ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ, ಸಿಇಒ ರಾಹುಲ್ ರತ್ನಂ ಪಾಂಡೆಯ ಸೂಚನೆ

district koppal zp ceo rahul ratnam pandey visit school
Published on

ಕೊಪ್ಪಳ : ನರೇಗಾದಡಿ ಕೈಗೊಂಡಿರುವ ಶಾಲಾ ಶೌಚಗೃಹ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಲಿ ಎಂದು ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ ಸೂಚಿಸಿದರು.

ತಾಲೂಕಿನ ಹಾಲವರ್ತಿ, ಗಿಣಿಗೇರಾ, ಚಿಕ್ಕಬೊಮ್ಮನಾಳ ಗ್ರಾಪಂ ವ್ಯಾಪ್ತಿಯ ಶಾಲೆಗಳಿಗೆ ಭೇಟಿ ನೀಡಿ ಮಾತನಾಡಿದರು.

ಕಿಡದಾಳ ಶಾಲೆ, ಹಳೇ ಕನಕಾಪುರ ಸರ್ಕಾರಿ ಶಾಲೆಯ ಶೌಚಗೃಹ ಕಾಮಗಾರಿ ಪರಿಶೀಲಿಸಿದರು. ಮಕ್ಕಳ ಹಿತದೃಷ್ಟಿಯಿಂದ ನರೇಗಾದಡಿ ಅನುದಾನ ಒದಗಿಸಲಾಗಿದೆ. ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ. ಚಿಕ್ಕಬೊಮ್ಮನಾಳ ಗ್ರಾಮದಲ್ಲಿ ಸಂಜೀವಿನಿ ಶೆಡ್ ಕಾಮಗಾರಿ ಮುಗಿದಿದ್ದು ಮಹಿಳಾ ಸಂಕ್ಕೆ ಹಸ್ತಾಂತರಿಸುವಂತೆ ಪಿಡಿಒಗೆ ಸೂಚಿಸಿದರು. ಪ್ರಸಕ್ತ ವರ್ಷ ಚಾಲ್ತಿಯಲ್ಲಿರುವ ಕಾಮಗಾರಿಗಳನ್ನು ತುರ್ತಾಗಿ ಮುಕ್ತಾಯಗೊಳಿಸಲು ತಿಳಿಸಿದರು. ಬಳಿಕ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಮಕ್ಕಳಿಗೆ ವಿತರಿಸುವ ಆಹಾರ ಪರಿಶೀಲಿಸಿದರು.

ಚಿಕ್ಕಬೊಮ್ಮನಾಳ ಸಹಿಪ್ರಾ ಶಾಲೆಯಲ್ಲಿ ಮಕ್ಕಳೊಂದಿಗೆ ಮೊಟ್ಟೆ, ಬಾಳೆಹಣ್ಣು, ಆಹಾರ ವಿತರಣೆ ಕುರಿತು ಚರ್ಚಿಸಿದರು. ಮಕ್ಕಳಿಗೆ ಸ್ವಚ್ಛತೆ ಕುರಿತು ಪಾಠ ಮಾಡಿದರು. ಮಕ್ಕಳು ತಮ್ಮ ಮನೆಯಲ್ಲಿರುವ ಶೌಚಗೃಹ ಕಡ್ಡಾಯವಾಗಿ ಬಳಕೆ ಮಾಡುವಂತೆ ತಿಳಿಸಿದರು. ಶಾಲೆಯ ಆವರಣದಲ್ಲಿದ್ದ ಕೂಸಿನ ಮನೆಗೆ ಭೇಟಿ ನೀಡಿ ದಾಖಲಾತಿ ಪರಿಶೀಲಿಸಿದರು. ಮಕ್ಕಳೊಂದಿಗೆ ಬಿಸಿಯೂಟ ಸೇವಿಸಿದರು. ಕೂಸಿನ ಮನೆಗೆ ಹೆಚ್ಚಿನ ಆದ್ಯತೆ ನೀಡಲು ಸಂಬಂಧಿಸಿದ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಜಿಪಂ ಯೋಜನಾ ನಿರ್ದೇಶಕ ಪ್ರಕಾಶ ವಿ., ತಾಪಂ ಇಒ ದುಂಡಪ್ಪ ತುರಾದಿ, ಎಡಿಪಿಸಿ ಮಹಾಂತಸ್ವಾಮಿ, ಗಿಣಿಗೇರಾ ಗ್ರಾಪಂ ಉಪಾಧ್ಯಕ್ಷ ಮಂಜುನಾಥ ಪಾಟೀಲ್, ಸದಸ್ಯ ರವಿಕುಮಾರ ಹಲಗೇರಿ, ಪಿಡಿಒ ಮಂಜುಳಾದೇವಿ ಹೂಗಾರ, ಚಿಕ್ಕಬೊಮ್ಮನಾಳ ಗ್ರಾಪಂ ಪಿಡಿಒ ಅಂದಿಗಾಲಪ್ಪ,  ತಾಲೂಕ ಐಇಸಿ ಸಂಯೋಜಕ ದೇವರಾಜ ಪತ್ತಾರ, ತಾಂತ್ರಿಕ ಸಂಯೋಜಕ ಯಮನೂರಪ್ಪ, ಕಾರ್ಯದರ್ಶಿಗಳಾದ ಬಸಯ್ಯ ಕೆಂಬೊಡಿಮಠ, ಮಂಜುನಾಥ, ಯಮನೂರಪ್ಪ, ತಾಂತ್ರಿಕ ಸಹಾಯಕರಾದ ಮುರುಳಿಧರ, ಅಕ್ಷತಾ, ಮಲ್ಲಿಕಾರ್ಜುನ ಮೆಗಳಮನಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net