ಜಿಲ್ಲಾ ಮಟ್ಟದ ದೇಹದಾರ್ಢ್ಯ ಸ್ಪರ್ಧೆ 26ರಂದು

body builder
Published on

ಹುಬ್ಬಳ್ಳಿ: ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಧಾರವಾಡ ಡಿಸ್ಟ್ರಿಕ್ಟ್ ಬಾಡಿ ಬಿಲ್ಡರ್ಸ್ ಅಸೋಸಿಯೇಷನ್, ಮಿಸ್ಟರ್ ಹುಬ್ಬಳ್ಳಿ ರಾಹುಲ್ ಶೇರಖಾನ ಸಹಯೋಗದಲ್ಲಿ ನ. 26ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ ಇಲ್ಲಿನ ಅಕ್ಷಯ ಪಾರ್ಕ್ ಮುಖ್ಯದ್ವಾರ ಬಳಿಯ ಮೈದಾನದಲ್ಲಿ ಧಾರವಾಡ ಜಿಲ್ಲಾ ಮಟ್ಟದ ದೇಹದಾರ್ಢ್ಯ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಅಸೋಸಿಯೇಷನ್ ಖಜಾಂಚಿ ಕೃಷ್ಣ ಚಿಕ್ಕತುಂಬಳ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಪರ್ಧೆಯು 55 ಕೆಜಿಯಿಂದ 75 ಕೆಜಿವರೆಗೆ ಒಟ್ಟು ಆರು ವಿಭಾಗಗಳಲ್ಲಿ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಚಾಲನೆ ನೀಡುವರು. ಅತಿಥಿಗಳಾಗಿ ಶಾಸಕ ಪ್ರಸಾದ ಅಬ್ಬಯ್ಯ, ಪಾಲಿಕೆ ಸದಸ್ಯ ಚೇತನ ಹಿರೇಕೆರೂರ ಪಾಲ್ಗೊಳ್ಳುವರು. ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅನಿಲಕುಮಾರ ಪಾಟೀಲ ಅಧ್ಯಕ್ಷತೆ ವಹಿಸುವರು ಎಂದರು.

ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಶಸ್ತಿಗಳನ್ನು ನೀಡಲಾಗುವುದು. ಮಿಸ್ಟರ್ ಕರ್ನಾಟಕ ರಾಜ್ಯೋತ್ಸವ ಕಪ್-2023 ಟೈಟಲ್ ವಿನ್ನರ್​ಗೆ 10,000 ರೂ. ನಗದು, ಪ್ರಮಾಣಪತ್ರ, ಟ್ರೋಫಿ, ಮಿಸ್ಟರ್ ಕರ್ನಾಟಕ ರಾಜ್ಯೋತ್ಸವ ಕಪ್-2023 ರನ್ನರ್​ಅಪ್​ಗೆ 5000 ರೂ. ನಗದು, ಪ್ರಮಾಣಪತ್ರ, ಟ್ರೋಫಿ, ಮಿಸ್ಟರ್ ಕರ್ನಾಟಕ ರಾಜ್ಯೋತ್ಸವ ಕಪ್ ಬೆಸ್ಪ್ ಪೋಸರ್​ಗೆ 3000 ರೂ. ನಗದು, ಪ್ರಮಾಣ ಪತ್ರ, ಟ್ರೋಫಿ, ಮಿಸ್ಟರ್ ಕರ್ನಾಟಕ ರಾಜ್ಯೋತ್ಸವ ಕಪ್ 2023-ಟೀಂ ಚಾಂಪಿಯನ್​ಶಿಪ್​ಗೆ ಪ್ರಮಾಣಪತ್ರ ಹಾಗೂ ಟ್ರೋಫಿ ನೀಡಲಾಗುವುದು ಎಂದರು.

ಅಸೋಸಿಯೇಷನ್ ಅಧ್ಯಕ್ಷ ಎಂ.ಡಿ. ಸಲೀಂ ಗೌರ, ರಾಹುಲ್ ಶೇರಖಾನ, ಶಂಕರ ಪಿಳೈ, ಬಬ್ರುವಾಹನ ಗೌಡ, ಕುಶಾಲ ಮಾಲ್​ಶೇಟ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net