ಸಂಗನಾಳದಲ್ಲಿ ಬಾಲ್ಯವಿವಾಹ, ಪ್ರಕರಣ ದಾಖಲು

Published on

ಯಲಬುರ್ಗಾ (ಕೊಪ್ಪಳ): ಯಲಬುರ್ಗಾ ತಾಲೂಕಿನ ಸಂಗನಾಳ‌ ಗ್ರಾಮದಲ್ಲಿ ಬಾಲ್ಯವಿವಾಹ ನಡೆದಿದ್ದು, ವರ ಸೇರಿ ಇತರ ಆರೋಪಿಗಳ‌ ವಿರುದ್ಧ ಯಲಬುರ್ಗಾ ಠಾಣೆಯಲ್ಲಿ ಮಂಗಳವಾರ ಪ್ರಕರಣ ದಾಖಲಾಗಿದೆ.

ಅಪ್ರಾಪ್ತಳನ್ನು ಶರಣಪ್ಪ ಎಂಬಾತನೊಂದಿಗೆ ಸೋಮವಾರ ಮದುವೆ ಮಾಡಲಾಗಿದೆ. ವಿಷಯ ತಿಳಿದ ಅಧಿಕಾರಿಗಳು ಪರುಶೀಲನೆ ನಡೆಸಿದಾಗ ಬಾಲಕಿಗೆ 18 ವರ್ಷ ವಯಸ್ಸಾಗದಿರುವುದು ಪತ್ತೆಯಾಗಿದೆ.

ಗ್ರಾಪಂ, ಅಂಗನವಾಡಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಹಾಗೂ ಮಕ್ಕಳ‌ ಸಹಾಯವಾಣಿ ಸಿಬ್ಬಂದಿ ಭೇಟಿ ನೀಡಿ ಮಾಹಿತಿ ಖಚಿತಪಡಿಸಿದ್ದಾರೆ.

ಮದುವೆಗೂ ಮುನ್ನ ಬಾಲ್ಯ ವಿವಾಹ ಮಾಡದಂತೆ ತಿಳಿ ಹೇಳಲಾಗಿದೆ. ಆದರೂ ವಿವಾಹ ನೆರವೇರಿಸಿದ್ದಾರೆ ಎನ್ನಲಾಗಿದೆ.

ಗ್ರಾಪಂ ಪಿಡಿಒ ಸರ್ವಮಂಗಳ ನೀಡಿದ ದೂರಿನ ಅನ್ವಯ ಬಾಲ್ಯ ವಿವಾಹ ಮಾಡಿದ ವಧು-ವರನ ಪಾಲಕರು, ವರ, ಅರ್ಚಕ, ಪೆಂಡಾಲ್ ಹಾಕಿದವರು, ಲಗ್ನ ಪತ್ರಿಕೆ ಮುದ್ರಿಸಿದವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಬಾಲಕಿಯನ್ನು ಮುಂದಿನ ಪಾಲನೆ ಹಾಗೂ ಪೋಷಣೆಗೆ ಬಾಲ ಮಂದಿರಕ್ಕೆ ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net