ಸಿಡಿಲು ಬಡಿದು ಕುರಿ ಸಾವು

Published on

ಕೊಪ್ಪಳ: ಯಲಬುರ್ಗಾ ತಾಲೂಕಿನ ಗಡಿ ಗ್ರಾಮ ಗಾಣಧಾಳದಲ್ಲಿ ಶುಕ್ರವಾರ ಸಿಡಿಲು ಬಡಿದು 36 ಕುರಿಗಳು ಸಾವನ್ನಪ್ಪಿವೆ.

ಗ್ರಾಮದ ಕುರಿಗಾಹಿ ಗವಿಸಿದ್ದಪ್ಪ ನವಲಹಳ್ಳಿ ಎಂಬುವರ ಕುರಿಗಳು ಇವು. ಗ್ರಾಮದ ಹೊರ ಹೊಲಯದ ಜಮೀನಲ್ಲಿ ಕುರಿ ಮೇಯಿಸಲು ತೆರಳಿದಾಗ ಈ ಅವಘಡ ಸಂಭವಿಸಿದೆ. ಸಂಜೆ ಮಳೆ ಗುಡಗು, ಸಿಡಿಲಿನ ಆರ್ಭಟ ಜೋರಾಗಿ ಗಾಳಿ ಬೀಸಿದೆ. ಗವಿಸಿದ್ದಪ್ಪ ಕುರಿಗಳನ್ನು ಹಟ್ಟಿಯ ಕಡೆಗೆ ಕರೆದೊಯ್ಯುತ್ತಿದ್ದರು. ಸಿಡಿಲು ಬಡಿದು ಕುರಿಗಳು ಮೃತಪಟ್ಟಿವೆ.

ಯಲಬುರ್ಗಾ ತಹಸೀಲ್ದಾರ್​ ಬಸವರಾಜ ತೆನ್ನಳ್ಳಿ, ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net