

ಕೊಪ್ಪಳ: ಜಾನಪದ ಸಂಸತಿ ಶ್ರೀಮಂತವಾಗಿರುವುದಕ್ಕೆ ಮಹಿಳೆಯರು ಕಾರಣ ಎಂದು ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಡಾ.ಜೀವನಸಾಬ್ ಬಿನ್ನಾಳ ಅಭಿಪ್ರಾಯಪಟ್ಟರು.
ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಜಾನಪದ ಉತ್ಸವ ಉದ್ಘಾಟಿಸಿ ಮಾತನಾಡಿದರು.
ಜನಪದ ಹಾಡು, ಒಗಟು, ಕಲೆ, ಸಂಸತಿ, ಹಾಸ್ಯ, ಗೀಗಿ ಪದ, ಲಾವಣಿ ಪದಗಳು ನಮ್ಮ ವೈಚಾರಿಕೆತೆ ಹೆಚ್ಚಿಸುತ್ತವೆ. ಜಾನಪದ ಒಂದು ಜ್ಞಾನಸಾಗರ. ಜಾನಪದ ಸೊಗಡು ಬಹಳ ಶ್ರೇಷ್ಠ. ಕಲೆ ಮತ್ತು ಸಂಸತಿಯನ್ನು ಜನರ ಬಳಿ ತೆಗದುಕೊಂಡು ಹೋಗಬೇಕು. ಜಾನಪದದಲ್ಲಿ ತತ್ವ, ನೀತಿ ಮತ್ತು ಆದರ್ಶ ಇದೆ. ಇದು ಕೇವಲ ರಂಜನಿಯವಲ್ಲ. ಜೀವನ, ಸಂಸತಿ ಮತ್ತು ಪರಂಪರೆ. ಜಾನಪದಕ್ಕೆ ಜಾತಿ, ಧರ್ಮ ಭೇದ&ಭಾವ ಇಲ್ಲದೇ ಎಲ್ಲರನ್ನೂ ಒಳಗೊಳ್ಳುತ್ತದೆ ಎಂದರು.
ಕಾಲೇಜು ಸಾಂಸತಿಕ ಟಕ ಸಂಚಾಲಕಿ ಡಾ.ಹುಲಿಗೆಮ್ಮ ಮಾತನಾಡಿ, ಜಾನಪದ ಸಂಸತಿಯನ್ನು ರಸಬೇಕು. ವೈಜ್ಞಾನಿಕ ಜೀವನ ಪದ್ಧತಿ ಜತೆಗೆ ನಮ್ಮ ಸಂಪ್ರದಾಯ ಕಾಪಾಡಿಕೊಳ್ಳಬೇಕಿದೆ. ಗ್ರಾಮೀಣ ಕಲೆ, ಕ್ರೀಡೆ, ಭಾಷೆ, ಉಡುಗಡೆಗಳನ್ನು ಉಳಿಸಿಕೊಳ್ಳೋಣ. ಸಂಸತಿಯಲ್ಲೂ ವೈಜ್ಞಾನಿಕ ಅಂಶಗಳಿವೆ ಎಂದು ತಿಳಿಸಿದರು.
ಕಾಲೇಜು ಪ್ರಾಚಾರ್ಯ ಡಾ.ಗಣಪತಿ ಲಮಾಣಿ ಮಾತನಾಡಿದರು. ಜಾನಪದ ಕಲಾವಿದರಾದ ಈರಮ್ಮ ಮುಧೋಳ, ಶಾಂತಮ್ಮ ಜಾನಪದ ಗೀತೆಗಳನ್ನು ಹಾಡಿ ರಂಜಿಸಿದರು. ಸಾಂಸತಿಕ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಪತ್ರಿಕೋದ್ಯಮ ವಿಭಾಗದಿಂದ ಮಹಿಳಾ ಟೈಮ್ಸ್ ಪ್ರಾಯೋಗಿಕ ಪತ್ರಿಕೆ ಬಿಡುಗಡೆ ಮಾಡಲಾಯಿತು.
ಉಪನ್ಯಾಸಕರಾದ ನಾಗರತ್ನ ತಮ್ಮಿನಾಳ, ಡಾ.ಗವಿಸಿದ್ದಪ್ಪ ಮುತ್ತಾಳ, ಡಾ.ಮಲ್ಲಿಕಾರ್ಜುನ, ಡಾ.ನರಸಿಂಹ, ಸುಮಿತ್ರಾ, ಶುಭ, ಸೌಮ್ಯ ಹಿರೇಮಠ, ಹನುಮಂತಪ್ಪ ಮೇಟಿ, ಶಿವಪ್ರಸಾದ್ ಹಾದಿಮನಿ, ಶ್ರೀಕಾಂತ್ ಸಿಂಗಾಪುರ, ಮಹೇಶ್ ಪೂಜಾರ್, ಮಂಜಪ್ಪ ಕುರ್ಕಿ ಇತರರಿದ್ರು.