ವಿದ್ಯಾರ್ಥಿ ಯಲ್ಲಾಲಿಂಗ ಕೊಲೆ ಪ್ರಕರಣ, ಒಂಭತ್ತು ಆರೋಪಿಗಳು ಖುಲಾಸೆ

district koppal yallalinga murder case accused court hanumesh nayak
Published on

ಕೊಪ್ಪಳ: ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿದ್ದ ಕನಕಗಿರಿ ತಾಲೂಕಿನ ಕನಕಾಪುರ ಗ್ರಾಮದ ವಿದ್ಯಾರ್ಥಿ ಯಲ್ಲಾಲಿಂಗ ಕೊಲೆ ಪ್ರಕರಣದ ಅಂತಿಮ ತೀರ್ಪು ಶುಕ್ರವಾರ ಪ್ರಕಟಗೊಂಡಿದ್ದು, ಎಲ್ಲ ಆರೋಪಿಗಳು ನಿರಪರಾಧಿಗಳೆಂದು ಜಿಲ್ಲಾ ನ್ಯಾಯಾಲಯ ಆದೇಶಿಸಿದೆ.

ಸಚಿವ ಶಿವರಾಜ ತಂಗಡಗಿ ಆಪ್ತ ಹನುಮೇಶ ನಾಯಕ, ಬಾಳನಗೌಡ, ಕಾಡ ಮಂಜು, ಮಹಾಂತೇಶ ನಾಯಕ, ಮನೋಜ ಪಾಟೀಲ್​, ನಂದೀಶ, ಪರಶುರಾಮ, ಯಮನೂರಪ್ಪ ಹಾಗೂ ದುರ್ಗಪ್ಪ ಖುಲಾಸೆಗೊಂಡವರು.

ತನ್ನೂರಿನ ಗ್ರಾಪಂ ನಲ್ಲಿ ನಡೆದ ಭ್ರಷ್ಟಾಚಾರ ಕುರಿತು ಯಲ್ಲಾಲಿಂಗ ಧ್ವನಿ ಎತ್ತಿದ್ದ. 2015ರ ಜನೆವರಿ 11ರಂದು ಕೊಪ್ಪಳದ ರೈಲ್ವೆ ನಿಲ್ದಾಣದಲ್ಲಿ ಶವವಾಗಿ ಪತ್ತೆಯಾಗಿದ್ದ. ಇದು ಕೊಲೆ ಎಂದು ಯಲ್ಲಾಲಿಂಗ ಸಹೋದರಿ ಮಂಜುಳಾ ದೂರು ನೀಡಿದ್ದರು. ಪ್ರಕರಣ ರಾಜಕೀಯ ತಿರುವು ಪಡೆದು ರಾಜ್ಯ, ರಾಷ್ಟ್ರಾದ್ಯಂತ ಸದ್ದು ಮಾಡಿತ್ತು. ಪ್ರಕರಣದಲ್ಲಿ ಸಚಿವ ಶಿವರಾಜ ತಂಗಡಗಿ ರಾಜೀನಾಮೆ ನೀಡುವಂತಾಗಿತ್ತು. ಬಿಜೆಪಿ ನಾಯಕರು ಉಗ್ರ ಹೋರಾಟ ನಡೆಸಿದ್ದರು. ಸರ್ಕಾರ ಪ್ರಕರಣವನ್ನು ಸಿಐಡಿಗೆ ವಹಿಸಿತ್ತು. ಸುದೀರ್ಘ 10 ವರ್ಷ ಎಂಟು ತಿಂಗಳ ಬಳಿಕ ತೀರ್ಪು ಹೊರಬಿದ್ದಿದ್ದು, ಎಲ್ಲ ಆರೋಪಿಗಳನ್ನು ನ್ಯಾಯಾಲಯ ನಿರಪರಾಧಿಗಳೆಂದು ತೀರ್ಮಾನಿಸಿದೆ.

ರಾಜಕೀಯ ಷಡ್ಯಂತ್ರ

ರಾಜಕೀಯ ಷಡ್ಯಂತ್ರ ನಡೆಸಿ ಕೊಲೆ ಪ್ರಕರಣ ದಾಖಲಿಸಿದ್ದರು. ನಮ್ಮ ಕಕ್ಷಿಗಾರರನ್ನು ಆರೋಪಿಗಳನ್ನಾಗಿ ಮಾಡಲಾಗಿತ್ತು. ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯ ನಮ್ಮ ಕಕ್ಷಿಗಾರರು ನಿರಪರಾಧಿಗಳೆಂದು ಎಂದು ತೀರ್ಪು ನೀಡಿದೆ. ಒಟ್ಟು 76 ಸಾಕ್ಷಿ ವಿಚಾರಣೆ ನಡೆಸಿದ್ದು, 50 ಜನ ಅಭಿಯೋಜನೆಗೆ ವಿರುದ್ಧ ಸಾಕ್ಷಿ ನೀಡಿದ್ದಾರೆ. ಹೀಗಾಗಿ ಪ್ರಕರಣದಲ್ಲಿ ನಮ್ಮವರ ಪಾತ್ರ ಇಲ್ಲ ಎಂದು ನ್ಯಾಯಾಲಯ ತೀಮಾರ್ನಿಸಿದೆ. ಸ್ವತ@ ಯಲ್ಲಾಲಿಂಗನ ಅಣ್ಣ ವೀರಭದ್ರಪ್ಪ ಅವರು ತನ್ನ ತಮ್ಮನ ಸಾವು ಆತ್ಮಹತ್ಯೆ ಎಂದು ಹೇಳಿಕೆ ನೀಡಿದ್ದಾರೆ. ಮರಣೋತ್ತರ ವರದಿಯಲ್ಲೂ ರೈಲಿಗೆ ಸಿಲುಕಿ ಸಾವು ಎಂದಿದೆ. ಡಿಜಿ, ಐಜಿಪಿ ಸಹ ಇದರಲ್ಲಿ ಹನುಮೇಶ ನಾಯಕ ಪಾತ್ರ ಇಲ್ಲವೆಂದು ಆದೇಶಿಸಿದ್ದಾರೆ. ಆದರೂ ಷಡ್ಯಂತ್ರ ಮಾಡಿ ನಮ್ಮ ಕಕ್ಷಿಗಾರರನ್ನು ಬಂಧಿಸಿ ಮೂರು ವರ್ಷ ನ್ಯಾಯಾಂಗ ಬಂಧನದಲ್ಲಿಟ್ಟಿದ್ದರು. ಸಾವಾಗಿ ಒಂದು ತಿಂಗಳ ಬಳಿಕ ಮಂಜುಳಾ ಎನ್ನುವವರಿಂದ ಕೊಲೆ ಎಂದು ದೂರು ಕೊಡಿಸಿದ್ದರು. ಇದೆಲ್ಲವನ್ನು ಪರಿಗಣಿಸಿದ ನ್ಯಾಯಾಲು ಆರೋಪಿಗಳನ್ನು ಖುಲಾಸೆಗೊಳಿದೆ ಎಂದು ಆರೋಪಿಗಳ ಪರ ವಕೀಲ ಗಂಗಾಧರ ಪ್ರಕರಣ ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net