ಝೀರೋ ಟ್ರಾಫಿಕ್​ನಲ್ಲಿ ಶಿಶು ರವಾನೆ

zero traffic ambulance baby shift jayadeva hospital bangalore koppal
ಕೊಪ್ಪಳ ಜಿಲ್ಲಾಸ್ಪತ್ರೆಯಿಂದ ಬುಧವಾರ ಝಿರೋ ಟ್ರಾಫಿಕ್​ನಲ್ಲಿ 22 ದಿನಗಳ ಹಸುಗೂಸು ಕರೆದೊಯ್ಯಲಾಯಿತು.
Published on

ಕೊಪ್ಪಳ: ಹೃದಯ ಸಮಸ್ಯೆಯಿಂದ ಬಳಲುತ್ತಿರುವ 22 ದಿನಗಳ ಹಸುಗೂಸನ್ನು ನಗರದ ಕಿಮ್ಸ್​ ವೈದ್ಯರು ಬುಧವಾರ ನಾಲ್ಕು ಆ್ಯಂಬುಲೆನ್ಸ್​ನಲ್ಲಿ ಝೀರೋ ಟ್ರಾಫಿಕ್​ ಮೂಲಕ ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಗೆ ಕಳುಹಿಸಿದರು.

ಹೊಸಪೇಟೆ ತಾಲೂಕಿನ ಗಾದಿಗನೂರು ಗ್ರಾಮದ ಕೀರಸ್ವಾಮಿ&ಹುಲಿಗೆಮ್ಮ ದಂಪತಿಗೆ ಇತ್ತೀಚೆಗೆ ಹೆಣ್ಣು ಮಗು ಜನಿಸಿದೆ. ಅನಾರೋಗ್ಯ ಕಾಡಿದ್ದು, ನಾಲ್ಕು ದಿನಗಳ ಹಿಂದೆ ಕೊಪ್ಪಳ ಜಿಲ್ಲಾಸ್ಪತ್ರೆಯ ಮಹಿಳಾ ಮತ್ತು ಮಕ್ಕಳ ಹೆರಿಗೆ ಆಸ್ಪತ್ರೆಗೆ ದಾಖಲಿಸಿದ್ದಾರೆ. ಶಿಶು ಪರೀಸಿದ ವೈದ್ಯರು ಹೃದಯ ಸಮಸ್ಯೆ ಇರುವುದನ್ನು ಪತ್ತೆ ಮಾಡಿದ್ದಾರೆ. ತಕ್ಷಣ ಚಿಕಿತ್ಸೆ ಕೊಡಿಸಬೇಕೆಂದು ತಿಳಿಸಿದ್ದಾರೆ. ಜಯದೇವ ಹೃದ್ರೋಗ ಆಸ್ಪತ್ರೆ ವೈದ್ಯಾಧಿಕಾರಿಗಳೊಂದಿಗೆ ಮಾತನಾಡಿ ಮಗು ಕರೆದೊಯ್ಯಲು ತಿಳಿಸಿದ್ದಾರೆ.

ಈ ವಿಷಯ ತಿಳಿದ ಆ್ಯಂಬುಲೆನ್ಸ್​ ಚಾಲಕರು ಝೀರೋ ಟ್ರಾಫಿಕ್​ನಲ್ಲಿ ಮಗು ಕರೆದೊಯ್ಯಲು ನಿರ್ಧರಿಸಿದರು. ಚಾಲಕ ನವೀದ್​ ತಮ್ಮ ವಾಹನದಲ್ಲಿ ಮಗುವನ್ನು ಇರಿಸಿಕೊಂಡು ಪ್ರಯಾಣ ಆರಂಭಿಸಿದರು. ಇವರಿಗೆ ಬೆನ್ಗಾವಲಾಗಿ ಇತರ ಮೂರು ಆ್ಯಂಬುಲೆನ್ಸ್​ಗಳು ಸಾಥ್​ ನೀಡಿದವು. ಹೊಸಪೇಟೆ&ಚಿತ್ರದುರ್ಗ, ತುಮೂರು ಮಾರ್ಗವಾಗಿ ಬೆಂಗಳೂರಿಗೆ ಕರೆದೊಯ್ಯಲಾಯಿತು.

ಪಾಲಕರು ಆತಂಕದಲ್ಲೇ ಮಗುವನ್ನು ಕರೆದುಕೊಂಡು ಆ್ಯಂಬುಲೆನ್ಸ್​ ಏರಿದರು. ಜಿಲ್ಲಾಡಳಿತ, ಪೊಲೀಸರು ಝೀರೋ ಟ್ರಾಫಿಕ್​ಗೆ ಸಹಕರಿಸಿ ಕರೆದೊಯ್ಯಲು ಅನುಕೂಲ ಮಾಡಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net