

ಕೊಪ್ಪಳ: ಎಲ್ಲರಲ್ಲೂ ವಿಶೇಷ ಪ್ರತಿಭೆ ಇರಲಿದೆ. ಓದು&ಬರಹದ ಜತೆಗೆ ನಿಮ್ಮೊಳಗಿನ ಕೆಲಗೂ ಆದ್ಯತೆ ನೀಡಿ ಎಂದು ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ ಹೇಳಿದರು.
ಜಿಲ್ಲಾಡಳಿತ, ಕ್ರೀಡಾ ಇಲಾಖೆಯಿಂದ ಶುಕ್ರವಾರ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಯವಜನೋತ್ಸವ ಉದ್ಘಾಟಿಸಿ ಮಾತನಾಡಿದರು.
ಯುವಕರು ಹೆಚ್ಚು ಮೊಬೈಲ್ನಲ್ಲಿ ಸಮಯ ಕಳೆಯುತ್ತಾರೆ. ಅದರ ಬದಲು ಕಲೆ, ಸಾಹಿತ್ಯಕ್ಕೆ ಆದ್ಯತೆ ನೀಡಿ. ಮಾನಸಿಕ ಸದೃಢತೆಗೆ ಯೋಗ, ಕ್ರೀಡೆಯಲ್ಲಿ ತೊಡಗಿ. ಎಲ್ಲರೊಂದಿಗೆ ಸಾಮರಸ್ಯದಿಂದ ಬೆರೆಯಿರಿ. ನಮ್ಮ ಕಲೆ, ಸಂಸತಿ ಬಗ್ಗೆ ಅರಿಯಿರಿ. ಜಿಲ್ಲೆಯಲ್ಲಿ ಹೆಸರಾದ ಕೆಲ, ಸಾಹಿತ್ಯ ಪ್ರೋತ್ಸಾಹಿಸುವ ಜತೆಗೆ ಸಂರಸೋಣ. ಎಲ್ಲ ಕೆಲಸಗಳಿಗೆ ಅದರದೇ ಆದ ಪ್ರಾಮುಖ್ಯತೆ ಇದೆ. ಸಾಧನೆಗೆ ಅನೆಕ ರಂಗಗಳಿವೆ. ನಿಮ್ಮೊಳಗಿನ ವಿಶೇಷ ಪ್ರತಿಭೆ ಮೂಲಕ ಸಾಧನೆ ಮಾಡಿ ಎಂದರು.
ರಾಜ್ಯ ಯುವ ಸಂಗಳ ಒಕ್ಕೂಟ ಅಧ್ಯಕ್ಷ ಡಾ.ಎಸ್.ಬಾಲಾಜಿ ಮಾತನಾಡಿ, ರಾಜ್ಯದಲ್ಲಿ ಸಾಂಸತಿಕ ನೀತಿ ಜಾರಿಯಾಗಬೇಕು. ಯುವಕರು ಸಾಂಸತಿಕ ಚಟುವಟಿಕೆಗಳಲ್ಲಿ ಹೆಚ್ಚಾಗಿ ಭಾಗಿಯಾಗಿ. ಸೋಲು&ಗೆಲುವು ಸಾಮಾನ್ಯ. ಭಾಗವಹಿಸುವಿಕೆ ಮುಖ್ಯ. ಜಾನಪದ ತರಬೇತಿ ಆರಂಭಿಸಬೇಕು ಎಂದು ಸಲಹೆ ನೀಡಿದರು.
ರಾಜ್ಯೋತ್ಸವ ಪುರಸತ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, ನಮ್ಮ ಜಿಲ್ಲೆ ಜಾನಪದ ಕಲೆಗಳಿಂದ ಶ್ರೀಮಂತವಾಗಿದೆ. ಹೆಸರಾಂತ ಕಲೆಗಳು ಪುರಾತನವಾಗಿವೆ. ಗವಿಮಠ ವರ್ಷದಿಂದ ವರ್ಷಕ್ಕೆ ಸಾಂಸತಿಕ ಸ್ವರೂಪ ಪಡೆಯುತ್ತಿದೆ. ಯುವ ಪೀಳಿಗೆ ಓದಿನ ಜತೆ ಕಲೆ, ಸಾಹಿತ್ಯ, ಕ್ರೀಡೆಯಲ್ಲಿ ಭಾಗಿಯಾಗಬೇಕೆಂದು ತಿಳಿಸಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿಠ್ಠಲ ಜಾಬಗೌಡರ ಪ್ರಾಸ್ತಾವಿಕ ಮಾತನಾಡಿದರು.
ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಹಾಗೂ ರುಕ್ಮಿಣಿ ಬಾಯಿ ಚಿತ್ರಗಾರ ಅವರನ್ನು ಸನ್ಮಾನಿಸಲಾಯಿತು. ರಾಜ್ಯ ಯುವ ಸಂಘಗಳ ಒಕ್ಕೂಟ ಜಿಲ್ಲಾದ್ಯಕ್ಷ ಮಂಜುನಾಥ ಗೊಂಡಬಾಳ, ನೆಹರು ಯುವ ಕೇಂದ್ರದ ಮೊಂಟು ಪತ್ತಾರ, ಜೀವನ್ ಸಾಬ್ ಬಿನ್ನಾಳ, ಅಕ್ಬರ್ ಕಾಲಿಮಿರ್ಚಿ ಇತರರಿದ್ದರು.