ಸಾಮೂಹಿಕ ವಿವಾಹ ಬಡವರಿಗೆ ವರದಾನ: ಬಸವಲಿಂಗೇಶ್ವರ ಶ್ರೀಗಳು

district koppal yalaburga mass marriage swamiji
Published on

ಕೊಪ್ಪಳ: ಆರ್ಥಿಕ ಹೊಣೆಯ ಶಕ್ತಿಯನ್ನು ಹೊರಲು ಅಶಕ್ತರಾದವರಿಗೆ ಸಾಮೂಹಿಕ ವಿವಾಹಗಳು ದುಂದು ವೆಚ್ಚಕ್ಕೆ ಕಡಿವಾಣ ಹಾಕಿ ಬಡವರಿಗೆ ವರದಾನವಾಗಿವೆ ಎಂದು ಯಲಬುರ್ಗಾ ಪಟ್ಟಣದ ಶ್ರೀಧರ ಮುರಡಿ ಹಿರೇಮಠದ ಬಸವಲಿಂಗೇಶ್ವರ ಸ್ವಾಮಿಗಳು ಹೇಳಿದರು.

ಯಲಬುರ್ಗಾ ತಾಲೂಕಿನ ಕರಮುಡಿ ಗ್ರಾಮದ ಹುಚ್ಚೀರೇಶ್ವರ ಮಠದಲ್ಲಿ ಆಯೋಜಿಸಿದ್ದ ಶ್ರೀ ಭೀಮಾಂಬಿಕಾ ಪುರಾಣ ಮಂಗಲೋತ್ಸವ ? ಹುಚ್ಚಿರೇಶ್ವರ ರಥೋತ್ಸವ? ಹಾಗೂ ಸಾಮೂಹಿಕ ವಿವಾಹ ಮಹೋತ್ಸವದ ಸಾನಿಧ್ಯವನ್ನು ವಹಿಸಿ ಶ್ರೀಗಳುವ ಮಾತನಾಡಿದರು.

ಹಿಂದು ಸಂಪ್ರದಾಯದಲ್ಲಿ ಮದುವೆಗೆ ಪಾವಿತ್ರ್ಯತೆ ಸಂಬಂಧ ಇದೆ ಏಳೇಳು ಜನ್ಮದ ಋೂ2ಣಾನುಬಂಧ ಇದ್ದಾಗಲೆ ಗಂಡು ಹೆಣ್ಣಿನ ಕಡೆಯವರು ಒಪ್ಪಿಕೊಂಡು ಮದುವೆಯನ್ನು ಗಟ್ಟಿಗೊಳಿಸುತ್ತಾರೆ. ಒಬ್ಬರನ್ನೊಬ್ಬರು ಅರ್ಥ್ಯಸಿಕೊಳ್ಳುವ ಮೂಲಕ ಪರಸ್ಪರ ಬಿನ್ನ ಬೇಧ ಬರದಂತೆ ನಡೆದುಕೊಂಡು ಪ್ರೀತಿಸಿದಾಗ ಯಾವ ಅಡೆ ತಡೆ ಬರಲಾರದಂತೆ ಬಾಳು ಸುಗುಮವಾಗಿ ನಡೆಯುತ್ತದೆ. ಮನೆ ಅಂದಾಗ ಒಂದೇರಡು ಸಣ್ಣಪುಟ್ಟ ತಪ್ಪುಗಳಾಗಲಿವೆ. ಅವೇಲ್ಲವನ್ನು ಸರಿಪಡಿಸಿಕೊಂಡು ಮುನ್ನೇಡೆದು ಬಾಳು ಬಂಗಾರ ಮಾಡಿಕಳ್ಳಬೇಕು ಎಂದರು.

ರೋಣದ ಗುಲಗಂಜಿ ಮಠದ ಡಾ.ಗುರುಪಾದ ಸ್ವಾಮಿಗಳು, ನಿಡಗುಂದಿಕೊಪ್ಪದ ಚನ್ನಮಲ್ಲಿಮಲ್ಲಿಕಾರ್ಜುನ, ಇಟಗಿಯ ಡಾ. ಗುರುಪಾದ ಶ್ರೀಗಳು, ಪುರಾಣ ಪ್ರವಚನಕಾರರಾದ ಇಟಗಿಯ ಡಾ.ಗುರುಶಾಂತ ಸ್ವಾಮಿಗಳು, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ವೀರಣ್ಣ ನಿಂಗೋಜಿ, ಮಹಾಂತೇಶ ಶಾಸ್ತ್ರೀಗಳು, ಶರಣಬಸಪ್ಪ ದಾನಕೈ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net