ಅಂತಾರಾಷ್ಟ್ರೀಯ ಯೋಗ ದಿನಾಚರಣೆ

Published on

ಕೊಪ್ಪಳ: ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಹಾಗೂ ಕೆ.ಎಸ್​.ಆಸ್ಪತ್ರೆ, ಕೆ.ಎಸ್​.ನರ್ಸಿಂಗ್​ ಕಾಲೇಜು ಸಹಯೋಗದಲ್ಲಿ ಜೂ.21ರಂದು ಪ್ರತಿ ವರ್ಷದಂತೆ ಈ ವರ್ಷವೂ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಮ್ಮಿಕೊಳ್ಳಲಾಗಿದೆ.

ಜೂ.21ರಂದು ಶನಿವಾರ ಬೆಳಗ್ಗೆ 7.30 ಗಂಟೆಗೆ ಕೊಪ್ಪಳದ ಎಂ.ಪಿ.ಪ್ಯಾಲೇಸ್​ನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ಸ್ವಾಮಿ ಚೈತನ್ಯಾನಂದ ಮಹಾರಾಜ್​ ಸಾನ್ನಿಧ್ಯವಹಿಸುವರು. ಯೋಗ ಪರಿಣಿತ ವೀರಯ್ಯ ಒಂಟಿಗೋಡಿಮಠ, ಕೆ.ಎಸ್​.ಆಸ್ಪತ್ರೆ ಮುಖ್ಯಸ್ಥ ಡಾ.ಬಸವರಾಜ ಕ್ಯಾವಟರ್​ ಅತಿಥಿಯಾಗಿ ಭಾಗಿಯಾಗುವರು.

ಕೆ.ಎಸ್​.ಆಸ್ಪತ್ರೆ ಸಿಬ್ಬಂದಿ, ನರ್ಸಿಂಗ್​ ಕಾಲೇಜು ವಿದ್ಯಾರ್ಥಿಗಳು, ನ್ಯಾಷನಲ್​ ಪ್ಯಾರಾ ಮೆಡಿಕಲ್​ ಕಾಲೇಜು ವಿದ್ಯಾರ್ಥಿಗಳು, ಮುನಿರಾಬಾದ್​ ಐಆರ್​ಬಿ, ಕೆಎಸ್​ಆರ್​ಟಿಸಿ ಸಿಬ್ಬಂದಿ ಯೋಗದಲ್ಲಿ ಭಾಗಿಯಾಗುವರು. ಯೋಗದಲ್ಲಿ ಭಾಗಿಯಾದ ಅತಿ ಕಿರಿಯ ಹಾಗೂ ಅತಿ ಹಿರಿಯ ವ್ಯಕ್ತಿಗೆ ವಿಶೇಷ ಉಡುಗೊರೆ ನೀಡಲಾಗುವುದು. ಜತೆಗೆ ಭಾಗಿಯಾದ ಮೂವರು ಅದೃಷ್ಟಶಾಲಿಗಳನ್ನು ಲಕ್ಕಿ ಡ್ರಾ ಮೂಲಕ ಆಯ್ಕೆ ಮಾಡಿ ಬಹುಮಾನ ನೀಡಲಾಗುವುದು. ಭಾಗಿಯಾಗುವವರಿಗೆ ಟಿ ಶರ್ಟ್​ ಹಾಗೂ ಬೆಳಗಿನ ಉಪಾಹಾರ ವ್ಯವಸ್ಥೆ ಇರಲಿದೆ. ಸಾರ್ವಜನಿಕರು ಮುಕ್ತವಾಗಿ ಭಾಗಿಯಾಗಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net