ವಿಶ್ವಕರ್ಮ ಜಯಂತಿ ಸೆ.18ಕ್ಕೆ

district koppal viswakarma jayanthi meeting adc koppal sidrameswara
Published on

ಕೊಪ್ಪಳ: ಜಿಲ್ಲಾಡಳಿತದಿಂದ ವಿಶ್ವಕರ್ಮ ಜಯಂತಿಯನ್ನು ಸೆ.18ರಂದು ಅರ್ಥಪೂರ್ಣವಾಗಿ ಆಚರಿಸಲಾಗುವುದು. ಜಯಂತಿಗೆ ಬೇಕಾದ ಸಿದ್ಧತೆ ಮಾಡಿಕೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಉಪವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದರು.

ಸೆ.17ರಂದು ಕಲ್ಯಾಣ ಕರ್ನಾಟಕ ಉತ್ಸವ ಇರುವ ಕಾರಣ ಸೆ.18ರಂದು ವಿಶ್ವಕರ್ಮ ಜಯಂತಿ ಹಮ್ಮಿಕೊಳ್ಳಲಾಗುವುದು. ಜಿಲ್ಲಾ, ತಾಲೂಕು, ಗ್ರಾಪಂ ಮಟ್ಟದ ಎಲ್ಲ ಸರ್ಕಾರಿ ಕಚೇರಿ, ಶಾಲಾ&ಕಾಲೇಜುಗಳಲ್ಲಿ ಕಡ್ಡಾಯವಾಗಿ ಜಯಂತಿ ಆಚರಿಸಿ. ಜಿಲ್ಲಾ ಕೇಂದ್ರದಲ್ಲಿ ಸಂಬಂಧಿಸಿದ ಅಧಿಕಾರಿಗಳು ಜಯಂತಿ ಆಚರಣೆಗೆ ಕ್ರಮ ಕೈಗೊಳ್ಳಿ. ಸೆ.18ರ ಬೆಳಗ್ಗೆ ಗಂಟೆಗೆ ನಗರದ ಸಿರಸಪ್ಪಯ್ಯನ ಮಠದ ಆವರಣದಿಂದ ಗಡಿಯಾರ ಕಂಬ ಮಾರ್ಗವಾಗಿ ಸಾಹಿತ್ಯ ಭವನದವರೆಗೆ ವಿಶ್ವಕರ್ಮ ಅವರ ಭಾವಚಿತ್ರ ಮೆರವಣಿಗೆ ಇರಲಿದೆ. 10.30ಕ್ಕೆ ಸಾಹಿತ್ಯ ಭವನದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ. ವಿಶೇಷ ಉಪನ್ಯಾಸ, ಪ್ರತಿಭಾವಂತರಿಗೆ ಸನ್ಮಾನ ಮಾಡಲಾಗುವುದು ಎಂದರು.

ಡಾ.ಬಿ.ಆರ್​.ಅಂಬೇಡ್ಕರ್​ ಅಭಿವೃದ್ಧಿ ನಿಗಮ ಜಿಲ್ಲಾ ವ್ಯವಸ್ಥಾಪಕಿ ಪುಷ್ಪಲತಾ, ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ್​, ವಿಶ್ವಕರ್ಮ ಸಮುದಾಯ ಜಿಲ್ಲಾಧ್ಯಕ್ಷ ನಾಗೇಶ ಕುಮಾರ್​ ಕಂಸಾಳ, ನಿಗಮ ಸದಸ್ಯ ದೇವೇಂದ್ರಪ್ಪ ಬಡಿಗೇರ್​ ರಾಜೂರು, ಪ್ರಮುಖರಾದ ಈಶಪ್ಪ ಬಡಿಗೇರ್​ ನರಸಾಪುರ, ರುದ್ರಪ್ಪ ಬಡಿಗೇರ್​, ಗುರುಮೂರ್ತಿ ಬಡಿಗೇರ್​, ಶಂಕ್ರಪ್ಪ ತಿಮ್ಮರಗುದ್ದಿ, ವೀರೇಶ ಕಾರಟಗಿ, ದೇವಪ್ಪ ಬಡಿಗೇರ್​ ಹಲಗೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net