ಸ್ವಚ್ಛತೆ ಬಗ್ಗೆ ಜಾಗ್ರತೆ ವಹಿಸಿ, ಜಿಪಂ ಸಿಇಒ ಪಾಂಡೆಯ ಸಲಹೆ

zp ceo Rahul ratnam pandeya visits Belavinala village
ಕೊಪ್ಪಳ ತಾಲೂಕಿನ ಬೆಳವನಾಳ ಗ್ರಾಮದಲ್ಲಿ ಹಮ್ಮಿಕೊಂಡ ಶ್ರಮದಾನ ಕಾರ್ಯಕ್ರಮದಲ್ಲಿ ಬುಟ್ಟಿ ವಿತರಿಸಲಾಯಿತು. ಜಿಪಂ ಸಿಇಒ ರಾಹುಲ್​ ರತ್ನಂ ಪಾಂಡೆಯ, ತಾಪಂ ಇಒ ದುಂಡಪ್ಪ ತುರಾದಿ, ಇಇ ಮಹೇಶ ಶಾಸ್ತ್ರಿ, ಎಡಿ ಮಹೇಶ ಎಚ್​., ನರೇಗಾ ಎಡಿ ಯಂಕಪ್ಪ, ಎಇಇ ವಿಲಾಸ್​ ಬೋಸ್ಲೆ, ಸಿಡಿಪೊಇ ಜಯಶ್ರೀ, ತಾಲೂಕ ಯೋಜನಾಧಿಕಾರಿ ರಾಜೇಸಾಬ ನದಾಫ್​, ಎಸ್​ಬಿಎಂ ಸಮಾಲೋಚಕಿ ಬಸಮ್ಮ ಹುಡೇದ್​ ಇದ್ದರು.
Published on

ಕೊಪ್ಪಳ: ಗ್ರಾಮದಲ್ಲಿ ಪ್ರತಿಯೊಬ್ಬರೂ ಸ್ವಚ್ಛತೆ ಕಾಪಾಡಬೇಕು. ಇದು ಎಲ್ಲರ ಜವಾಬ್ದಾರಿ ಎಂದು ಜಿಪಂ ಸಿಇಒ ರಾಹುಲ್​ ರತ್ನಂ ಪಾಂಡೆಯ ಹೇಳಿದರು.

ತಾಲೂಕಿನ ಬೆಳವಿನಾಳ ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶ್ರಮದಾನದಲ್ಲಿ ಭಾಗವಹಿಸಿ ಮಾತನಾಡಿದರು.

ಗ್ರಾಮದಲ್ಲಿ ನರೇಗಾದಡಿ ಎಲ್ಲ ಮನೆಗಳಿಗೆ ಇಂಗು ಗುಂಡಿ ನಿರ್ಮಿಸಲಾಗಿದೆ. ಒಣ, ಹಸಿ ಕಸ ಸಂಗ್ರಹಕ್ಕೆ ಬಿಟ್ಟಿ ನೀಡಲಾಗಿದೆ. ಯಾರೂ ರಸ್ತೆಯಲ್ಲಿ ಕಸ ಹಾಕಬಾರದು. ಎಲ್ಲದಂರಲ್ಲಿ ಕಸ ಹಾಕುವುದರಿಂದ ಅನೈರ್ಮಲ್ಯ ಉಂಟಾಗುತ್ತದೆ. ಜನರ ಅನಾರೋಗ್ಯಕ್ಕೆ ದಾರಿಯಾಗುತ್ತದೆ. ಮನೆಯಲ್ಲಿಯೇ ಹಸಿ&ಒಣ ಕಸ ಬೇರ್ಪಡಿಸಬೇಕು. ನಿತ್ಯ ಕಸದ ವಾಹನಕ್ಕೆ ನೀಡಬೇಕು. ಗ್ರಾಪಂನಿಂದ ಕಾಂಪೋಸ್ಟ್​ ಪಿಟ್​ ನಿರ್ಮಿಸಿಕೊಡಲಾಗುವುದು. ಸಮುದಾಯ ಇಂಗು ಗುಡಿ ನಿರ್ಮಾಣದಲ್ಲಿ ಗ್ರಾಮ ರಾಜ್ಯಕ್ಕೆ ಮಾದರಿಯಾಗಿದೆ. ಅದರಂತೆ ಸ್ವಚ್ಛತೆ ಕಾಪಾಡುವುದರಲ್ಲಿ ಮಾದರಿಯಾಗಲಿ ಎಂದರು.

ಹೂಳು ತೆಗೆದ ಸಿಇಒ: ಗ್ರಾಮದ ಅಂಗನವಾಡಿ ಕೇಂದ್ರದ ಪಕ್ಕದ ಚರಂಡಿಯಲ್ಲಿ ಹೂಳು ತುಂಬಿದ್ದನ್ನು ಕಂಡ ಸಿಇಒ ಸ್ವತ@ ತಾವೇ ಸ್ವಚ್ಛಗೊಳಿಸಿದರು. ಸಲಾಕೆ ಹಿಡಿದು ಪ್ಲಾಸ್ಟಿಕ್​ಗಳನ್ನು ಎತ್ತಿ ಹಾಕಿ ನೀರು ಹರಿದು ಹೋಗುವಂತೆ ಮಾಡಿದರು. ನಂತರ ಅಂಗನವಾಡಿಗೆ ಭೇಟಿ ನೀಡಿದರು. ಮಕ್ಕಳಿಗೆ ಊಟಕ್ಕು ಮುಂಚೆ ಕೈ ತೊಳೆವ ಬಗ್ಗೆ ಪ್ರಾತ್ಯಕೆ ನೀಡಿದರು. ಕಾಂಪೋಸ್ಟ್​ ಪಿಟ್​ ಸಗಣಿ, ಬೆಲ್ಲ ಮಿಶ್ರಣ ಮಾಡಿಕೊಂಡು ಹಸಿ ಕಸ ನಿರ್ವಹಣೆ ಮಾಡುವ ವಿಧಾನ ತಿಳಿಸಲಾಯಿತು. ಜೆಜೆಎಂ ಅಡಿ ನೀರು ಪೂರೈಕೆ ಆಗುತ್ತಿರುವ ಬಗ್ಗೆ ಜನರಿಂದ ಸಿಇಒ ಮಾಹಿತಿ ಪಡೆದರು.

ಬಳಿಕ ಹಾಲವರ್ತಿ ಗ್ರಾಪಂಗೆ ಭೇಟಿ ನೀಡಿ ವಿವಿಧ ಯೋಜನೆಗಳ ಕುರಿತು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ನಡೆಸಿದರು. ಗ್ರಾಮದ ವಿವಿಧ ಕಾಮಗಾರಿಗಳನ್ನು ಖುದ್ದು ವೀಸಿ ಮಾಹಿತಿ ಪಡೆದರು. ತಾಪಂ ಇಒ ದುಂಡಪ್ಪ ತುರಾದಿ ಸ್ವಚ್ಛತಾ ಪ್ರತಿಜ್ಞಾ ವಿಧಿ ಬೋಧಿಸಿದರು.
ಇಇ ಮಹೇಶ ಶಾಸ್ತ್ರಿ, ಎಡಿ ಮಹೇಶ ಎಚ್​., ನರೇಗಾ ಎಡಿ ಯಂಕಪ್ಪ, ಎಇಇ ವಿಲಾಸ್​ ಬೋಸ್ಲೆ, ಸಿಡಿಪೊಇ ಜಯಶ್ರೀ, ತಾಲೂಕ ಯೋಜನಾಧಿಕಾರಿ ರಾಜೇಸಾಬ ನದಾಫ್​, ಎಸ್​ಬಿಎಂ ಸಮಾಲೋಚಕಿ ಬಸಮ್ಮ ಹುಡೇದ್​ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net