ಕೊಪ್ಪಳದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್​ ಸೇರಿದ ನಾಯಕರು

party joining in koppal congress bjp leaders mla hitnal
ಶಾಸಕ ರಾವೇಂದ್ರ ಹಿಟ್ನಾಳ, ಅಭ್ಯರ್ಥಿ ರಾಜಶೇಖರ ಹಿಟ್ನಾಳ, ಮಾಜಿ ಶಾಸಕ ಬಸವರಾಜ ಹಿಟ್ನಾಳ, ಜಿಪಂ ಮಾಜಿ ಅಧ್ಯಕ್ಷ ಎಸ್​.ಬಿ. ನಾಗರಳ್ಳಿ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸೈಯದ್​ ಜುಲ್ಲಾ ಖಾದ್ರಿ, ಎಪಿಎಂಸಿ ಮಾಜಿ ಅಧ್ಯಕ್ಷ ಹನಮರಡ್ಡಿ ಹಂಗನಕಟ್ಟಿ ಇದ್ದರು
Published on

ಕೊಪ್ಪಳ: ಚುನಾವಣೆ ಕಾವು ಏರುತ್ತಿದ್ದಂತೆ ಪಾಂತರ ಪರ್ವ ಶುರುವಾಗಿದೆ. ನಿತ್ಯ ಹಲವು ನಾಯಕರು ಬಿಜೆಪಿಯಿಂದ ಕಾಂಗ್ರೆಸ್​ಗೆ, ಕಾಂಗ್ರೆಸ್​ನಿಂದ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ. ಆದರೆ, ಬಿಜೆಪಿ ತೊರೆದು ಕಾಂಗ್ರೆಸ್​ ಸೇರುವವರ ಸಂಖ್ಯೆಯೇ ಅಧಿಕವಾಗಿದೆ.

ಬುಧವಾರವೂ ಶಾಸಕ ರಾವೇಂದ್ರ ಹಿಟ್ನಾಳ ನೇತೃತ್ವದಲ್ಲಿ ಮಾಜಿ ಶಾಸಕ ಎಂ.ಬಿ. ದಿವಟರ್​ ಸಹೋದರ ವೈಜನಾಥ ದಿವಟರ್​, ನಗರಸಭೆ ಮಾಜಿ ಸದಸ್ಯ ವೀರಣ್ಣ ಗಾಣಿಗೇರ, ಪಂಚಮಸಾಲಿ ಸಮುದಾಯ ಮುಖಂಡ ವಿರೂಪಾಕ್ಷಯ್ಯ ಗದಗಿನಮಠ, ವಿಜಯರೆಡ್ಡಿ ರಡ್ಡೇರ್​, ನಗರಸಭೆ ಮಾಜಿ ಅಧ್ಯಕ್ಷ ಮಂಜುನಾಥ ದಿವಟರ್​, ಪ್ರಶಾಂತ ರಾಯ್ಕರ್​, ನಗರಸಭೆ ಮಾಜಿ ಸದಸ್ಯರಾದ ವಿನೋದ ಪೂಜಾರ್​, ಮಲ್ಲಪ್ಪ ಮುರಡಿ, ಸಂಜೀವ್​ ದಾಸರ ಕೌಜಗೇರಿ, ಗುತ್ತಿಗೆದಾರ ಬಸವರಾಜ ಕೊಪ್ಪಳ, ಬಣಜಿಗ ಸಮುದಾಯ ಮುಖಂಡ ರೇಣುಕಾ ಪ್ರಸಾದ್​ ಕಾಟ್ರಳ್ಳಿ, ವಿರೇಶ ಬೆಣಕಲ್​, ಮಲ್ಲಿಕಾರ್ಜುನ ದಿವಟರ್​, ವೆಂಕಟೇಶ ದಾಸರ, ಬಸವರಾಜ ಮಂಡಪ್ಪನ್ನವರ್​ ಇತರರು ಕಾಂಗ್ರೆಸ್​ ಸೇರಿದರು.

ಶಾಸಕ ರಾವೇಂದ್ರ ಹಿಟ್ನಾಳ ಮಾತನಾಡಿ, ಐದು ಗ್ಯಾರಂಟಿ ಯೋಜನೆಗಳನ್ನು ಹಂತ ಹಂತವಾಗಿ ಅನುಷ್ಠಾನಗೊಳಿಸಲಾಗಿದೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯ ತಲುಪಿಸುವ ಕೆಲಸ ಮಾಡಿದ್ದೇವೆ. ಗ್ಯಾರಂಟಿ ಯೋಜನೆಗಳಿಂದ ಕೋಟ್ಯಂತರ ಬಡ ಕುಟುಂಬಗಳು ನೆಮ್ಮದಿ ಜೀವನ ನಡೆಸುತ್ತೇವೆ. ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲ ಜ್ವಲಂತ ಸಮಸ್ಯೆಗಳನ್ನು ಬರುವ ದಿನದಲ್ಲಿ ಪ್ರಮಾಣಿಕವಾಗಿ ಬಗೆಹರಿಸಿ, ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇವೆ. ಕಾಂಗ್ರೆಸ್​ ತತ್ವ&ಸಿದ್ಧಾಂತ ಮೆಚ್ಚಿ ಬಿಜೆಪಿ ತೊರೆದು ಕಾಂಗ್ರೆಸ್​ ಸೇರಿದ ಎಲ್ಲರನ್ನೂ ಗೌರವಯುತವಾಗಿ ನಡೆಸಿಕೊಳ್ಳುತ್ತೇವೆ ಎಂದರು.

