀಮಂತರಾಗುತ್ತಾರೆ. ಪ್ರತಿಯೊಬ್ಬರೂ ಸಂವಿಧಾನ ಬದ್ಧವಾಗಿ ನಡೆದುಕೊಳ್ಳುವ ಮೂಲಕ ಭಾರತವನ್ನು ಇಡೀ ಜಗತ್ತಿನಲ್ಲಿಯೇ ಬಲಿಷ್ಠ ರಾಷ್ಟ್ರವನ್ನಾಗಿಸಬೇಕು ಎಂದು ಹೇಳಿದರು.

ವಿಮಾ ನೌಕರರ ಸಂದ ಹಿರಿಯ ಮುಖಂಡ ಪಿ.ವಿಶ್ವನಾಥ ರೈ ಮಾತನಾಡಿದರು.ಈ ಸಂದರ್ಭದಲ್ಲಿ ಶಿಬಿರದ ಭಾಗವಹಿಸಿದವರಿಗೆ ಪ್ರಮಾಣ ಪತ್ರವನ್ನು ನೀಡಲಾಯಿತು. ಉದ್ಯಮಿ ಯಾಸೀನ್​ ಮಲ್ಪೆ, ಉಡುಪಿ ವಿಮಾ ನೌಕರರ ಸಂದ ಅಧ್ಯಕ್ಷ ಪ್ರಭಾಕರ ಬಿ.ಕುಂದರ್​, ಸಿಐಟಿಯು ಮುಖಂಡ ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.ಉಡುಪಿ ದಲಿತ ಹಕ್ಕುಗಳ ಸಮಿತಿಯ ಸಂಚಾಲಕ ಸಂಜೀವ ಬಳ್ಕೂರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಉಡುಪಿ ವಿಮಾ ನೌಕರರ ಸಂದ ಪ್ರಧಾನ ಕಾರ್ಯದರ್ಶಿ ಕೆ.ವಿಶ್ವನಾಥ್​ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net