

ಕೊಪ್ಪಳ: ಗ್ರಾಮ ಅಭಿವೃದ್ಧಿಯಲ್ಲಿ ಗ್ರಾಪಂ ಅಧ್ಯಕ್ಷ, ಪಿಡಿಒ ಪಾತ್ರ ಮುಖ್ಯ. ರ್ನಿದಿಷ್ಟ ಗುರಿಯೊಂದಿಗೆ ಮಾರ್ಗಸೂಚಿಯಂತೆ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವಂತೆ ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ ಸೂಚಿಸಿದರು.
ನಗರದ ಜಿಪಂ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಯೋಜನೆಗಳ ಅನುಷ್ಠಾನ ಸಂಬಂಧ ಬುಧವಾರ ಗ್ರಾಪಂ ಅಧ್ಯಕ್ಷ, ಪಿಡಿಒಗಳಿಗೆ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಗ್ರಾಪಂ ಬೇಡಿಕೆ ಅನುಸಾರ ಯೋಜನಾ ಅನುದಾನ ಕ್ರೂಢಿಕರಿಸಿ. ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಿ. ಕೇಂದ್ರ&ರಾಜ್ಯ ಪುರಸತ ಯೋಜನೆಗಳನ್ನು ಹಂತ ಹಂತವಾಗಿ ಅನುಷ್ಠಾನಗೊಳಿಸಿ. ಕಾಲ ಕಾಲಕ್ಕೆ ಪರಿಶೀಲಿಸಿ ಮೇಲ್ವಿಚಾರಣೆ ನಡೆಸಿ. ವಾರ್ಷಿಕ ಅಭಿವೃದ್ಧಿ ಯೋಜನೆ ಮುಂದಾಲೋಚನೆಯಿಂದ ಕೂಡಿರಲಿ. ಪ್ರತಿ ಯೋಜನೆಗೆ ವೇಳಾಪಟ್ಟಿ ರಚಿಸಿಕೊಳ್ಳಿ. ಕ್ರಿಯಾ ಯೋಜನೆಗೆ ತಕ್ಕಂತೆ ಭೌತಿಕ ಗುರಿ, ಅನುದಾನ ಹಂಚಿಕೆ, ಮಾರ್ಗಸೂಚಿಯಂತೆ ಕೆಲಸ ನಡೆಸಿ. ಗ್ರಾಪಂ ಸಾಮಾನ್ಯ, ಕಟುಂಬಗಳ ಮಾಹಿತಿ ಸಂಗ್ರಹಿಸಿ. ಕುಂದುಕೊರತೆ ಪರಿಹಾರಕ್ಕೆ ಆಂತರಿಕ ಕಾರ್ಯವಿಧಾನ ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ನರೇಗಾ ಜಾಗೃತಿ ಪೋಸ್ಟರ್ ಬಿಡುಗಡೆಗೊಳಿಸಿದರು. ಅಧ್ಯಕ್ಷರು, ಪಿಡಿಒಗಳಿಗೆ ಆರೋಗ್ಯ ಕಿಟ್ ವಿತರಿಸಿದರು. ಗ್ರಾಪಂ ಪಿಡಿಒಗಳು ಯೋಜನೆಗಳ ವರದಿ ಒಪ್ಪಿಸಿದರು. ರಾಜೀವ್ ಗಾಂಧಿ ಪಂಚಾಯತ್ ರಾಜ್ ೆಲೋ ನತ್ಯಾಜ್ಯ ವಿಲೇವಾರಿ ಟಕ, ಕೂಸಿನ ಮನೆ ನಿರ್ವಹಣೆ ಕುರಿತು ವಿವರಿಸಿದರು. ಜಿಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಯೋಜನಾ ನಿರ್ದೇಶಕ ಪ್ರಕಾಶ ವಡ್ಡರ್, ತಾಪಂ ಇಒಗಳು ಇತರರಿದ್ದರು.