ಲಿಂಗ ತಾರತಮ್ಯ ಮಾಡುವುದು ಅಪರಾಧ

women empowerment workshop in koppal
ಕೊಪ್ಪಳದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಹಿಳೆಯರ ಸಂರಕ್ಷಣೆ ಕಾಯ್ದೆ- ಅನುಷ್ಠಾನ ಕುರಿತು ಸಂರಕ್ಷಣಾಧಿಕಾರಿಗಳು ಹಾಗೂ ಇತರ ಭಾಗಿದಾರರಿಗೆ ಗುರುವಾರ ಹಮ್ಮಿಕೊಂಡಿದ್ದ ತರತಬೇತಿ ಕಾರ್ಯಕ್ರಮವನ್ನು ತ್ವರಿತಗತಿ ಪೋಕ್ಸೋ ನ್ಯಾಯಾಲಯದ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಕುಮಾರ ಡಿ.ಕೆ.ಉದ್ಘಾಟಿಸಿದರು.ಹಿರಿಯ ಸಿವಿಲ್​ ನ್ಯಾಯಾಧೀಶ ದೇವೇಂದ್ರ ಪಂಡಿತ, ಡಿಎಚ್​ಒ ಡಾ.ಟಿ.ಲಿಂಗರಾಜು, ತಹಸೀಲ್ದಾರ್​ ವಿಠ್ಠಲ್​ ಚೌಗಲಾ, ತಾಪಂ ಇಒ ದುಂಡಪ್ಪ ತುರಾದಿ, ಸಿಡಿಪಿಒ ಜಯಶ್ರೀ ಆರ್​., ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪಿಒ ಗಂಗಪ್ಪ ಇದ್ದರು.
Published on

ಕೊಪ್ಪಳ: ಮಹಿಳೆ ಸಮಾಜ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾಳೆ. ಕೌಟುಂಬಿಕ ದೌರ್ಜನ್ಯ, ಹಿಂಸೆಗೆ ಒಳಗಾಗುವ ಮಹಿಳೆಯರು ಹಿಂಜರಿಯದೆ ನ್ಯಾಯ ಕೇಳಬೇಕು ಎಂದು ತ್ವರಿತಗತಿ ಪೋಕ್ಸೋ ನ್ಯಾಯಾಲಯದ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಕುಮಾರ ಡಿ.ಕೆ.ಹೇಳಿದರು.

ಮಹಿಳಾ, ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ನಗರದ ತಾಪಂ ಕಚೇರಿ ಸಭಾಂಗಣದಲ್ಲಿ ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ ಕಾಯ್ದೆ- ಅನುಷ್ಠಾನ ಕುರಿತು ಸಂರಕ್ಷಣಾಧಿಕಾರಿಗಳು ಹಾಗೂ ಇತರ ಭಾಗಿದಾರರಿಗೆ ಗುರುವಾರ ಹಮ್ಮಿಕೊಂಡಿದ್ದ ತರತಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಹಿಳೆ ಸಮಾಜದ ಬೆಳಕು. ಲಿಂಗ ತಾರತಮ್ಯ ಮಾಡುವುದು ಬೇಡ. ಅವರು ಪುರುಷರಂತೆ ಸಮಾನರು. ಅದನ್ನು ಎಲ್ಲರೂ ಅರಿಯಬೇಕು. ಮಹಿಳಾ ಕಾನೂನುಗಳ ಅರಿವು ಮೂಡಿಸಬೇಕು. ದೌರ್ಜನ್ಯ, ಹಿಂಸೆ ನಡೆದಲ್ಲಿ ತಕ್ಷಣ ಕಾನೂನು ರಕ್ಷಣೆ ಪಡೆಯಲು ಮುಂದಾಗಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ತಿಪ್ಪಣ್ಣ ಸಿರಸಗಿ ಮಾತನಾಡಿ, ಮಹಿಳೆಯರ ಸಂರಕ್ಷಣೆ ಮತ್ತು ಅಭಿವೃದ್ಧಿಗಾಗಿ ನಮ್ಮ ಇಲಾಖೆ ಸಹಕಾರ ಸದಾ ಇದೆ. ಮಹಿಳಾ ಸಬಲೀಕರಣಕ್ಕಾಗಿ ಅನೇಕ ಯೋಜನೆಗಳಿದ್ದು, ಅವುಗಳ ಸದುಪಯೋಗ ಪಡೆಯಬೇಕು ಎಂದರು.

ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ ಬಗ್ಗೆ ವಕೀಲ ಹನಮಂತರಾವ್​, ಲಿಂಗ ತಾರತಮ್ಯದ ಬಗ್ಗೆ ಯುನಿಸೆಫ್​ ಮಕ್ಕಳ ರಕ್ಷಣಾ ಯೋಜನೆ ರಾಘವೇಂದ್ರ ಭಟ್​ ಹಾಗೂ ಕಾಯ್ದೆ ಅನುಷ್ಠಾನದಲ್ಲಿ ಇಲಾಖೆ ಸಮನ್ವವದ ಬಗ್ಗೆ ಯುನಿಸೆಫ್​ ಮಕ್ಕಳ ರಕ್ಷಣಾ ಯೋಜನೆಯ ಹರೀಶ ಜೋಗಿ ಮಾತನಾಡಿದರು.

ಹಿರಿಯ ಸಿವಿಲ್​ ನ್ಯಾಯಾಧೀಶ ದೇವೇಂದ್ರ ಪಂಡಿತ, ಡಿಎಚ್​ಒ ಡಾ.ಟಿ.ಲಿಂಗರಾಜು, ತಹಸೀಲ್ದಾರ್​ ವಿಠ್ಠಲ್​ ಚೌಗಲಾ, ತಾಪಂ ಇಒ ದುಂಡಪ್ಪ ತುರಾದಿ, ಸಿಡಿಪಿಒ ಜಯಶ್ರೀ ಆರ್​., ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪಿಒ ಗಂಗಪ್ಪ, ಮಹಿಳಾ ಧ್ವನಿ ಶಿಕ್ಷಣ ಮತ್ತು ಗ್ರಾಮೀಣ ಕ್ಷೇಮಾಭಿವೃದ್ಧಿ ಸಂಸ್ಥೆಯ ಪ್ರಿಯದರ್ಶಿನಿ ಮುಂಡರಗಿಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net