ಕೊಪ್ಪಳ ಪಶು ಇಲಾಖೆ ಖಾಲಿ ಖಾಲಿ

veterinary department in koppal doctors shortfall farmers suffer
ಕೊಪ್ಪಳದಲ್ಲಿರುವ ಪಶುಪಾಲನಾ ಇಲಾಖೆ ಪಾಲಿ ಕ್ಲಿನಿಕ್​.
Published on
  • ಶೇ.58ರಷ್ಟು ಹುದ್ದೆಗಳಲ್ಲಿ ವೆಕೆನ್ಸಿ ರೈತರು
  • ಜಾನುವಾರುಗಳಿಗೆ ತಪ್ಪದ ಪರದಾಟ

ಕೊಪ್ಪಳ: ಜಿಲ್ಲೆಯಲ್ಲಿ ಪಶು ಇಲಾಖೆಯಲ್ಲಿ ಪಶು ವೈದ್ಯರು ಸೇರಿ ಇತರ ಅಧಿಕಾರಿಗಳ ಕೊರತೆ ಬಹುವಾಗಿ ಕಾಡುತ್ತಿದೆ. ಗ್ರಾಮೀಣ ಭಾಗದಲ್ಲಿ ವೈದ್ಯರಿಲ್ಲದ ಕಾರಣ ರೈತರು, ಜಾನುವಾರುಗಳು ಸಂಕಷ್ಠ ಎದುರಿಸುವುದು ಮುಂದುವರೆದಿದೆ.

ಜಿಲ್ಲೆಯ ಕೃಷಿ ಪ್ರಧಾನವಾಗಿದ್ದು ಜಾನುವಾರುಗಳು ಅಧಿಕ ಸಂಖ್ಯೆಯಲ್ಲಿವೆ. ಕುರಿ ಸಾಕಣೆ, ಕೋಳಿ ಾರಂಗಳು ದಿನ ಕಳೆದಂತೆ ಹೆಚ್ಚುತ್ತಿವೆ. ಮುಂಗಾರು ಆರಂಭವಾಗಿದ್ದು, ಕೃಷಿ ಚಟುವಟಿಕೆಗಳು ಚುರುಕು ಪಡೆದಿವೆ. ಜಾನುವಾರುಗಳ ಬಳಕೆ ಹೆಚ್ಚಲಿದ್ದು, ಮಳೆಗಾಲ ಆರಂಭವಾಗಿದ್ದರಿಂದ ವಿವಿಧ ಕಾಯಿಲೆಗಳು ಬರುವುದು ಸಹಜ. ಕಾಲುಬಾಯಿ ರೋಗ, ನೀಲಿ ನಾಲಿಗೆ ರೋಗ, ಕಾಲು ಕೊಳಕು ರೋಗಗಳು ಕಾಣಿಸಿಕೊಳ್ಳಲಿವೆ. ಆದರೆ, ಜಿಲ್ಲೆಯಲ್ಲಿ ಪಶು ವೈದ್ಯಾಧಕಾರಿಗಳು, ಚಿಕಿತ್ಸಕರ ಕೊರತೆ ಬಹುವಾಗಿ ಕಾಡುತ್ತಿದೆ. ಪ್ರತಿ ವರ್ಷವೂ ವೈದ್ಯಾಧಿಕಾರಿಗಳು ಆಗಮಿಸಲಿದ್ದಾರೆಂದು ಜನಪ್ರತಿನಿಧಿಗಳು, ಅಧಿಕಾರಿಗಳು ಭರವಸೆ ನೀಡುವುದು ಮುಂದುವರೆದಿದೆ.

ವಾಸ್ತವವಾಗಿ ಅಧಿಕಾರಿಗಳು ಜಿಲ್ಲೆಯಿಂದ ಬೇರೆಡೆ ವರ್ಗವಾಗಿ ತೆರಳುವುದು ಮುಂದುವರೆದಿದೆ. ಪರಿಣಾಮ ಗ್ರಾಮೀಣ ಭಾಗದಲ್ಲಿ ರೈತರು ಜಾನುವಾರು ಚಿಕಿತ್ಸೆಗೆ ಪರದಾಡುವುದು ಮುಂದುವರೆದಿದೆ. ಓರ್ವ ವೈದ್ಯಾಧಿಕಾರಿಗೆ ನಾಲ್ಕೆದು ಚಿಕಿತ್ಸಾಲಯಗಳ ಪ್ರಭಾರವಹಿಸಲಾಗಿದೆ. ಇದರಿಂದ ಒಂದೆಡೆ ವೈದ್ಯಾಧಿಕಾರಿಗಳು ಸಿಗುವುದು ಕಷ್ಟವಾಗುತ್ತಿದೆ. ಕೆಲವೆಡೆ ವೈದ್ಯರು ಇರುವ ಕಡೆಗೆ ರೈತರು ಜಾನುವಾರುಗಳನ್ನು ಕರೆದುಕೊಂಡು ಹೋಗಬೇಕಿದೆ. ಕುರಿ, ಮೇಕೆ ಸತ್ತಲ್ಲಿ ಮರಣೋತ್ತರ ಪರೀೆ ನಡೆಸಲು ತಾಲೂಕು ಅಥವಾ ಜಿಲ್ಲಾ ಕೇಂದ್ರಗಳಿಗೆ ಕಳೆಬರ ಹೊತ್ತು ಬರುವ ಸ್ಥಿತಿ ಇದೆ. ಮತ್ತೊಂದೆಡೆ ಸಂಚಾರಿ ಪಶು ಚಿಕಿತ್ಸಾಲಯಗಳನ್ನು ಆರಂಭಿಸಿದ್ದು, ಅವುಗಳು ಕೊಂಚ ಆಸರೆಯಾದರೂ ಸಮಸ್ಯೆಗಳು ಪೂರ್ಣ ಪ್ರಮಾಣದಲ್ಲಿ ಪರಿಹಾರವಾಗಿಲ್ಲ.

