ಮತದಾರರಪಟ್ಟಿ ಪರಿಷತ ಮಾಹಿತಿ ಇರಲಿ ನಿಖರ

district koppal voters list updation k p mohanraj
Published on

ಕೊಪ್ಪಳ: ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ತೆಗೆದು ಹಾಕುವಿಕೆ, ತಿದ್ದುಪಡಿ ಮಾಹಿತಿ ನಿಖರವಾಗಿರಲಿ ಎಂದು ಕೃಷ್ಣ ಜಲಭಾಗ್ಯ ನಿಗಮ ವ್ಯವಸ್ಥಾಪಕ ನಿರ್ದೇಶಕ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕೆ.ಪಿ.ಮೋಹನ್​ ರಾಜ್​ ಹೇಳಿದರು.

ನಗರದ ಜಿಪಂ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.

ಮತದಾರರು ಹೆಸರು ಸೇರ್ಪಡೆ, ಸ್ಥಳ ಬದಲಾವಣೆ, ತಿದ್ದುಪಡಿಗೆ ಆನ್​ಲೈನ್​ ಅರ್ಜಿ ಸಲ್ಲಿಸಿದಾಗ ಅವುಗಳನ್ನು ಸರಿಯಾಗಿ ಪರಿಶೀಲಿಸಿ. ಆಯಾ ತಾಲೂಕಿನಲ್ಲಿ ಎಷ್ಟು ಜನ ಹೊಸದಾಗಿ ಸೇರ್ಪಡೆ ಆದರು, ಹೊರ ಹೋದವರೆಷ್ಟು ಎಂಬ ಮಾಹಿತಿ ನಿಮ್ಮ ಬಳಿ ಇರಬೇಕು. ನಿಮ್ಮ ಕೆಲಸ ಸರಿಯಾಗಿ ಆಗಿದೆ ಎಂಬುದಕ್ಕೆ ನನಗೆ ಒಂದೆರೆಡು ಉದಾಹರಣೆಗಳನ್ನು ಒದಗಿಸಿ. ನಾನು ಮತದಾರರ ಮನೆಗೆ ತೆರಳಿ ಪರಿಶೀಲನೆ ಮಾಡುತ್ತೇನೆ. ಬಿಎಲ್​ಒಗಳು ಚುನಾವಣೆ ಸಮೀಪಿಸಿದಾಗ ಮಾತ್ರ ಕೆಲಸ ಮಾಡುತ್ತಾರೆ. ತಹಸೀಲ್ದಾರ್​ಗಳು ಈ ಬಗ್ಗೆ ನಿವಾವಹಿಸಿ ಎಂದು ಸೂಚಿಸಿದರು.

ಸಭೆ ಬಳಿಕ ಕುಕನೂರು ತಾಲೂಕಿನ ತಳಕಲ್​ ಗ್ರಾಮಕ್ಕೆ ಭೇಟಿ ನೀಡಿದ ಕಾರ್ಯದರ್ಶಿ, ಕೆಲ ಮನೆಗಳಿಗೆ ತೆರಳಿ ಹೊಸದಾಗಿ ಸೇರ್ಪಡೆ, ತಿದ್ದುಪಡಿ, ತೆಗೆದು ಹಾಕಿದ ಮಾಹಿತಿ ಸರಿಯಾಗಿದೆಯಾ ಎಂಬುದನ್ನು ಕೇಳಿ ತಿಳಿದರು. ಡಿಸಿ ನಲಿನ್​ ಅತುಲ್​, ಎಡಿಸಿ ಸಿದ್ರಾಮೇಶ್ವರ, ಎಸಿ ಕ್ಯಾ.ಮಹೇಶ ಮಾಲಗಿತ್ತಿ, ಚುನಾವಣಾ ತಹಸೀಲ್ದಾರ್​ ನಾಗರಾಜ ಹಾಗೂ ಎಲ್ಲ ತಹಸೀಲ್ದಾರ್​ಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net