ರಾಷ್ಟ್ರೀಯ ಲೋಕ ಅದಾಲತ್​ ಮಾ.8ರಂದು

Published on

ಕೊಪ್ಪಳ: ಲೋಕ ಅದಾಲತ್​ನಿಂದ ಸಾಕಷ್ಟು ಪ್ರಕರಣಗಳನ್ನು ಇತ್ಯರ್ಥಪಡಿಸಲು ಸಹಕಾರಿಯಾಗಿದೆ. ಬರುವ ಮಾರ್ಚ್​ 8ರಂದು ರಾಷ್ಟ್ರೀಯ ಲೋಕ ಅದಾಲತ್​ ಇದ್ದು, ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ನ್ಯಾಯಾಧೀಶ ಮಹಾಂತೇಶ ಎಸ್​.ದರಗದ ಹೇಳಿದರು.

ರಾಜೀ ಸಂಧಾನ ಮೂಲಕ ಅನೇಕ ಪ್ರಕರಣಗಳನ್ನು ಪರಿಹರಿಸಿಕೊಳ್ಳಲು ಸಾಧ್ಯವಿದೆ. ಇದರಿಂದ ಸಮಯ ಉಳಿತಾಯವಾಗುವುದು. ಕದಾರರ ನಡುವೆ ಪರಸ್ಪರ ಪ್ರೀತಿ, ವಿಶ್ವಾಸ, ಸಂಬಂಧ ಉಳಿಯಲಿದೆ. ಹೀಗಾಗಿ ಪ್ರಾಧಿಕಾರ ಅದಾಲತ್​ಗೆ ಆದ್ಯತೆ ನೀಡುತ್ತಿದೆ. ಕಳೆದ ಅದಾಲತ್​ನಲ್ಲಿ 7,006 ಪ್ರಕರಣಗಳನ್ನು ಇತ್ಯರ್ಥಪಡಿಸುವ ಗುರಿ ಹಾಕಿಕೊಳ್ಳಲಾಗಿತ್ತು. ಅದರಲ್ಲಿ 5,340 ಪ್ರಕರಣಗಳನ್ನು ಪರಿಹರಿಸಲಾಗಿದೆ. ಹಿಂದಿಗಿಂತ ಕಳೆದ ಬಾರಿ ಹೆಚ್ಚು ಪ್ರಕರಣ ಪರಿಹರಿಸಿದ್ದು ಖುಷಿ ನೀಡಿದೆ. ಕದಾರರು, ವಕೀಲರು ಹಾಗೂ ಸಮೂಹ ಮಾಧ್ಯಮಗಳ ಸಹಕಾರದಿಂದ ಈ ಸಾಧನೆ ಸಾಧ್ಯವಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸದ್ಯ ಜಿಲ್ಲೆಯಲ್ಲಿ 32 ಸಾವಿರಕ್ಕೂ ಅಧಿಕ ಪ್ರಕರಣಗಳು ಬಾಕಿ ಇವೆ. 7 ಸಾವಿರಕ್ಕೂ ಅಧಿಕ ಪ್ರಕರಣಗಳನ್ನು ರಾಜೀ ಮಾಡಿಸುವ ಗುರಿ ಹಾಕಿಕೊಂಡಿದ್ದೇವೆ. ಆಸ್ತಿ ವಿಭಜನೆ, ಸಾಲ ಮರುಪಾವತಿ ಇನ್ನಿತರ ಪ್ರಕರಣಗಳಲ್ಲಿ ಮೇಲ್ನೋಟಕ್ಕೆ ತಪ್ಪು&ಸರಿ ಗೊತ್ತಾಗಲಿದೆ. ಆದರೂ ಜನ ಯಾರದೋ ಮಾತು ಕೇಳಿ ದಾವೆ ಹೂಡಿ ಸ್ನೇಹ, ಸಂಬಂಧ ಕೆಡಿಸಿಕೊಳ್ಳುತ್ತಾರೆ. ಅಂಥವರು ಸತ್ಯ ಅರಿತು ಒಪ್ಪಬೇಕು. ಹಣಕಾಸು ವ್ಯವಹಾರ ಪರಿಚಿತರೊಂದಿಗೆ ನಡೆದಿರುತ್ತದೆ. ಅದಾಲತ್​ನಲ್ಲಿ ಸಂಧಾನ ಮಾಡಿಕೊಂಡಲ್ಲಿ ಇಬ್ಬರ ಸ್ನೇಹ ಉಳಿಯುವುದು ಎಂದರು.

ವ್ಯಾಜ್ಯಪೂರ್ವ ಪ್ರಕರಣಗಳಲ್ಲೂ ಸಂಧಾನಕ್ಕೆ ಹೆಚ್ಚು ಅವಕಾಶ ಇರಲಿದೆ. ಅದಾಲತ್​ನಲ್ಲಿ ಪ್ರಕರಣ ಪರಿಹರಿಸಿಕೊಂಡಲ್ಲಿ ನ್ಯಾಯಾಲಯ ಶುಲ್ಕ ವಾಪಸ್​ ನೀಡಲಾಗುವುದು. ಕೋರ್ಟ್​ಗೆ ಅಲೆಯುವುದು ತಪ್ಪಲಿದೆ. ಇಬ್ಬರಿಗೂ ಒಪು$್ಪವಂಥ ಸಂಧಾನ ಏರ್ಪಡಿಸಲಾಗುವುದು. ವರ್ಷಾನುಗಟ್ಟಲೆ ಓಡಾಡುವ ಸಮಯ, ಮಾನಸಿಕ ಯಾತನೆ ತಪ್ಪಲಿದೆ ಎಂದು ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net