ಕೊಪ್ಪಳ: ಮನೆ ಮುಂದಿನ ಒಲೆ ಮೇಲೆ ಗಾಡಿ ಓಡಿಸಿ ಹಾಳು ಮಾಡಿದ ಟನೆಗೆ ಸಂಬಂಧಿಸಿದಂತೆ ಎರಡು ಕೋಮಿನವರ ನಡುವೆ ಗಲಾಟೆ ನಡೆದಿದ್ದು, ಮಹಿಳೆ ಹಾಗೂ ಆಕೆಯ ಕುಟುಂಬದವರ ಮೇಲೆ ಹಲ್ಲೆ ನಡೆದಿದೆ. ಟನೆ ಸಂಬಂಧ ನಾಲ್ವರ ವಿರುದ್ಧ ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಪ್ಪಳದ ಕುವೆಂಪು ನಗರದ ಸಲೀಂ ಮಂಡಲಗೇರಿ, ಮೌಲಾಸಾಬ್, ಸೈಬಾಜ್, ಅಲ್ಫಾಜ್ ಆರೋಪಿಗಳು. ವಿಜಯಲಕ್ಷಿ$್ಮ ಹಾಗೂ ಕುಟುಂಬದ ನಾಲ್ವರು ಹಲ್ಲೆಗೊಳಗಾದವರು. ಕುವೆಂಪು ನಗರದಲ್ಲಿ ಮನೆ ಪಕ್ಕದಲ್ಲಿ ಒಲೆ ನಿರ್ಮಿಸಿದ್ದು, ಯಾರೋ ಅದರ ಮೇಲೆ ಗಾಡಿ ಹತ್ತಿಸಿಕೊಂಡು ಹೋಗಿದ್ದಾರೆ. ಅಕ್ಕಪಕ್ಕದವರನ್ನು ವಿಚಾರಿಸಿದಾಗ ಗೊತ್ತಿಲ್ಲವೆಂದು ತಿಳಿಸಿದ್ದಾರೆ. ಸಲೀಂ ಮಂಡಲಗೇರಿ ಹಾಗೂ ಇತರರ ಮನೆ ಬಳಿ ಬಂದು ತಾನೇ ಗಾಡಿ ಹತ್ತಿಸಿದ್ದು, ಏನು ಮಾಡುವೆ ಎಂದು ಜಗಳ ತೆಗೆದಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಬಿಡಿಸಲು ಬಂದ ಮಗಳು, ಮಗ ವೀರಮಣಿಕಂಠ, ಶಿವಕುಮಾರ್ ಎಂಬುವರ ಮೇಲೆ ಹಲ್ಲೆ ಮಾಡಿದ್ದಾರೆ. ಸಂಜೆ ಗಲಾಟೆ ಬಗ್ಗೆ ವಿಚಾರಿಸಲು ತೆರಳಿದ ನನ್ನ ಗಂಡ ದೇವೇಂದ್ರಗೌಡನಿಗೂ ನಿಂದಿಸಿ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆಂದು ವಿಜಯಲಕ್ಷಿ$್ಮ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಾಗಿದೆ.