

ಮಡಿಕೇರಿ:
ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಪತ್ರಕರ್ತರು ಕಾರ್ಯನಿರ್ವಹಿಸಿದರೆ ಸಮಾಜದಲ್ಲಿ ಸಕರಾತ್ಮಕ ಬದಲಾವಣೆ ತರಲು ಸಾಧ್ಯವಿದೆ ಎಂದು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅಭಿಪ್ರಾಯಪಟ್ಟರು. ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ಭಾನುವಾರ ನಡೆದ ಪತ್ರರ್ತರಿಗೆ ವಾರ್ಷಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಾನವೀಯ ತುಡಿತಗಳಿಗೆ ಸ್ಪಂದಿಸುವ ಗುಣ ಪತ್ರಕರ್ತರು ಹೊಂದಿರಬೇಕು. ಮಾನವೀಯ ಸಂಬAಧಗಳನ್ನು ಬೆಸೆದುಕೊಂಡು ಕೆಲಸ ಮಾಡಬೇಕಾದ ಪರಿಸ್ಥಿತಿ ಇಂದಿನ ಕಾಲಘಟ್ಟದಲ್ಲಿ ಬಂದಿದೆ. ಸಮಾಜದ ಕಷ್ಟ-ಕಾರ್ಪಣ್ಯಗಳಿಗೆ ಮಿಡಿಯಬೇಕಾದರೆ ನಮ್ಮಲ್ಲಿ ಮಾನವೀಯ ಅಂತಃಕರಣ ಇದ್ದರೆ ಮಾತ್ರ ಸಾಧ್ಯ. ಕೇವಲ ವರದಿಗಾರಿಕೆ ಮಾತ್ರ ಪತ್ರಕರ್ತರ ಕೆಲಸವಲ್ಲ. ಜನರ ಕಣ್ಣೀರಿಗೆ ಸ್ಪಂದಿಸುವ, ಅನ್ಯಾಯಕ್ಕೆ ಒಳಗಾದವರಿಗೆ ಧ್ವನಿಯಾಗುವ ಅವಕಾಶ ಮಾಧ್ಯಮ ಕ್ಷೇತ್ರದಲ್ಲಿ ದುಡಿಯುವ ಪತ್ರಕರ್ತರಿಗಿದೆ. ಇದರ ಸದ್ಬಳಕೆ ಆಗಬೇಕು.
ಕೋವಿಡ್‌ನಿಂದ ಅನೇಕ ಪತ್ರಕರ್ತರು ಪ್ರಾಣ ಕಳೆದುಕೊಂಡರು. ಅವರ ಕುಟುಂಬಕ್ಕೆ ಸÀರ್ಕಾರದಿಂದ 5 ಲಕ್ಷ ರೂ. ಪರಿಹಾರ ಕೊಡಿಸುವ ಕೆಲಸ ಸಂಘಟನೆಯಿAದಾಗಿದೆ. ಇದರಿಂದ ಕುಟುಂಬಕ್ಕೆ ಅಪಾರ ಪ್ರಮಾಣದ ಸಹಾಯವಾಗಿರುವ ಉದಾಹರಣೆಗಳಿವೆ. 2018ರಲ್ಲಿ ಕೊಡಗಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಮನೆ ಕಳೆದುಕೊಂಡ ನಿರಾಶ್ರಿತ ಪತ್ರಕರ್ತರಿಗೂ ನೆರವು ನೀಡುವ ಕೆಲಸ ಸಂಘಟನೆಯಿAದ ಮಾಡಲಾಗಿದೆ. ಪತ್ರಕರ್ತರಿಗಾಗಿ ಸÀರ್ಕಾರದ ಯೋಜನೆಗಳು ಹಲವಷ್ಟಿವೆ. ಆದರೆ, ಅವುಗಳು ಪತ್ರಕರ್ತರ ಕೈಸೇರುತ್ತಿಲ್ಲ.
