ಸರ್ಕಾರಿ ಯೋಜನೆ ಕುರಿಗಾರರಿಗೆ ತಲುಪಲಿ, ಜಿಪಂ ಸಿಇಒ ರಾಹುಲ್​ ರತ್ನಂ ಪಾಂಡೆಯ ಸೂಚನೆ

district koppal zp ceo meeting
Published on

ಕೊಪ್ಪಳ: ಕುರಿಗಾರರಿಗೆ ಸರ್ಕಾರಿ ಯೋಜನೆ ಸಮರ್ಪಕವಾಗಿ ತಲುಪಿಸಿ ಎಂದು ಜಿಪಂ ಸಿಇಒ ರಾಹುಲ್​ ರತ್ನಂ ಪಾಂಡೆಯ ಅಧಿಕಾರಿಗಳಿಗೆ ಸೂಚಿಸಿದರು.

ಜಿಪಂ ಕಚೇರಿ ಸಭಾಂಗಣದಲ್ಲಿ ಸೋಮವಾರ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು.

ಕುರಿ&ಮೇಕೆ ಸಾಕಣೆಗೆ ಸರ್ಕಾರ ಹಲವು ಯೋಜನೆ ಪರಿಚಯಿಸಿದೆ. ಎಲ್ಲ ಯೋಜನೆಗಳ ಬಗ್ಗೆ ಕುರಿಗಾರರಿಗೆ ತಿಳಿಸಿ. ಅರ್ಹರಿಗೆ ಸೌಲಭ್ಯ ಕಲ್ಪಿಸಿ. ಶೇ.100ರಷ್ಟು ಸೌಲಭ್ಯ ತಲುಪುವಂತೆ ನೋಡಿಕೊಳ್ಳಿ. ಸಂಚಾರಿ, ವಲಸೆ ಕುರಿಗಾರರಿಗೆ ಗುರುತಿನ ಚೀಟಿ ನೀಡಿ. ಅನುಗ್ರಹ ಯೋಜನೆಯಡಿ ಸತ್ತ ಕುರಿಗಳ ಪರಿಹಾರ ಬಾಕಿ ಹಣ ಬಿಡುಗಡೆ ಮಾಡಿಸಿ. ಮಳೆಯಿಂದ ರಕ್ಷಣೆಗೆ ಟಾರ್ಪಲಿನ್​, ಶೆಡ್​, ವಲಸೆ ಕುರಿಗಾರರ ಸಂರಕ್ಷಣೆಗೆ ತಾತ್ಕಾಲಿಕ ಶೆಡ್​ ನಿಮಾರ್ಣ, ಕಂಬಳಿ ವಿತರಣೆ ವಿತರಿಸುವಂತೆ ತಿಳಿಸಿದರು.

ಕುರಿಗಾರರ ಮಕ್ಕಳು ಶಿಕ್ಷಣದಿಂದ ವಂಚಿತರಾಗದಿರಲಿ. ಪಶು ವೈದ್ಯಾಧಿಕಾರಿಗಳು ನಿಮ್ಮ ವ್ಯಾಪ್ತಿಯ ಸಹಕಾರಿ ಸಂಗಳ ಕುರಿಗಾರರ ಮಕ್ಕಳ ಶಿಕ್ಷಣದ ವರದಿ ಸಲ್ಲಿಸಿ. ಖಾಲಿ ಹುದ್ದೆಗಳಿಗೆ ತಾತ್ಕಾಲಿಕವಾಗಿ ಪಶು ವೈದ್ಯರನ್ನು ನೇಮಿಸಿಕೊಳ್ಳಿ. ಕಲ್ಯಾಣ ಕರ್ನಾಟ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಅನುದಾನ ಪಡೆಯಿರಿ ಎಂದು ಸಲಹೆ ನೀಡಿದರು.

ಸಹಕಾರಿ ಸಂದ ಗುಡದಪ್ಪ ಬನ್ನಪ್ಪನವರ ಮಾತನಾಡಿ, ಅಮೃತ ಯೋಜನೆಯಡಿ ಅರ್ಜಿ ಸಲ್ಲಿಸಿ ಒಂದು ವರ್ಷ ಕಳೆದರೂ ಸೌಲಭ್ಯ ಸಿಕ್ಕಿಲ್ಲ ಎಂದರು. ಕೆ.ಬಿ ಜೂಡಿ ಮಾತನಾಡಿ, ಕೂಕನಪಳ್ಳಿ ಸಂತೆಯಲ್ಲಿ ಕುರಿ ಮಾರಾಟಕ್ಕೆ ಅವಕಾಶವಿದೆ. ಅದರಂತೆ ಡಿಜಿಟಲ್​ ಮಾರುಕಟ್ಟೆ ಅವಶ್ಯವಿದೆ. ಗಂಗಾವತಿ ಮಾರುಕಟ್ಟೆ ಸಮಿತಿಯಲ್ಲಿ ಡಿಜಿಟಲ್​ ತೂಕದ ಯಂತ್ರ ಅಳವಡಿಸಲು ಬೇಡಿಕೆ ಇಟ್ಟರು.

ಪಶು ಪಾಲನಾ ಇಲಾಖೆ ಉಪ ನಿರ್ದೇಶಕ ಡಾ.ಪಿ.ಎಂ.ಮಲ್ಲಯ್ಯ ಮಾತನಾಡಿ, ಕಿಸಾನ್​ ಕ್ರೆಡಿಟ್​ ಕಾರ್ಡ್​ ಯೋಜನೆಯಡಿ ಸಾಲ ಪಡೆಯಲು ಅರ್ಜಿ ಸ್ವೀಕರಿಸಲಾಗುತ್ತಿದೆ. 2025ರ ಮಾರ್ಚ್​ 31ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶವಿದೆ. ಆಸಕ್ತರು ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು.

ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಡಾ.ಆನಂದ ದೇವರನಾವದಗಿ ಮಾತನಾಡಿ, ಔಷಧ ಪೂರೈಕೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಬಂದ ತಕ್ಷಣ ವಿತರಿಸಲಾಗುವುದೆಂದರು. ಜೈ ಭೀಮ್​ ಪಜಾ, ಪಪಂ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರಿ ಸಂದ ಅಧ್ಯೆ ಮಹಾಲಕ್ಷಿ$್ಮ ಕಂದಾರಿ ಮಾತನಾಡಿದರು. ಪಶು ವೈದ್ಯಾಧಿಕಾರಿಗಳಾದ ಡಾ.ವಿನೋದ ಕುಮಾರ ದಿವಟರ, ಡಾ.ಶಿವರಾಜ ಎಂ. ಶೆಟ್ಟರ, ಡಾ.ಚನ್ನಬಸಪ್ಪ ಹಳ್ಳದ, ಡಾ.ಪ್ರಕಾಶ ಚೂರಿ, ಡಾ ಜಾಕೀರ ಹುಸೇನ್​, ಕುರಿಗಾರರಾದ ಮುಕ್ಕುಂದಪ್ಪ ಅಳವಂಡಿ, ಮಹಾಂತಪ್ಪ ಹನವಾಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net