ಜಿಲ್ಲೆಯಲ್ಲಿ 2,31,413 ದನ, 63,467 ಎಮ್ಮೆ, 6,25,367 ಕುರಿಗಳು, 1,72,578 ಮೇಕೆ, 40,08,826 ಕೋಳಿಗಳಿವೆ. ಶಸ್ತ್ರಚಿಕಿತ್ಸೆ ಹಾಗೂ ಹೆಚ್ಚಿನ ಚಿಕಿತ್ಸೆಗಾಗಿ ಒಂದು ಪಾಲಿ ಕ್ಲಿನಿಕ್​, 18 ಪಶು ಆಸ್ಪತ್ರೆ, 52 ಪಶು ಚಿಕಿತ್ಸಾಲಯಗಳು, 10 ಪ್ರಾಥಮಿಕ ಪಶು ಚಿಕಿತ್ಸಾಲಯಗಳನ್ನು ಆರಂಭಿಸಲಾಗಿದೆ. ಪಶು ಸಹಾಯಕ ನಿರ್ದೇಶಕರು, ಮುಖ್ಯ ಪಶು ವೈದ್ಯಾಧಿಕಾರಿಗಳು ಹಾಗೂ ಹಿರಿಯ ಪಶು ವೈದ್ಯಾಧಿಕಾರಿಗಳು ಸೇರಿ 79 ಎ ಗ್ರೇಡ್​ ಹುದ್ದೆಗಳು ಮಂಜೂರಾಗಿವೆ. ಇವುಗಳಲ್ಲಿ ಕೇವಲ 29 ಭರ್ತಿಯಾಗಿದ್ದು, 50 ಹುದ್ದೆಗಳು ಖಾಲಿಯಾಗಿವೆ. ಇವರು ಅಧಿಕಾರಿಗಳಿಗೆ ಹೆಚ್ಚುವರಿ ಕಾರ್ಯಭಾರ ಹೆಚ್ಚಿದೆ.

ಜಾನುವಾರು ಅಭಿವೃದ್ಧಿ ಅಧಿಕಾರಿ, ಸಹಾಯಕ ಆಡಳಿತ ಅಧಿಕಾರಿ ಒಳಗೊಂಡು 6 ಬಿ ಗ್ರೇಡ್​ ಹುದ್ದೆಗಳಿದ್ದು, ನಾಲ್ಕು ಭರ್ತಿಯಾಗಿದ್ದು, ಎರಡು ಖಾಲಿ ಉಳಿದಿವೆ. ಪಶು ಪರೀಕ್ಷಕರು ಟೆಕ್ನಿಷಿಯನ್ಸ್​, ಆಡಳಿತಾತ್ಮಕ ಸಿಬ್ಬಂದಿ ಒಳಗೊಂಡು 126 ಹುದ್ದೆಗಳಿದ್ದು, 71ರಲ್ಲಿ ಅಧಿಕಾರಿಗಳಿದ್ದರೆ, 55 ಖಾಲಿ ಇವೆ. ಇನ್ನು 150 ಡಿ ಗ್ರೂಪ್​ ಹುದ್ದೆಗಳಲ್ಲಿ 42ರಲ್ಲಿ ಕಾಯಂ ನೌಕರರಿದ್ದರೆ 108 ಖಾಲಿ ಉಳಿದಿವೆ. ಒಟ್ಟು 361 ಹುದ್ದೆಗಳಲ್ಲಿ 146 ಭರ್ತಿಯಾಗಿದ್ದರೆ, 215 ಹುದ್ದೆಗಳು ಖಾಲ ಉಳಿದಿವೆ. ಕೆಲವೆಡೆ ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲಾಗಿದೆ. ಬಹುತೇಕ ಕಡೆಗಳಲ್ಲಿ ಡಿ ಗ್ರೂಪ್​ ಸಿಬ್ಬಂದಿಯೇ ಆಸ್ಪತ್ರೆ, ಚಿಕಿತ್ಸಾಲಯ ನೋಡಿಕೊಂಡರೆ, ಕೆಲವೆಡೆ ವೈದ್ಯಾಧಿಕಾರಿಗಳೇ ಎಲ್ಲ ಕೆಲಸ ಮಾಡುವ ಸ್ಥಿತಿ ನಿರ್ಮಾಣವಾಗಿದೆ.