ಒಳ್ಳೆ ವರದಿ ಪತ್ರಕರ್ತರ ವಿಶ್ವಾಸರ್ಹತೆ ಹೆಚ್ಚು ಮಾಡುತ್ತದೆ. ಸಾಮಾನ್ಯ ಜನರು ಮಾಧ್ಯಮದ ಮೇಲೆ ವಿಶ್ವಾಸ ಕಳೆದುಕೊಂಡರೆ ಪತ್ರಕರ್ತರು ತಮ್ಮ ಅಸ್ತಿತ್ವ ಕಳೆದುಕೊಳ್ಳುತ್ತಾರೆ. ಈ ರೀತಿ ಆಗದಂತೆ ಎಚ್ಚರವಹಿಸಬೇಕು ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಸುಂಟಿಕೊಪ್ಪ ಗ್ರಾ.ಪಂ. ಸದಸ್ಯ ರಫೀಕ್ ಖಾನ್, ಪ್ರಜಾಪ್ರಭುತ್ವ ನಾಲ್ಕನೇ ಅಂಗ ಪತ್ರಿಕಾ ರಂಗವಾಗಿದ್ದು, ಇದರ ಮೇಲೆ ಜನ ನಂಬಿಕೆ ಇಟ್ಟಿದ್ದಾರೆ. ಪತ್ರಕರ್ತರೇ ಜನರಿಗೆ ಭರವಸೆಯ ಬೆಳಕು. ಮಾಧ್ಯಮದ ಸಮಾಜದ ಎಚ್ಚರಿಕೆ ಗಂಟೆಯಾಗಿದೆ. ಮಾಧ್ಯಮದಿಂದ ನ್ಯಾಯ ದೊರಕುತ್ತದೆ ಎಂಬ ನಂಬಿಕೆ ಜನರಿಗಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ನಿವೃತ್ತ ಶಿರಸ್ತೇದಾರ್ ಪ್ರಕಾಶ್ ಮಾತನಾಡಿ, ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ ಹಾದಿತಪ್ಪಿದರೆ ಸರಿದಾರಿಗೆ ತರುವ ಕೆಲಸ ಮಾಧ್ಯಮ ರಂಗದಿAದಾಗುತ್ತಿದೆ ಎಂದರು.
ಕಾರ್ಯಕ್ರಮ ಸಂಚಾಲಕಿ ಯಶೋಧ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್. ಸವಿತಾ ರೈ ಇದ್ದರು.
ಕಾರ್ಯಕ್ರಮದಲ್ಲಿ ವಿಜಯವಾಣಿ ಮಡಿಕೇರಿ ಹಿರಿಯ ವರದಿಗಾರ ಸುನಿಲ್ ಪೊನ್ನೇಟಿ ಉತ್ತಮ ತೋಟಗಾರಿಕಾ ವರದಿ. ಸೋಮವಾರಪೇಟೆ ತಾಲೂಕು ವರದಿಗಾರ ಹಿರಿಕರ ರವಿ ಉತ್ತಮ ಮಾನವೀಯ ವರದಿ ಪ್ರಶಸ್ತಿ ಪಡೆದುಕೊಂಡರು. ಉಳಿದಂತೆ ವಿವಿಧ ಪತ್ರಿಕೆ ಮತ್ತು ಸುದ್ದಿಮಾಧ್ಯಮಗಳ ವರದಿಗಾರರಾದ ಕಾಯಪಂಡ ಶಶಿ ಸೋಮಯ್ಯ, ಎ.ಎನ್.ವಾಸು, ಕೆ.ಬಿ. ದಿವಾಕರ್, ಎಂ.ಎನ್.ಚAದ್ರಮೋಹನ್, ಜಗದೀಶ್ ಜೋಡುಬೀಟಿ, ಅಣ್ಣೀರ ಹರೀಶ್ ಮಾದಪ್ಪ, ಹೆಚ್.ಕೆ. ಜಗದೀಶ್, ವಿಷ್ಮಾ ಪೆಮ್ಮಯ್ಯ, ವಿಶ್ವ ಕುಂಬೂರು, ಮಲ್ಲಿಕಾರ್ಜುನ, ಕೃಷ್ಣ ಸಿದ್ದಾಪುರ, ಉದಿಯಂಡ ಜಯಂತಿ ಮಂದಣ್ಣ, ರಂಗಸ್ವಾಮಿ ವಿವಿಧ ಪ್ರಶಸ್ತಿಗಳನ್ನು ಸ್ವೀಕರಿಸಿದರು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ನೂತನ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ, ಪಿಹೆಚ್ ಡಿ ಪದವಿ ಪಡೆದ ಡಾ. ಹೇಮಂತ್, ರಾಜ್ಯ ಪ್ರಶಸ್ತಿ ಪಡೆದ ಬಾಚರಣಿಯಂಡ ಅನುಕಾರ್ಯಪ್ಪ, ಸಣ್ಣುವಂಡ ಕಿಶೋರ್ ನಾಚಪ್ಪ, ಅಕ್ಷಯ್, ರಾಜ್ಯದ ಉತ್ತಮ ಸಂಘ ಪ್ರಶಸ್ತಿ ಪಡೆದ ಪೊನ್ನಂಪೇಟೆ ತಾಲೂಕು ಸಂಘದ ಪದಾಧಿಕಾರಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.