ಸುಲಿಗೆಕೋರರಿಗೆ 3.6 ವರ್ಷ ಕಠಿಣ ಜೈಲು ಶಿಕ್ಷೆ

Published on

ಕೊಪ್ಪಳ: ಮಹಿಳೆ ಕುತ್ತಿಗೆಯಲ್ಲಿನ ಚಿನ್ನದ ಸರ ಸುಲಿಗೆ ಮಾಡಿದ್ದ ಇಬ್ಬರು ಅಪರಾಧಿಗಳಿಗೆ 3.6 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ನಗರದ ಸಿಜೆಎಂ ನ್ಯಾಯಾಲಯ ಆದೇಶಿಸಿದೆ.

ಮಹಾರಾಷ್ಟ್ರದ ನಭಿ ಅಲಿ ತಂದೆ ಗರೀಬ್​ ಹುಸೇನ್​, ಬಾಹರ ಶಿಕ್ಷೆಗೆ ಗುರಿಯಾದವರು. 2022ರ ಆಗಸ್ಟ್​ 27ರಂದು ಕೊಪ್ಪಳದ ಪದಕಿ ಲೇಔಟ್​ನಲ್ಲಿ ನಭಿಅಲಿ ಹಾಗೂ ಜಹಾರ ಅಬ್ಬಾಸ ಎಂಬುವರು ರಮಾ ಗಂಡ ಮೋಹನ್​ ರಾವ್​ ಎಂಬ ಮಹಿಳೆ ಮೇಲೆ ಹಲ್ಲೆ ಮಾಡಿ ಕೊರಳಲ್ಲಿದ್ದ 40 ಗ್ರಾಂ ತೂಕದ ಮಾಂಗಲ್ಯ ಸರ, 50 ಗ್ರಾಂ ತೂಕದ ಇನ್ನೊಂದು ಸರ ಕಿತ್ತುಕೊಂಡು ಬೈಕ್​ನಲ್ಲಿ ಪರಾರಿಯಾಗಿದ್ದರು. ನಂತರ ಬಾಹರ ಎಂಬಾರ ಎಂಬುವರು ಮಧ್ಯಪ್ರದೇಶದ ಭೂಪಾಲನ ಬಂಗಾರ ವ್ಯಾಪಾರಿ ದೀಪಕ ಜೈನ್​ ಎಂಬಾತನಿಗೆ ಮಾರಾಟ ಮಾಡಿದ್ದರು.

ಈ ಸಂಬಂಧ ನಗರಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ನಡೆಸಿದ್ದರು. ನಗರಠಾಣೆ ಪಿಐ ಆಗಿದ್ದ ಸಂತೋಷ ಹಳ್ಳೂರು, ಪಿಎಸ್​ಐ ಉಮೆರಾಬಾನು 40 ಗ್ರಾಂ ಬಂಗಾರ ಸರ ವಶಕ್ಕೆ ಪಡೆದು ಪ್ರರಕಣದಲ್ಲಿ ನಭಿಅಲಿ ಹಾಗೂ ಬಾಹರ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಸಿಜೆಎಂ ನ್ಯಾಯಾಧೀಶ ಮಹಾಂತೇಶ ಎಸ್​. ದರಗದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗಳನ್ನು ಅಪರಾಧಿಗಳೆಂದು ತೀರ್ಮಾನಿಸಿದರು.

ಇಬ್ಬರು ಅಪರಾಧಿಗಳಿಗೆ 3.6 ವಷ್​ ಕಠಿಣ ಜೈಲು ಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕ ವಸಂತ ವಾದ ಮಂಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net