ಗ್ರಾಮೀಣ ಭಾಗದಲ್ಲಿ ಯುಗಾದಿ ಸಂಭ್ರಮ

district koppal yugadi festival celebration
Published on

ಕೊಪ್ಪಳ: ಯುಗಾದಿ ಅಂಗವಾಗಿ ನಗರ ಸೇರಿ ತಾಲೂಕಿನ ಗ್ರಾಮೀಣ ಭಾಗದಲ್ಲಿ ಮಾರುತೇಶ್ವರ ರಥೋತ್ಸವ ಹಾಗೂ ಧಾರ್ಮಿಕ ಆಚರಣೆಗಳು ಭಾನುವಾರ ಮತ್ತು ಸೋಮವಾರ ನೆರವೇರಿದವು.

ಭಕ್ತರು ಶ್ರದ್ಧಾ ಭಕ್ತಿಯಿಂದ ಭಾಗಿಯಾದರು. ಕೊಪ್ಪಳದ ಬಜಾರ ಹನುಮಂತ ದೇವರು, ಭಾಗ್ಯನಗರ ಆಂಜನೇಯ, ಹೊಸಲಿಂಗಾಪುರ, ಹಾಲವರ್ತಿ ಸೇರಿ ವಿವಿಧ ಗ್ರಾಮಗಳಲ್ಲಿ ಜಾತ್ರೋತ್ಸವ ನೆರವೇರಿತು. ಹನುಮನಿಗೆ ವಿಶೇಷ ಪೂಜೆ, ಅಲಂಕಾರ, ಅಭಿಷೇಕ, ರಾಭಿಷೇಕ, ಅರ್ಚನೆ, ಮಂಗಳಾರತಿ ನೆರವೇರಿಸಲಾಯಿತು. ಸೋಮವಾರ ಮುಳ್ಳಿನ ಗಿಡ ಮೆರವಣಿಗೆ ಮೂಲಕ ಹೊತ್ತು ತಂದ ಭಕ್ತರು ಗುಡ್ಡೆ ಹಾಕಿದರು. ಭಕ್ತಿಪರವಶಗೊಂಡ ಭಕ್ತರು ಮುಳ್ಳಿನ ಮೇಲೆ ಹಾರಿ ಇಷ್ಟಾರ್ಥ ಬೇಡಿಕೊಂಡರು.

ಗ್ರಾಮೀಣ ಭಾಗದಲ್ಲಿ ಈ ಧಾರ್ಮಿಕ ಆಚರಣೆ ಸಾಮಾನ್ಯವಾಗಿದ್ದು, ಹರಕೆ ಅಥವಾ ಇಷ್ಟಾರ್ಥ ಲಿಸಲೆಂದು ಬೇಡಿಕೊಂಡವರು, ಈಡೇರಿದವರು ಮುಳ್ಳಿನ ಮೇಲೆ ಹಾರುತ್ತಾರೆ. ಸಂಜೆ ಬಳಿಕ ದೇವಾಲಯ ಮುಂಭಾಗದ ಹೊಂಡ ಹಾಯ್ದು ಮೇಲ್ಭಾಗದಲ್ಲಿ ಕಟ್ಟಿದ ಕಾಯಿ ಕೀಳುವ ಸಂಪ್ರದಾಯಗಳು ಸಾಂಗವಾಗಿ ಜರುಗಿದವು. ರಥಕ್ಕೆ ಉತ್ತತ್ತಿ, ಬಾಳೆಹಣ್ಣು ಎಸೆದು ಭಕ್ತರು ಭಕ್ತಿ ಸಮರ್ಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net