ನರೇಗಾ ಕೆಲಸದಲ್ಲಿ ಕೂಲಿಕಾರರ ಹಾಜರಾತಿ ಕಡ್ಡಾಯ

district koppal yalaburga narega scheme
Published on

ಕೊಪ್ಪಳ: ಯಲಬುರ್ಗಾ ತಾಲೂಕಿನ ತುಮ್ಮರಗುದ್ದಿ ಗ್ರಾಪಂ ವ್ಯಾಪ್ತಿಯಲ್ಲಿ 2025&-26 ನೇ ಸಾಲಿನ ನರೇಗಾ ಯೋಜನೆಯಡಿ ನಡೆಯುತ್ತಿರುವ ನಾಲಾ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಸಹಾಯಕ ನಿರ್ದೆಶಕರಾದ ಹನಮಂತಗೌಡ ಪೊಲೀಸ್​ ಪಾಟೀಲ್​ ಭೇಟಿ ನೀಡಿ ಕೂಲಿಕಾರರ ಹಾಜರಾತಿ ಪರಿಶೀಲಿಸಿದರು.

ಈ ವೇಳೆ ಮಾತನಾಡಿದ ಅವರು, ಬೇಸಿಗೆ ಸಮಯದಲ್ಲಿ ನಿರಂತರವಾಗಿ ಕೆಲಸ ನೀಡಲಾಗುವುದು. ಈ ಬಾರಿ ನರೇಗಾ ಕೂಲಿಮೊತ್ತ 370 ರೂಪಾಯಿಗೆ ಹೆಚ್ಚಳವಾಗಿದೆ. ಸರಿಯಾಗಿ ಅಳತೆಗೆ ತಕ್ಕಂತೆ ಕೆಲಸ ಮಾಡಿ ಪೂರ್ಣ ಮೊತ್ತದ ಕೂಲಿ ಕಡೆಯಿರಿ. ಪ್ರತಿಯೊಬ್ಬರೂ ಹಾಜರಾತಿ ಹಾಕುವುದು ಕಡ್ಡಾಯ ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ತಾಂತ್ರಿಕ ಸಂಯೋಜಕರಾದ ಸಂತೋಫಿ ನಂದಾಪುರ, ಪಿಡಿಒರಾದ ರವಿಕುಮಾರ, ಡಿಇಒ ರಮೇಶ, ಕಾಯಕ ಬಂಧುಗಳು, ಕೂಲಿಕಾರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net