ಕೊಪ್ಪಳ, ಕುಷ್ಟಗಿಯಲ್ಲಿ ಕೊರತೆ ಹೆಚ್ಚು
ಜಿಲ್ಲೆಯ ಕೊಪ್ಪಳ, ಕುಷ್ಟಗಿ ತಾಲೂಕುಗಳಲ್ಲಿ ಉಳಿದೆಲ್ಲ ತಾಲೂಕುಗಳಿಗಿಂತ ಪಶು ವೈದ್ಯಾಧಿಕಾರಿಗಳ ಕೊರತೆ ಹೆಚ್ಚಿದೆ. ಕೊಪ್ಪಳ ತಾಲೂಕಿನಲ್ಲಿ ಪಶು ಆಸ್ಪತ್ರೆ, ಚಿಕಿತ್ಸಾಲಯ, ಪ್ರಾಥಮಿಕ ಪಶು ಚಿಕಿತ್ಸಾಲಯಗಳು ಸೇರಿ 20, ಕುಷ್ಟಗಿ ತಾಲೂಕಿನಲ್ಲಿ 19 ಕೇಂದ್ರಗಳಿವೆ. ಆದರೆ, ಕೇವಲ ಇಬ್ಬರೇ ವೈದ್ಯಾಧಿಕಾರಿಗಳಿದ್ದಾರೆ. ಒಬ್ಬೊಬ್ಬರಿಗೆ 6&7 ಕೇಂದ್ರಗಳ ಪ್ರಭಾರವಹಿಸಲಾಗಿದೆ. ಇದರಿಂದ ಅಧಿಕಾರಿಗಳಿಗೆ ಒತ್ತಡವೂ ಹೆಚ್ಚಿದ್ದು, ಮತ್ತೊಂದೆಡೆ ರೈತರಿಗೂ ಸಕಾಲಕ್ಕೆ ಸೇವೆ ದೊರೆಯುವಲ್ಲಿಯೂ ವಿಳಂಬವಾಗುತ್ತಿದೆ. ಸರ್ಕಾರ 2019ರಲ್ಲಿ 400 ಪಶು ವೈದ್ಯಾಧಿಕಾರಿಗಳ ನೇಮಕ ಪ್ರಕ್ರಿಯೆ ನಡೆಸಿದರೂ ಪೂರ್ಣಗೊಂಡಿಲ್ಲ. ಗುತ್ತಿಗೆ ಆಧಾರದಲ್ಲಿ ನೇಮಕಾತಿಗೂ ಅನುಮತಿ ನೀಡಿಲ್ಲ.

ಜಿಲ್ಲೆಯಲ್ಲಿ ಪಶು ವೈದ್ಯಾಧಿಕಾರಿಗಳ ಕೊರತೆ ಇರುವುದು ನಿಜ. ಇದ್ದ ಅಧಿಕಾರಿಗಳಿಗೆ ಹೆಚ್ಚುವರಿ ಪ್ರಭಾರ ವಹಿಸಿದ್ದೇವೆ. ರೈತರಿಗೆ ತೊಂದರೆ ಆಗದಂತೆ ನಿರ್ವಹಿಸುತ್ತಿದ್ದೇವೆ. ಸರ್ಕಾರ 400 ಪಶು ವೈದ್ಯಾಧಿಕಾರಿಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕಕ್ಕೆ ಸರ್ಕಾರ ಅನುಮತಿಸುವ ನಿರೀೆ ಇದೆ. ಆದಲ್ಲಿ ನೇಮಕಾತಿಗೆ ಅನುಕೂಲವಾಗಲಿದೆ. ಡಾ.ಎಂ.ಪಿ.ಮಲ್ಲಯ್ಯ. ಪಶು ಪಾಲನಾ ಇಲಾಖೆ ಉಪ ನಿರ್ದೇಶಕ ಕೊಪ್ಪಳ.

ಡಾ.ಎಂ.ಪಿ.ಮಲ್ಲಯ್ಯ. ಪಶು ಪಾಲನಾ ಇಲಾಖೆ ಉಪ ನಿರ್ದೇಶಕ ಕೊಪ್ಪಳ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net