ದಲಿತ ಯುವಕನ ಮನೆಗೆ ಬೆಂಕಿ, ಎಂಟು ಜನರ ವಿರುದ್ಧ ಪ್ರಕರಣ ದಾಖಲು
Published on:
Copied
Follow Us
ಕೊಪ್ಪಳ : ಯಲಬುರ್ಗಾ ತಾಲೂಕಿನ ಕೋನಸಾಗರ ಗ್ರಾಮದಲ್ಲಿ ದಲಿತ ಯುವಕ ಮಣಿಕಂಟಯ್ಯ ಮನೆಗೆ ಅಪರಿಚಿತರು ಬೆಂಕಿ ಹಚ್ಚಿದ್ದು ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದಾರೆ. ಟನೆ ಸಂಬಂಧ ಯಲಬುರ್ಗಾ ಠಾಣೆಯಲ್ಲಿ ಎಂಟು ಜನರ ವಿರುದ್ಧ ಪ್ರಜರಣ ದಾಖಲಾಗಿದೆ.
ಸ್ವಂತ ಮನೆ ಕಾಮಗಾರಿ ಇರುವ ಕಾರಣ ಮಣಿಕಂಠ ಕುಟುಂಬಸ್ಥರು ಬಾಡಿಗೆ ಮನೆ ಪಡೆದು ವಾಸವಾಗಿದ್ದರು. ಹೊಲಕ್ಕೆ ಹೊಂದಿಕೊಂಡು ಮನೆಯಿದ್ದು, ಮುಂಭಾಗದಲ್ಲಿ ಚಪ್ಪರವಿತ್ತು. ಗರುರುವಾರ ಬೆಳಗ್ಗೆ 1 ಗಂಟೆಗೆ ಮೊಬೈಲ್ ಚಾರ್ಜ್ ಹಾಕಲೆಂದು ಮಣಿಕಂಠ ಎದ್ದಾಗ ಕಿಟಿಕಿಯಿಂದ ಬೆಂಕಿ ಕಾಣಿಸಿಕೊಂಡಿದೆ. ಗಾಬರಿಗೊಂಡು ಕೂಗಾಡಿದ್ದಾನೆ. ಪಕ್ಕದ ಮನೆಯಲ್ಲಿದ್ದ ಇವರ ಮಾವ ಮೌನೇಶ ಬಂದು ಬಾಹಿಲು ತೆಗೆದು ಮಣಿಕಂಠನನ್ನು ರಸಿದ್ದಾರೆ.
ಈ ವೇಳೆ 8 ಜನರು ಮನೆ ಸಮೀಪದಿಂದ ಓಡಿ ಹೋಗಿದ್ದಾರೆ. ಯಾರು, ಯಾವ ಕಾರಣಕ್ಕೆ ಬೆಂಕಿ ಹಚ್ಚಿದ್ದಾರೆಂದು ತಿಳಿದಿಲ್ಲ. ನನ್ನ ಮಾವ ಮೌನೇಶ ಹರಿಜನ ನಿತ್ಯ ಇಲ್ಲೇ ಮಲಗುತ್ತಿದ್ದ. ಆರೋಪಿಗಳಿಗೂ ಈತನಿಗೂ ಹಳೇ ದ್ವೇಷವಿದೆ. ಅದೇ ಕಾರಣಕ್ಕೆ ಅವರೇ ಬೆಂಕಿ ಹಾಕಿರಬಹುದೆಂದು ಅನುಮಾನವಿದೆ. ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ದೂರಿನದಲ್ಲಿ ಉಲ್ಲೇಖಿಸಿದ್ದಾನೆ.
ಸ್ಥಳಕ್ಕೆ ಎಸ್ಪಿ ಡಾ.ರಾಮ್ ಎಲ್.ಅರಸಿದ್ದಿ, ಸಿಪಿಐ ಮೌನೇಶ್ವರ ಮಾಲಿಪಾಟೀಲ್ ಭೇಟಿ ನೀಡಿ ಪರಿಶೀಲಿಸಿದರು. ಶಾಂತಿ ಕಾಪಾಡುವ ನಿಟ್ಟಿನಲ್ಲಿ ಮೂರು ಡಿಆರ್ ವಾಹನಗಳು, ಪೊಲೀಸರನ್ನು ನಿಯೋಜಿಸಲಾಗಿದೆ.