ಜಾಗತಿಕ ಸಂವಹನದಲ್ಲಿ ಉಪಗ್ರಹ ವ್ಯವಸ್ಥೆ ಕಾರ್ಯಾಗಾರ

district koppal workshop communication degree collage koppal
Published on
ಕೊಪ್ಪಳ: ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆಂತರಿಕ ಗುಣಮಟ್ಟ ಭರವಸಾ ಕೋಶ ಹಾಗೂ ಭೌತಶಾಸ್ತ್ರ ವಿಭಾಗದ ಸಹಯೋಗದಲ್ಲಿ ಗುರುವಾರ ಜಾಗತಿಕ ಸಂವಹನದಲ್ಲಿ ಉಪಗ್ರಹ ವ್ಯವಸ್ಥೆಯ ಭೌತಶಾಸ್ತ್ರದ ತತ್ವಗಳು ಕುರಿತು ವಿದ್ಯಾರ್ಥಿಗಳಿಗೆ ಕಾರ್ಯಾಗಾರ ನಡೆಯಿತು.
     ಗದಗನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ವಿಶ್ವವಿದ್ಯಾಲಯದ ಅಧ್ಯಾಪಕ ಡಾ.ರವಿ.ಜೆ.ಡಿ. ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿ ನೀಡಿದರು. ಐಕ್ಯುಎಸಿ ಸಂಯೋಜಕರು ಹಾಗೂ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಡಾ.ಟಿ.ವಿ.ವಾರುಣಿ ಕಾರ್ಯಕ್ರಮದ ರೂಪುರೇಷೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
       ಕಾರ್ಯಾಗಾರ ಸಮಾರಂಭದ ಅಧ್ಯಕ್ಷತೆಯನ್ನು ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ.ವೈ.ಬಿ.ಅಂಗಡಿ ವಹಿಸಿದ್ದರು. ಭೌತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಸಿದ್ಧಲಿಂಗೇಶ ಹಮ್ಮಿಗಿ ಕಾರ್ಯಕ್ರಮ ಸಂಯೋಜಿಸಿ, ಅತಿಥಿಗಳನ್ನು ಪರಿಚಯಿಸಿದರು. ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ರಶ್ಮಿ. ಜಿ, ಮಾತನಾಡಿದರು.
    ಈ ವೇಳೆ ಬೋಧಕರಾದ ರವೀಂದ್ರ ಬಗಾಡೆ, ಪ್ರಭಾಕರ ಸಾಲಿಮಠ,  ಬಸಮ್ಮ ಮೇಟಿ, ಗಿರಿಜಾ ಮತ್ತು ವಿದ್ಯಾರ್ಥಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net