ಬಾಡಿಗೆ ಕಟ್ಟಲಾಗದೆ ದೇವಾಲಯದಲ್ಲಿ ವಾಸವಾದ ಮಹಿಳೆ

district koppal women temple rent house
Published on

ಕೊಪ್ಪಳ: ನಗರದ ತಗ್ಗಿನಕೇರಿ ನಿವಾಸಿ ರತ್ನಾ ದೊಡ್ಡಮನಿ ಎಂಬ ಮಹಿಳೆ ಮನೆ ಬಾಡಿಗೆ ಕಟ್ಟಲು ಹಣವಿಲ್ಲದೇ ತಾಲೂಕಿನ ಭಾಗ್ಯನಗರದ ತಾಯಮ್ಮ ದೇವಿ ದೇವಸ್ಥಾನ ಬಳಿ ಮರದಡಿ ವಾಸವಾಗಿದ್ದಾರೆ.

ಕಳೆದ 4-5 ವರ್ಷದಿಂದ ತಗ್ಗಿನಕೇರಿಯಲ್ಲಿ ಬಾಡಿಗೆ ಮನೆಯಲ್ಲಿದ್ದರು. ಇಬ್ಬರು ಮಕ್ಕಳಿದ್ದು, ಪತಿ ಇಲ್ಲ. ಓರ್ವ ಪುತ್ರ ಬುದ್ಧಿಮಾಂಧ್ಯನಿದ್ದು, ಇನ್ನೊರ್ವ ಪೇಂಟಿಂಗ್​ ಕೆಲಸ ಮಾಡುತ್ತಾನೆ. ಆದರೆ, ಮನೆಗೆ ಬರದೇ ಸ್ನೇಹಿತರೊಂದಿಗಿದ್ದಾನೆ. ಇಬ್ಬರು ಮಕ್ಕಳಿದ್ದರೂ ರತ್ನಮ್ಮ ಅನಾಥರಾಗಿದ್ದಾರೆ. ಆರಂಭದಲ್ಲಿ ತರಕಾರಿ ವ್ಯಾಪಾರ ಮಾಡುತ್ತಿದ್ದ ಇವರು, ಬೇರೆಯವರ ಮನೆ ಮುಸುರಿ ತಿಕ್ಕಿ ಜೀವನ ಸಾಗಿಸುತ್ತಿದ್ದರು. ಕೊಪ್ಪಳದ ುಡ್​ಲ್ಯಾಂಡ್​, ಧರ್ಮಶಾಸ್ತ, ಸ್ವಾತಿ ಹೋಟೆಲ್​ಗಳಲ್ಲಿ ಕೆಲಸ ಮಾಡಿದ್ದಾರೆ. ಸದ್ಯ ಅನಾರೋಗ್ಯಕ್ಕೆ ತುತ್ತಾಗಿದ್ದು, ಕೆಲಸಕ್ಕೆ ಹೋಗುತ್ತಿಲ್ಲ. ಮನೆ ಬಾಡಿಗೆ ಕಟ್ಟಲೂ ಹಣವಿಲ್ಲದ್ದಕ್ಕೆ ಮಾಲೀಕರು ಮನೆ ಖಾಲಿ ಮಾಡಿಸಿದ್ದಾರೆ. ಭಾನುವಾರ ತಾಯಮ್ಮನ ಗುಡಿಬಳಿ ಸಾಮಾನು ಇಟ್ಟುಕೊಂಡು ಅಲ್ಲೇ ವಾಸವಾಗಿದ್ದಾರೆ.

ಬಿರು ಬಿಸಿಲು, ರಾತ್ರಿಯೂ ಒಂಟಿಯಾಗಿ ದಿನ ಕಳೆಯುತ್ತಿದ್ದಾರೆ. ಸಾರ್ವಜನಿಕರು ರತ್ನಮ್ಮ ಸ್ಥಿತಿ ಕಂಡು ಮರುಗುತ್ತಿದ್ದಾರೆ. 2023ರಲ್ಲಿ ನಿವೇಶನ ರಹಿತರಿಗೆ ನಿವೇಶನಕ್ಕೆ ಆಗ್ರಹಿಸಿ ನಡೆದ ಧರಣಿಯಲ್ಲಿ ರತ್ನಮ್ಮ ಭಾಗಿಯಾಗಿದ್ದರು. ಶಾಸಕ ರಾವೇಂದ್ರ ಹಿಟ್ನಾಳ ನಿವೇಶನ ನೀಡುವ ಭರವಸೆ ನೀಡಿದ್ದರು. ಆಗಲೇ ನಿವೇಶನ ಸಿಕ್ಕಿದ್ದರೆ ಗೂಡು ಕಟ್ಟಿಕೊಳ್ಳುತ್ತಿದ್ದೆ ಎಂದು ರತ್ನಮ್ಮ ಅಳಲು ತೋಡಿಕೊಂಡರು. ಸಾವಿರಾರು ನಿವೇಶನ ಹಂಚಿಕೆ ಮಾಡುವ ಜಿಲ್ಲಾಡಳಿತ, ಸ್ಥಳಿಯಾಡಳಿತಕ್ಕೆ ರತ್ನಮ್ಮ ಅವರ ಕೂಗು ಕೇಳದಂತಾಗಿರುವುದು ದುರಂತ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net