

ಕೊಪ್ಪಳ: ಯಾವುದೇ ಅಭಿವೃದ್ಧಿ ಕೆಲಸ ಮಾಡಲು ಇಚ್ಛಾಶಕ್ತಿ ಮುಖ್ಯ. ಕೆಂಪೇಗೌಡರ ಆ ಗುಣ ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.
ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ನಲ್ಲಿ ಗುರುವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸತಿ ಇಲಾಖೆಯಿಂದ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬೆಂಗಳೂರು ನಿಮಾತೃ ಕೆಂಪೇಗೌಡ. ಅವರ ದೂರ ದೃಷ್ಠಿ, ಅಭಿವೃದ್ಧಿ ಬಗ್ಗೆ ಇದ್ದ ಇಚ್ಛಾಶಕ್ತಿ, ಸೇವಾ ಮನೋಭಾವ ಇತರರಿಗೆ ಮಾದರಿ. ನಮ್ಮ ರಾಜ್ಯ ರಾಜಧಾನಿ ಬೆಂಗಳೂರು ಜಾಗತಿಕ ಮಟ್ಟದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ, ಶಿಕ್ಷಣ, ಜೀವನ ಶೈಲಿ ಮುಂತಾದ ವಿಷಯಗಳಲ್ಲಿ ಗುರುತಿಸಿಕೊಂಡಿದೆ. ಇದಕ್ಕೆ ಮೂಲ ಕಾರಣ ಕೆಂಪೇಗೌಡ. ಅವರ ವ್ಯವಸ್ಥಿತ ನಗರ ನಿಮಾರ್ಣ ಕುರಿತ ಯೋಚನೆಗಳು. ವಿದ್ಯಾರ್ಥಿ ಜೀವನದಲ್ಲೇ ಮಹನೀಯರ ಕುರಿತು ಅರಿಯಬೇಕು. ಅವರ ಸಾಧನೆಯನ್ನು ಪ್ರೇರಣೆಯನ್ನಾಗಿ ಪಡೆಯಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಸಾವಿತ್ರಿ ಕಡಿ ಮಾತನಾಡಿ, ನಮ್ಮಿಂದ 400 ಕಿ.ಮೀ. ದೂರ ಇರುವ ಬೆಂಗಳೂರಿನ ಬಗ್ಗೆ ನಾವೆಲ್ಲ ಆಕರ್ಷಿತರಾಗಿದ್ದೇವೆ. ಅದರಂತೆ ನಮ್ಮ ಜಿಲ್ಲೆ, ಚರಿತ್ರೆ, ಇತಿಹಾಸ ಅರಿಯಬೇಕು. ಕೊಪ್ಪಳದಲ್ಲೂ ಅನೇಕ ಐತಿಹಾಸಿಕ, ಚಾರಿತ್ರಿಕ ಹಿನ್ನೆಲೆ ಇರುವ ಸ್ಥಳ, ಟನೆಗಳು ನಡೆದಿವೆ. ಕೆಂಪೇಗೌಡರನ್ನು ನಮ್ಮ ವಿಜಯನಗರ ಅರಸರು ಬಂಧಿಸಿಟ್ಟಿದ್ದ ಸೆರೆಮನೆ ಆನೆಗೊಂದಿ ಭಾಗದಲ್ಲಿದೆ ಎಂದು ಓದಿದ ನೆನಪಿದೆ. ಮಕ್ಕಳಿಗೆ ಮೊದಲು ನಮ್ಮ ಜಿಲ್ಲೆ ಪ್ರವಾಸ ಮಾಡಿಸಿಬೇಕು ಎಂದರು.
ಗವಿಸಿದ್ದೇಶ್ವರ ಪಿಯು ಕಾಲೇಜು ಕನ್ನಡ ಉಪನ್ಯಾಸಕ ಸಿದ್ದಲಿಂಗಪ್ಪ ಕೊಟ್ನೇಕಲ್ ಕೆಂಪೇಗೌಡರ ಕುರಿತು ಉಪನ್ಯಾಸ ನೀಡಿದರು. ಜಿಲ್ಲಾ ತರಬೇತಿ ಕೇಂದ್ರದ ಪ್ರಾಚಾರ್ಯ ಕೃಷ್ಣಮೂರ್ತಿ ದೇಸಾಯಿ, ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಳ್ಳಿ, ನಗರಸಭೆ ಸದಸ್ಯ ಮುತ್ತುರಾಜ ಕುಷ್ಟಗಿ, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿ ಇದ್ದರು.
ಉಪಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಆಚರಣೆ
ನಗರದ ಉಪಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಗುರುವಾರ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಿಸಲಾಯಿತು.
ಕೇಂದ್ರದ ಕ್ಯೂರೇಟರ್ ಮೈಲಾರಪ್ಪ ಮಾತನಾಡಿ, ಬೆಂಗಳೂರು ನಿಮಾರ್ತೃ ಕೆಂಪೇಗೌಡ ತಮ್ಮ ಕೆಲಸದಿಂದ ನಾಡಿನ ಮನೆ ಮಾತಾಗಿದ್ದಾರೆ. ಬೃಹತ್ ನಗರವನ್ನು ಮುಮದಾಲೋಚನೆಯಿಂದ ಕಟ್ಟಿದ್ದು ಸಾಮಾನ್ಯ ಕೆಲಸವಲ್ಲ. ಅವರ ಕಾರ್ಯ ಎಲ್ಲರಿಗೂ ಮಾದರಿ ಎಂದರು.
ಕೇಂದ್ರದ ಶಿಕ್ಷಣ ಸಹಾಯಕ ಫಕೀರಸಾಬ್, ತಾಂತ್ರಿಕ ಸಹಾಯಕ ಮಹಾಲಿಂಗಪ್ಪ, ತಂತ್ರಜ್ಞ ಶಂಕ್ರಪ್ಪ, ನಿಯೋಜಿತ ಸಿಬ್ಬಂದಿ ಫಯಾಜುದ್ದೀನ್, ಗೋಪಾಲರಾವ್, ರುಕ್ಮೀಣಿ, ಭೂವಿಜ್ಞಾನಿ ನಬೀರ್ ಅಸುಲ್, ನೀರಿನ ಮಾದರಿಗಳ ಸಂಗ್ರಹಕೋಶ ಉಸ್ತುವಾರಿ ಅರ್ಜುನ್, ನೀರಿನ ಮಾದರಿ ಸಂಗ್ರಹಗಾರ ಭಾಷಾಸಾಬ್ ಇತರರಿದ್ದರು.