ಜಿಪಂಗೆ ಆವರಣಕ್ಕೆ ಬಂದ ನಾಗರಹಾವು

district koppal zp ceo office cobra rescue operation
Published on

ಕೊಪ್ಪಳ: ನಗರದ ಜಿಲ್ಲಾಪಂಚಾಯಿತಿ ಆವರಣದಲ್ಲಿ ಗುರುವಾರ ನಾಗರಹಾವು ಕಾಣಿಸಿಕೊಂಡು ಕೆಲ ಕಾಲ ಎಲ್ಲರಲ್ಲೂ ಆತಂಕ ಮೂಡಿಸಿತು.

ನಾಗರ ಪಂಚಮಿ ಅಮವಾಸ್ಯೆ ದಿನದಂದೇ ಹಾವು ಪ್ರತ್ಯಕ್ಷವಾಗಿದ್ದಕ್ಕೆ ಜನರು ಶುಭ&ಅಶುಭ ಲಗಳ ಬಗ್ಗೆ ಮಾತನಾಡಿಕೊಂಡರು. ನೌಕರರು, ವಿವಿಧ ಕೆಲಸಗಳಿಗೆ ಆಗಮಿಸಿದ್ದ ಸಾರ್ವಜನಿಕರು ಗಾಬರಿಗೊಂಡರು. ಹೆಡೆ ಎತ್ತಿ ಬುಸುಗುಡುತ್ತಿದ್ದ ಹಾವು ಎತ್ತ ಹೋಗುವುದೆಂದು ಹೆದರಿ ಸುತ್ತವರಿದರು. ಹಾವು ಬಂದ ವಿಷಯ ಎಲ್ಲೆಡೆ ಹರಡುತ್ತಲೇ ಕಟ್ಟಡದ ವಿವಿಧೆಡೆ ಇದ್ದ ಜನರು ಓಡೋಡಿ ಬಂದು ಕುತೂಹಲದಿಂದ ವೀಸಿದರು. ಬಳಿಕ ಉರಗ ರಕ್ಷಕ ತಂಡದವರು ಆಗಮಿಸಿ ಹಾವು ರಸಿ ಕೊಂಡೊಯ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net