ಕಾಂಗ್ರೆಸ್​ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಮಾತನಾಡಿ, ಕಾಂಗ್ರೆಸ್​ ಪಕ್ಷಕ್ಕೆ ಚುನಾವಣೆಯಲ್ಲಿ ಹಿನ್ನಡೆ ಆಗಲಿ ಎನ್ನುವ ಉದ್ದೇಶದಿಂದ ಪಕ್ಷದ ಖಾತೆಗಳನ್ನು ಸೀಜ್​ ಮಾಡಿಸಲಾಗಿದೆ. ದಬ್ಬಾಳಿಕೆಯ ಮೂಲಕ ಹತ್ತಿಕ್ಕುವ ಯತ್ನ ನಡೆದಿದೆ. ಆದರೂ ಕೂಡ ಕಾಂಗ್ರೆಸ್​ ಪಕ್ಷದ ಶಕ್ತಿ ನಿತ್ಯವೂ ವೃದ್ಧಿಯಾಗುತ್ತಿದೆ. ಬಿಜೆಪಿ, ಜೆಡಿಎಸ್​ ತೊರೆದು ಅನೇಕ ಮುಖಂಡರು, ಕಾರ್ಯಕರ್ತರು ಕಾಂಗ್ರೆಸ್​ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ ಎಂದರು.

ಮಾಜಿ ಶಾಸಕ ಬಸವರಾಜ ಹಿಟ್ನಾಳ, ಜಿಪಂ ಮಾಜಿ ಅಧ್ಯಕ್ಷ ಎಸ್​.ಬಿ. ನಾಗರಳ್ಳಿ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸೈಯದ್​ ಜುಲ್ಲಾ ಖಾದ್ರಿ, ಎಪಿಎಂಸಿ ಮಾಜಿ ಅಧ್ಯಕ್ಷ ಹನಮರಡ್ಡಿ ಹಂಗನಕಟ್ಟಿ, ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷರಾದ ಕೃಷ್ಣಾರಡ್ಡಿ ಗಲಬಿ, ಎಂ.ಕಾಟನ್​ ಪಾಷಾ,ಪ್ರಮುಖರಾದ ಪ್ರಸನ್ನ ಗಡಾದ, ತೋಟಪ್ಪ ಕಾಮನೂರು, ರಾಜಶೇಖರ ಆಡೂರು, ಅಮರೇಶ ಉಪಲಾಪುರ ಇತರರಿದ್ದರು.

ಹುಲಿಗಿಯಲ್ಲಿ ಸೇರ್ಪಡೆ: ಹುಲಿಗಿಯಲ್ಲಿ ತಾಪಂ ಮಾಜಿ ಸದಸ್ಯ, ಬಿಜೆಪಿ ಮುಖಂಡ ಪಾಲಾಕ್ಷಪ್ಪ ಗುಂಗಾಡಿ, ಹುಲಿಗಿ ಗ್ರಾಪಂ ಅಧ್ಯಕ್ಷೆ ನೀಲಮ್ಮ ಸಿದ್ದಪ್ಪ ಗುಂಗಾಡಿ, ಉಪಾಧ್ಯಕ್ಷ ನ್ಯಾಮತ್​ ಅಲಿ, ಕೊಟ್ರಯ್ಯ ಹಿರೇಮಠ, ಶರವಯ್ಯ ಸ್ವಾಮಿ, ತಿಮ್ಮನಗೌಡ, ಮಂಜುನಾಥ ನಾಯಕ, ಮಂಜುನಾಥ ಈಡಿಗರು, ಯೋಗಿಶ್​ ಈಡಿಗೇರ, ರವಿ ರಾಮಸ್ವಾಮಿ, ನಿಂಗಪ್ಪ ಬುಡಶೆಟ್ನಾಳ, ಮಂಜುನಾಥ ಮಾಳೆಕೊಪ್ಪ, ವಿಶ್ವನಾಥ ಹುಲಿಗಿ ಬಿಜೆಪಿ ಬಿಟ್ಟು ಕಾಂಗ್ರೆಸ್​ ಸೇರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net