

ಕೊಪ್ಪಳ: ಜಿಲ್ಲಾ ಯುವಜನೋತ್ಸವ ಅಂಗವಾಗಿ ಶುಕ್ರವಾರ ಹಮ್ಮಿಕೊಂಡ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರನ್ನು ಗೌರವಿಸಲಾಯಿತು.
ಜಾನಪದ ಗೀತೆ (ವೈಯಕ್ತಿಕ) ಬಸನಗೌಡ (ಪ್ರಥಮ), ಪ್ರಶಾಂತ (ದ್ವೀತಿಯ), ಜಾನಪದ ಗೀತೆ (ಗುಂಪು) ವಿಭಾಗದಲ್ಲಿ ಪಾರ್ವತಿ ಹಿರೇ ಮಠ ಮತ್ತು ತಂಡ (ಪ್ರಥಮ), ಮೋನಿಕಾ ಮತ್ತು ತಂಡ (ದ್ವೀತಿಯ), ಜಾನಪದ ನೃತ್ಯ (ವೈಯಕ್ತಿಕ) ದಲ್ಲಿ ದೀಪಾ (ಪ್ರಥಮ), ಗುಂಪು ವಿಭಾಗದಲ್ಲಿ ಸುಮಾ ಮತ್ತು ತಂಡ (ಪ್ರಥಮ), ಪೂಜಾ ಮತ್ತು ತಂಡ (ದ್ವೀತಿಯ), ಕಥೆ ಬರೆಯುವಿಕೆಯಲ್ಲಿ ದಿವ್ಯಾ ಕಂಬ್ಳೇಕರ್ (ಪ್ರಥಮ), ರೇಷ್ಮಾ ಬೇಗಂ (ದ್ವೀತಿಯ), ಕವಿತೆ ಬರೆಯುವುದರಲ್ಲಿ ಅಂಜುಂ ಬೇಗಂ (ಪ್ರಥಮ), ಮುತ್ತಣ್ಣ ರಾಠೋಡ್ (ದ್ವೀತಿಯ), ಚಿತ್ರಕಲೆಯಲ್ಲಿ ಶ್ರೀಶೈಲ ಕಲ್ಲೂರು (ಪ್ರಥಮ), ಶ್ರೀಹರ್ಷಾ (ದ್ವೀತಿಯ) ಮತ್ತು ಘೋಷಣೆ ವಿಭಾಗದಲ್ಲಿ ಶಿವಮ್ಮ (ಪ್ರಥಮ), ಕವಿತಾ (ದ್ವೀತಿಯ) ಸ್ಥಾನ ಪಡೆದರು.
ಕೊಪ್ಪಳದಲ್ಲಿ ರಾಜ್ಯಮಟ್ಟದ ಸ್ಪರ್ಧೆ?
ಯುವ ಜನೋತ್ಸವ ರಾಜ್ಯಮಟ್ಟದ ಸ್ಪರ್ಧೆ ಈ ಬಾರಿ ಕೊಪ್ಪಳದಲ್ಲಿ ಆಯೋಜಿಸಲು ಕ್ರೀಡಾ ಇಲಾಖೆ ಆಸಕ್ತಿವಹಿಸಿದೆ. ಜತೆಗೆ ಮೈಸೂರಿನಲ್ಲಿ ಹಮ್ಮಿಕೊಳ್ಳುವ ಸಾಧ್ಯತೆಯೂ ಇದೆ. ಎರಡೂ ಜಿಲ್ಲೆಗಳಲ್ಲಿನ ಅನುಕೂಲಗಳನ್ನು ಪರಿಶೀಲಿಸಿ ಮುಂದಿನ ಕ್ರಮಕ್ಕೆ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. ಜಿಲ್ಲಾ ಮಟ್ಟದ ಅಧಿಕಾರಿಗಳು, ಜನಪ್ರತಿನಿಧಿಗಳು ಸಮ್ಮತಿ ಸೂಚಿಸಿದಲ್ಲಿ ಬಹುತೇಕ ಕೊಪ್ಪದಲ್ಲಿ ಆಯೋಜನೆಯಾಗಲಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.